ಚಿತ್ರಕಲಾ ಸ್ಪಧರ್ೆ ವಿಜೇತರಿಗೆ ಬಹುಮಾನ ವಿತರಣೆ

ಬೆಳಗಾವಿ 29:  ಜಿಲ್ಲಾ ಲೇಖಕಿಯರ ಸಂಘ 70ನೇಯ ಗಣರಾಜ್ಯೋತ್ಸವ ನಿಮಿತ್ತ ಅಜಮ್ ನಗರದ ಕಿವುಡು ಮೂಕರ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. 

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪಧರ್ೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಳಗಾವಿ ಜಿಲ್ಲಾ ಲೇಖಕಿಯರ  ಸಂಘದಿಂದ   ವತ್ಸಲಾ ಪಾಟೀಲ 5000 ರೂಪಾಯಿ ಮೌಲ್ಯದ ಉಪಯುಕ್ತ ಸಾಮಗ್ರಿಗಳನ್ನು  ಶಾಲೆಗೆ ದೇಣಿಗೆಯಾಗಿ ನೀಡಿದರು. 

ವಿ.ಎಸ್. ಪಾಟೀಲ ಧ್ವಜಾರೋಹಣ ನೆರವೇರಿಸಿದರು. ವಿಶೇಷ ಚೇತನ ಮಕ್ಕಳು  ಸಂಜ್ಞೆಯ ಮೂಲಕ ಭಾವತುಂಬಿ  ಭಕ್ತಯಿಂದ ರಾಷ್ಟ್ರ ಗೀತೆ ಹಾಡಿದ್ದು ಅವಿಸ್ಮರಣೀಯವಾಗಿತ್ತು. ಶಾಲೆಯ ಮುಖ್ಯಸ್ಥರಾದ ರಾಮನಾಥ ಬನಶಂಕರಿಯವರು, ವಿ,ಎಸ್.ಪಾಟೀಲ, ವತ್ಸಲಾ ಪಾಟೀಲ. ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ, ಆಶಾ ಯಮಕನಮರಡಿ, ರಾಜೇಶ್ವರಿ ಹಿರೇಮಠ, ಮಹಾನಂದಾ ಪರುಶೆಟ್ಟಿ, ಶಾಂತ ಮಸೂತಿ, ಬೀನಾ ಪಾಟೀಲ, ಕಾಂಚನ ಪೂಜಾರಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.