ಕಬ್ಬು ಕಟಾವು ಕಾರ್ಮಿಕರಿಗೆ ಸೋಶಿಯಲ್ ಫೌಂಡೇಶನ ರಗ್ಗುಗಳ ವಿತರಣೆ
ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದ ಶ್ರೀ ಸಾಯಿ ಸೋಶಿಯಲ್ ಫೌಂಡೇಶನ ವತಿಯಿಂದ ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಬೆಚ್ಚಗಿನ ಹೊದಿಕೆಗಳನ್ನು ವಿತರಿಸಿದರು.
ಫೌಂಡೇಶನ ಅಧ್ಯಕ್ಷ ಸೂರಜ್ ಮಧಾಳೆ ಮಾತನಾಡಿ ಕಬ್ಬು ಕಟಾವು ಮಾಡುವ ಕಾರ್ಮಿಕರು ಗಾಳಿ ಚಳಿ ಎನ್ನದೇ ಪ್ರತಿನಿತ್ಯ ರೈತರ ಅಭಿವೃದ್ಧಿಗಾಗಿ ದುಡಿಯುತ್ತಾರೆ. ಅವರ ಆರೋಗ್ಯದ ಹಿತ ದೃಷ್ಠಿಯಿಂದ ಕಾರ್ಮಿಕರಿಗೆ ಅನುಕೂಲವಾಗಲು ಶ್ರೀ ಸಾಯಿ ಸೋಶಿಯಲ್ ಫೌಂಡೇಶನ ವತಿಯಿಂದ ಬೆಚ್ಚನೆಯ ರಗ್ಗುಗಳ ಹೊದಿಕೆಗಳನ್ನು ವಿತರಿಸಲಾಗಿದೆ. ಇದರಿಂದ ಕಾರ್ಮಿಕರ ಮನೋಬಲ ಹೆಚ್ಚುತ್ತದೆ ಎಂದರು.
ಈ ಸಂದರ್ಭದಲ್ಲಿ ಫೌಂಡೇಶನ ಸಂಚಾಲಕರಾದ ವಿರೂಪಾಕ್ಷಿ ಹನಿಮನಾಳೆ, ಸಂತೋಷ ವಾಸ್ಕರ, ಸಚೀನ ಖೋತ, ಶ್ರುತಿ ಕುಂಬಾರ, ಡಾ, ಸಿದ್ದೇಶ್ವರ ಬಾಗಾಯಿ, ಸುನೀಲ ಮಗದುಮ್ಮ, ಮಹೇಶ ಗುರವ, ಕೃಷ್ಣಾ ಪವಾರ, ಉಸ್ತೋದ ಮುಕದಂ, ಲಕ್ಷ್ಮಣ ಬಾಸ್ಕರ, ಸಂತೋಷ ಥೋರಟ, ರಾಜು ಕೇಸರಕರ, ಶ್ರುತಿ ಕಮತೆ ಇತರರು ಇದ್ದರು. ಪೋಟೋ-24ಸಿಕೆಡಿ3: ಚಿಕ್ಕೋಡಿ: ಕಬ್ಬು ಕಟಾವು ಕೂಲಿ ಕಾರ್ಮಿಕರಿಗೆ ದಲಗಾ ಪಟ್ಟಣದ ಶ್ರೀ ಸಾಯಿ ಸೋಶಿಯಲ್ ಫೌಂಡೇಶನ ವತಿಯಿಂದ ರಗ್ಗುಗಳ ಹೊದಿಕೆ ವಿತರಿಸಿದರು.