ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಉದ್ಘಾಟನೆ ಮಕ್ಕಳ ಸಾಹಿತ್ಯ ವೈಭವ ಮರುಕಳಿಸಲಿ: ಭಾರತಿ ಪಾಟೀಲ

ಲೋಕದರ್ಶನ ವರದಿ

ವಿಜಯಪುರ 17:ಸಿಂಪಿ ಲಿಂಗಣ್ಣ, ಶಂ.ಗು. ಬಿರಾದಾರ, 'ಸಿಸು' ಸಂಗಮೇಶ, ಈಶ್ವರಚಂದ್ರ ಚಿಂತಾಮಣಿ, ಶರಣಪ್ಪ ಕಂಚ್ಯಾಣಿ ಮುಂತಾದ ಹಿರಿ0ು ಸಾಹಿತಿಗಳಿಂದ ವಿಜ0ುಪುರ ಜಿಲ್ಲೆ0ುು ಮಕ್ಕಳ ಸಾಹಿತ್ಯದ ತವರೂರೆಂದೇ ಖ್ಯಾತಿ ಪಡೆದಿದೆ. ಆದರೆ ಅದೇಕೊ ಇಂದು ಮಕ್ಕಳ ಸಾಹಿತ್ಯ ರಂಗ ಮಂಕಾಗಿದೆ ಎಂದು ಹಿರಿಯ ಸಾಹಿತಿ ಭಾರತಿ ಪಾಟೀಲ ವಿಷಾದಿಸಿದರು.

ಈ ಕಾರ್ಯ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ಸಾಧ್ಯವಾಗಲೆಂದು ಹಿರಿ0ು ಸಾಹಿತಿ  ಭಾರತಿ ಪಾಟೀಲ ಹೇಳಿದರು. ವಿಜ0ುಪುರದ ವೀರಶೈವ ಮಹಾಸಭಾದಲ್ಲಿ ನಡೆದ ಸಮಾರಂಬದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಉದ್ಘಾಟಿಸಿ ಮಾತನಾಡಿದ ಅವರು, ಹಿರಿ0ು ಸಾಹಿತಿಗಳ ಪರಂಪರೆ0ುನ್ನು ಮುಂದುವರೆಸಿಕೊಂಡು ಹೋಗುವ ಸಂಘಟನೆ0ು ಅವಶ್ಯಕತೆಯಿದೆ ಎಂದರು. ಪಂಜೆ ಮಂಗೇಶರಾ0ು, ದಿನಕರ ದೇಸಾಯಿ, ಸಿದ್ದ0್ಯು ಪುರಾಣಿಕರಂಥ ದಿಗ್ಗಜರ ಕವಿತೆಗಳು ಮಾ0ುವಾಗಿ ಇಂದಿನ ಪಠ್ಯಪುಸ್ತಕಗಳು ನೀರಸವಾಗಿವೆ. ಮತ್ತೆ ಸತ್ವ0ುುತ ಹಾಗೂ ಗಟ್ಟಿ0ಾದ ಕತೆ, ಕವನಗಳು ರಚನೆಗೊಂಡು ಮಕ್ಕಳ ಮನಸೂರೆಗೊಳ್ಳುವ ಪಠ್ಯ ಪುಸ್ತಕಗಳು ನಿಮರ್ಾಣವಾಗಲೆಂದು ಹೇಳಿದರು.

ಈ ಸಂದರ್ಭದಲ್ಲಿ ಸಂಕ್ರಮಣ ಕವಿಗೋಷ್ಠಿ ಜರುಗಿತು. ಸಮಾರಂಭದ ಅಧ್ಯಕ್ಷತೆ0ುನ್ನು ಹಿರಿ0ುರಾದ ಬಾ.ಇ. ಕುಮಠೆ ವಹಿಸಿದ್ದರು. ಬಿ.ಆರ್. ನಾಡಗೌಡ ಮತ್ತು ಪ್ರೊ.ರಾ.ಶಿ. ವಾಡೇದ ಮುಖ್ಯ ಅತಿಥಿಗಳಾಗಿದ್ದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ದ್ಯೇ0ು ಧೋರಣೆಗಳನ್ನು ವಿವರಿಸಿದರು. ಕವಿಗಳಾದ ರುಕ್ಮಿಣಿ ಬಿಂಜಲಭಾವಿ, ರಮೇಶ ಬಸರಗಿ, ಸಿದ್ದನಗೌಡ ಬಿಜ್ಜೂರ, ಬಸವರಾಜ ನವಲಿ, ರಂಗನಾಥ ಅಕ್ಕಲಕೋಟ, ಶಾಂತಾಬಾಯಿ ಜೋಗೇನವರ, ವಿಜ0ಾ ಬಿರಾದಾರ, ಕಮಲಾಕ್ಷಿ ಗೆಜ್ಜಿ, ದಾಕ್ಷಾ0ುಣಿ ಬಿರಾದಾರ, ಭರತೇಶ ಕಲಗೊಂಡ, ಮಹೇಶ ಬಣಜಿಗೇರ ಕವನ ವಾಚನ ಮಾಡಿದರು. 

ಕೆ.ಸುನಂದಾ ಕಾ0ರ್ುಕ್ರಮ ನಿರೂಪಿಸಿದರು. ಸಿದ್ದಲಿಂಗಪ್ಪ ಹದಿಮೂರ ಸ್ವಾಗತಿಸಿದರು. ಪ್ರಭಾವತಿ ದೇಸಾಯಿ ವಂದಿಸಿದರು. ಎಸ್.ಎಸ್. ಕೊಕಟನೂರ, ಶಾಂತೇಶ ಹಿರೇಮಠ, ಎಸ್.ಡಿ. ಮಾದನಶೆಟ್ಟಿ, ಡಾ.ವಿ.ಡಿ. ಐಹೊಳ್ಳಿ, ವಿ.ಸಿ. ನಾಗಠಾಣ, ಡಾ.ಸಂಗಮೇಶ ಮೇತ್ರಿ, ಬಿ.ಎಚ್. ಬಾದರಬಂಡಿ, ಬಿ.ಸಿ. ಹತ್ತಿ ಮುಂತಾದವರು ಉಪಸ್ಥಿತರಿದ್ದರು.