ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಮತ್ತು ಅಸ್ಟರ್ ಡಿ ಎಮ್ ಫೌಂಡೇಷನ್ ಇವರ ಸಹಯೋಗದೊಂದಿಗೆ ವ್ಹೀಲ್‌ಚೆರ್ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮ

Distribution of wheelchairs and saplings in collaboration with Rural Development Center Sindagi and

ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಮತ್ತು ಅಸ್ಟರ್ ಡಿ ಎಮ್ ಫೌಂಡೇಷನ್ ಇವರ ಸಹಯೋಗದೊಂದಿಗೆ  ವ್ಹೀಲ್‌ಚೆರ್ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮ 

ಸಿಂದಗಿ 01: ಮಕ್ಕಳಲ್ಲಿ ಸರಿಯಾದ ಬೆಳವಣಿಗೆ ಆಗಬೇಕಾದರೆ 5 ಪಂಚೇಂದ್ರಿಯಗಳ ಸರಿಯಾದ ಬೆಳವಣಿಗೆ ಆಗಬೇಕು. ಇದಕ್ಕೆ ಪೂರಕವಾಗಿ ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡಬೇಕು, ಜಂಕ್ ಆಹಾರ ಕೊಡಬಾರದು, ಮೊಬೈಲನ್ನು ಕೊಡಬಾರದು ಮತ್ತು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಬೇಕು ಎಂದು ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞರಾದ ಡಾ. ಚೇತನ ಹೇಳೀದರು.  

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಮತ್ತು ಅಸ್ಟರ್ ಡಿ ಎಮ್ ಫೌಂಡೇಷನ್ ಇವರ ಸಹಯೋಗದೊಂದಿಗೆ  ವ್ಹೀಲ್‌ಚೆರ್ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

      ರೋನಾಲ್ಡ್‌ರವರು ಅಸ್ಟರ್ ಡಿ ಎಮ್ ಫೌಂಡೇಷನ್ ಕೊಚ್ಚಿ, ಇವರ ಸಿ.ಎಸ್‌.ಆರ್ ನಿಧಿಯಿಂದ ಬಿಜಾಪುರ ಸಿ.ಎನ್‌.ಎಫ್‌.ಇ ಸಂಸ್ಥೆಯ 26 ವಿಶೇಷ ಚೇತನರಿಗೆ, ದೇವರಹಿಪ್ಪರಗಿ ಜೆ.ಎಂ.ಜೆ ಸಂಸ್ಥೆಯ 5 ವಿಶೇಷ ಚೇತನರಿಗೆ ಮತ್ತು ಸಂಗಮ ಸಂಸ್ಥೆಯ 19 ವಿಶೇಷ ಚೇತನರಿಗೆ ವ್ಹೀಲ್ ಚೇರಗಳು ಮತ್ತು 2000 ಸಸಿಗಳನ್ನು ನೀಡಿದರು.  

       ಅಧ್ಯಕ್ಷತೆ ವಹಿಸಿದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಫಾದರ್‌. ಸಂತೋಷ್ ಮಾತನಾಡಿ ಅಸ್ಟರ್ ಡಿ ಎಮ್ ಸಂಸ್ಥೆಗೆ ಫಲಾನುಗಳ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.  

       ಕಾರ್ಯಕ್ರಮದಲ್ಲಿ ನವೀನ್ ಸೇಲ್ಸ್‌ ಡಿಪಾರ್ಟ್‌ಮೆಂಟ್, ಮಹಮ್ಮದ್ ರಿಜ್ವಾನ್ ಮಾರ್ಕೆಟಿಂಗ್, ವಿಕ್ರಮ್ ಸಿ.ಎಸ್‌.ಆರ್ ಉಸ್ತುವಾರಿ, ವಿಶೇಷ ಚೇತನರು ಮತ್ತು ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.     

         ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಮೂಲಕ ಪ್ರಾರಂಭಿಸಲಾಯಿತು. ವಿಜಯ್ ಬಂಟನೂರು ನಿರೂಪಿಸಿದರು, ಮಹೇಶ್ ಚವಾಣ್ ಸ್ವಾಗತಿಸಿದರು. ಬಸವರಾಜ್ ಬಿಸನಾಳ್  ವಂದಿಸಿದರು.