ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ:ಪರೀಶೀಲನೆ

District Collector T. Bhubalan visit to Jawahar Navodaya Vidyalaya: Inspection

ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ:ಪರೀಶೀಲನೆ 

ವಿಜಯಪುರ 19:  ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರ ಭೇಟಿ ನೀಡಿ, ಸಂಬಂಧಿಸಿದ ಅಲ್ಲಿನ ಸ್ಥಿತಿಗತಿಗಳ ಕುರಿತು ಪರೀಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. 

ವಿದ್ಯಾಲಯದ ಸಲಹಾ ಸಮಿತಿ ಸಭೆ ನಡೆಸಿದ ಅವರು, ವಿದ್ಯಾಲಯದ ಬೋಧನಾ ಗುಣಮಟ್ಟವನ್ನು ಹೆಚ್ಚಿಸಿ ಫಲಿತಾಂಶ ಹೆಚ್ಚಳಕ್ಕೆ            ಕ್ರಮ ವಹಿಸಬೇಕು. ಮಕ್ಕಳ ಸವಾಂರ್ಗೀಣ ವ್ಯಕ್ತಿತ್ವ ಬೆಳವಣಿಗೆ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ,           ಮಕ್ಕಳ ಕೌಶಲ್ಯತೆಯನ್ನು ಹೆಚ್ಚಿಸಲು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಅಲ್ಲಿನ ವಸತಿ ಸೌಲಭ್ಯದ ಉನ್ನತೀಕರಣಕ್ಕೆ ಕ್ರಮವಹಿಸಬೇಕು. ಆವರಣದ ಸೌಂದರ್ಯಿಕರಣ, ಭೋಜನಾಲಯದ ಸ್ವಚ್ಚತೆ ಹಾಗೂ ಶುಚಿತ್ವಕ್ಕೆ ಆದ್ಯತೆ, ವಿದ್ಯಾಲಯದ 10ನೇ             ಹಾಗೂ 12ನೇ ತರಗತಿಯ ಫಲಿತಾಂಶ ಮತ್ತಷ್ಟು ಹೆಚ್ಚಳಕ್ಕೆ ಕ್ರಮವಹಿಸಲು, ಆಟದ ಮೈದಾನದ ಅಭಿವೃದ್ಧಿ, ವಿದ್ಯಾಲಯಕ್ಕೆ ಅಗತ್ಯವಿರುವ ಮೂಲಸೌಲಭ್ಯ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು, 200ಮೀಟರ್ ಓಟದ ಟ್ರ್ಯಾಕ್ ಹಾಗೂ ಬಾಸ್ಕೆಟ್ ಬಾಲ್ ಆಟದ ಅಂಗಣದ ಕುರಿತಾಗಿ ಆಟದ ಮೈದಾನ ಅಭಿವೃದ್ಧಿಪಡಿಸುವಂತೆ ಅವರು ಸೂಚನೆ ನೀಡಿದರ ಈ ಸಂದರ್ಭದಲ್ಲಿ ವಿದ್ಯಾಲಯದ ಪ್ರಾಂಶುಪಾಲರಾದ ಡಿ ಪಿ. ತಾಯಡೆ, ವಿದ್ಯಾಲಯದ ಶ್ರೀಮತಿ ಅಂಜಲಿ, ಅಡಿವೆಪ್ಪ ಇಟಗಿ ಮಂಜುನಾಥ ಬಲಕುಂದಿ, ಜಗದೀಶ ಪಾಟೀಲ್ ಸೇರಿದಂತೆ ಇತರ ಅಧಿಕಾರಿಗಳು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.