ಯಮಕನಮರಡಿ 10: ಹತ್ತರಗಿಯ ಹರಿಮಂದಿರದ ಆನಂದಗುರುಜಿಯವರು ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಮಾಡುತ್ತಿರುವ ಹಲವಾರು ಕಾರ್ಯಗಳು ಶ್ಲಾಘನೀಯ ಎಂದು ಚಿಕ್ಕೋಡಿಯ ಚಿರಮೂತರ್ಿ ಮಠದ ಸಂಪಾದನಾ ಸ್ವಾಮಿಗಳ ಹೇಳಿದರು.
ಅವರು ಸಮೀಪದ ಹತ್ತರಗಿಯ ಹರಿಮಂದಿರದಲ್ಲಿ ಏರ್ಪಡಿಸಿದ್ದ ಏಕನಾಥ ಮಹಾರಾಜರ 16 ನೇಯ ಪುಣ್ಯಾರಾಧನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತ
ಮನುಷ್ಯನ ಜೀವನದಲ್ಲಿ ಸಾಧನೆ ಅತ್ಯಗತ್ಯ ಅದರೊಟ್ಟಿಗೆ ದಾನ, ಧರ್ಮ, ದಾಸೋಹ, ಪರೋಪಕಾರ, ಮಾಡಿದಾಗ ಮಾತ್ರ ಮನುಷ್ಯ ಜೀವನ ಸಾರ್ಥಕತೆ ಕಾಣುತ್ತದೆ. ಇಂದು ವಿದ್ಯೆಗೆ ಹೆಚ್ಚಿನ ಮಹತ್ವವಿದ್ದು ಬಡ ವಿದ್ಯಾಥರ್ಿಗಳು ಆಥರ್ಿಕ ಸಂಕಷ್ಟದಿಂದ ವಿದ್ಯಾಭ್ಯಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಅರಿತು ಹರಿ ಮಂದಿರದ ಆನಂದ ಮಹಾರಾಜರು ಅನೇಕ ಬಡವಿದ್ಯಾಥರ್ಿಗಳಿಗೆ ಶಿಷ್ಯವೇತನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಮಠಮಾನ್ಯಗಳಿಂದ ಶಿಷ್ಯವೇತನ ಪಡೆದ ವಿದ್ಯಾಥರ್ಿಗಳು ಪ್ರತಿಭಾವಂತರಾಗಿ ಹೊರಹೊಮ್ಮಿ ಮಠಮಾನ್ಯಗಳಿಗೆ ಹೆಸರು ತರಬೇಕೆಂದರು.
ವೇದಿಕೆಯಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಹರಿಮಂದಿರದ ಆನಂದ ಮಹಾರಾಜರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹತ್ತರಗಿಯ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಹತ್ತರಗಿಯ ಗ್ರಾ.ಪಂ.ಅಧ್ಯಕ್ಷ ಮಹಾದೇವ ಪಠೋಳಿ ಉಪಸ್ಥಿತರಿದ್ದರು.
ಸುಮಾರು 46 ವಿದ್ಯಾಥರ್ಿಗಳಿಗೆ ಶಿಷ್ಯವೇತನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಶ್ರೀಶೈಲ ಮಠಪತಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ ದೇಸಾಯಿ, ಹಾಗೂ ಪ್ರಾಚಾರ್ಯ, ಪಿ.ಬಿ.ಅವಲಕ್ಕಿಯವರು ಕಾರ್ಯಕ್ರಮಕ್ಕೆ ಸ್ವಾಗತಿಸಿ, ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.