ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಣೆ

ಲೋಕದರ್ಶನ ವರದಿ

ಬೆಳಗಾವಿ 14:  ಕೆಎಲ್ಇ ವೇಣುಧ್ವನಿ 90.4 ಸಮುದಾಯ ಬಾನುಲಿ ಕೇಂದ್ರದ ನಾಲ್ಕನೆಯ ವಾಷರ್ಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪಧರ್ೆಗಳ ವಿಜೇತರಿಗೆ ರೇಡಿಯೋ ದಿನಾಚರಣೆಯಂದು ಬಹುಮಾನ ವಿತರಿಸಲಾಯಿತು.

ಕೆ.ಎಲ್.ಇ ವೇಣುಧ್ವನಿ  ಬಾನುಲಿ ಕೇಂದ್ರದ ನಾಲ್ಕನೆಯ ವಾಷರ್ಿಕೋತ್ಸವದ ಅಂಗವಾಗಿ ದಿ. 06ರಿಂದ ದಿ. 13 ಫೆಬ್ರುವರಿ 2019ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಳಗಾವಿಯ ಶಾಲೆ ಕಾಲೇಜುಗಳ ವಿದ್ಯಾಥರ್ಿಗಳಿಗಾಗಿ ಆಶುಭಾಷಣ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾಥರ್ಿಗಳು ಮತ್ತು ವಿವಿಧ ಮಹಾವಿದ್ಯಾಲಯಗಳ ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದಶರ್ಿಸಿದರು.

ಸ್ಪಧರ್ಾ ವಿಜೇತ ವಿದ್ಯಾಥರ್ಿಗಳಿಗೆ ವೇಣುಧ್ವನಿ ಬಾನುಲಿ ಕೇಂದ್ರದ ನಿಲಯ ನಿದರ್ೇಶಕರಾಗಿರುವ ಡಾ.ಸುನೀಲ್ ಜಲಾಲಪುರೆ ಅವರು ಬಹುಮಾನ ವಿತರಿಸಿದರು.ಈ ಸಂದರ್ಭದಲ್ಲಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಜಲಾಲಪುರೆ - ವಿದ್ಯಾಥರ್ಿಗಳು ಸ್ಪಧರ್ಾ ಮನೋಭಾವನೆಯನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಆತ್ಮ ವಿಶ್ವಾಸ ಮತ್ತು ಪ್ರತಿಭೆಯನ್ನು ಪ್ರದಶರ್ಿಸಬಹುದು.ಇದು ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದ ನಿಲಯ ನಿವರ್ಾಹಕರಾಗಿರುವ ವೀರೇಶ್ ಕುಮಾರ ನಂದಗಾಂವ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.