ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ

ಸಕರ್ಾರದ ಸೌಲಭ್ಯಗಳು ಸಮಾಜದ ಕಡೆಯ ವ್ಯಕ್ತಿಗೆ ತಲುಪಬೇಕು: ರೂಪಾಲಿ ನಾಯ್ಕ

ಕಾರವಾರ 17: ನಗರದ ತಹಶೀಲ್ದಾರ ಕಛೇರಿ ಆವರಣದಲ್ಲಿ  ಈಚೆಗೆ ವಿಕಲ ಚೇತನ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ಸಿಗುವ ತ್ರಿಚಕ್ರ ವಾಹನಗಳನ್ನು ಶಾಸಕಿ ರೂಪಾಲಿ ನಾಯ್ಕ ವಿತರಿಸಿದರು.

                ಸಕರ್ಾರದ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಅಧಿಕಾರಿ ಗಳ ಪಾತ್ರ ಮಹತ್ವದ್ದು. ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು, ವಿಲೇಜ್ ಆಕೌಂಟೆಂಟ್ಗಳಿಂದ ಮಾಹಿತಿ ಪಡೆದು ದುರ್ಬಲರನ್ನು ಹುಡಕಬೇಕು.

                ಇದರಿಂದ ನೈಜ ಫಲಾನುಭವಿಗಳಿಗೆ ಸಕರ್ಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಅಧಿಕಾರಿಗಳು ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡಬೇಕು. ಇವತ್ತು ವಿಕಲಚೇತನರ ಬಗ್ಗೆ ತಹಶೀಲ್ದಾರ ಕಚೇರಿಯ ಅಧಿಕಾರಿಗಳ ಕಳಕಳಿ ಎದ್ದು ಕಾಣುತ್ತಿದೆ. ಇಂಥ ಹೃದಯವಂತಿಕೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಸಹ ಇಟ್ಟುಕೊಳ್ಳಬೇಕು ಎಂದರು.

                ಸಂದರ್ಭದಲ್ಲಿ ವಿಕಲಚೇತನ ಫಲಾನುಭವಿಗಳಾದ ಕಿನ್ನರದ ಸುಧಾಕರ ಜಿ. ಕೊಠಾರಕರ, ಸುಂಕೇರಿಯ ಗೋಪಾಳಕೃಷ್ಣ ದೇವಿದಾಸ ನಾಯ್ಕ, ಕೋಡಿಭಾಗದ ಸುನೀಲ ಪ್ರಭಾಕರ ಅಣ್ವೇಕರ, ಮಾಜಾಳಿಯ ಉದಯ ಘನಶ್ಯಾಮ ಘಡಕರ, ಮುಡಗೇರಿಯ ಮಿನಿನ್ ರಾಜ್, ಹೊಂಡಗೇರಿಯ ನಂದಾ ಬಾನು ಗುನಗಿ ಅವರಿಗೆ  ವಾಹನಗಳನ್ನು ವಿತರಿಸಲಾಯಿತು. ಸಂದರ್ಭದಲ್ಲಿ ತಹಶೀಲ್ದಾರ ಶ್ರೀದೇವಿ ಭಟ್, ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ, ನಾಗೇಶ ಕುಡರ್ೇಕರ, ಕಿಶನ್ ಕಾಂಬ್ಳೆ, ರಾಜೇಶ ನಾಯ್ಕ ಸಿದ್ದರ, ಸುಜಾತಾ ಬಾಂದೇಕರ, ಆಶಾ ನಾಯ್ಕ, ಗುರುಪ್ರಸಾದ ನಾಯ್ಕ, ನ್ಯಾಯವಾದಿ ನಿತಿನ ರಾಯ್ಕರ, ಉಪಸ್ಥಿತರಿದ್ದರು.