ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಮಕ್ಕಳಿಗೆ ತಟ್ಟೆ ವಿತರಿಸಿಣೆ
ಬ್ಯಾಡಗಿ 30: ರೋಟರಿ ಕ್ಲಬ್ ವತಿಯಿಂದ ಸ್ಥಳೀಯ ನಂದಾದೀಪ ಬುದ್ಧಿಮಾಂದ್ಯಮ ಶಾಲೆಯ ಮಕ್ಕಳಿಗೆಬಿಸಿಯೂಟ ಸವಿಯಲು ತಟ್ಟೆಗಳನ್ನು ಉಚಿತವಾಗಿ ನೀಡಲಾಯಿತು. ಶನಿವಾರ ನಂದಾದೀಪ ಬುದ್ದಿ ಮಾಂದ್ಯಮ ಶಾಲೆಯಲ್ಲಿ ನಡೆದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಮಕ್ಕಳಿಗೆ ತಟ್ಟೆ ವಿತರಿಸಿದ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ ಶಿಕ್ಷಣ ಪಡೆಯುವುದು ಎಲ್ಲರ ಮೂಲಭೂತ ಹಕ್ಕು. ಅದೇ ರೀತಿ ಇಲ್ಲಿನ ಮಕ್ಕಳಿಗೆ ಸೌಲಭ್ಯಗಳನ್ನು ದಾನಿಗಳು ಒದಗಿಸಲು ಮುಂದಾಗಬೇಕಿದೆ. ಅಂದಾಗ ಇಂತಹ ವಿದ್ಯಾರ್ಥಿಗಳ ಬಾಳು ಹಸನಾಗಲಿದೆ. ನಮ್ಮ ರೋಟರಿ ಕ್ಲಬ್ ವತಿಯಿಂದ ನೊಂದವರ ರಕ್ಷಣೆಗಾಗಿ, ಹಿತಕ್ಕಾಗಿ, ಸೌಲಭ್ಯಕ್ಕಾಗಿ ಹೋರಾಡುವುದರ ಜೊತೆಗೆ ಸಮಾಜದಲ್ಲಿ ಕಷ್ಟದಲ್ಲಿ ಇರುವ ಸಂಘ-ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಸಹಾಯ ಮಾಡುವುದರ ಮೂಲಕ ಸಮಾಜಮುಖಿಯಾಗಿ ನಮ್ಮ ಸಂಸ್ಥೆಕಾರ್ಯನಿರ್ವಹಿಸುತ್ತಿದೆ ಎಂದರು.ಶಾಲಾ ವ್ಯವಸ್ಥಾಪಕ ಹನುಮಂತಪ್ಪ ಜಾಡರ ಮಾತನಾಡಿ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ರೋಟರಿ ಕ್ಲಬ್ ವತಿಯಿಂದ ಸಹಕಾರ ನೀಡುತ್ತಿರುವುದು ಪ್ರಶಂಸನೀಯ. ನಾವು ಎಷ್ಟು ಸಂಪಾದನೆ ಮಾಡುತ್ತೇವೆ ಅನ್ನುವುದು ಮುಖ್ಯವಲ್ಲ. ನಮ್ಮ ಸಂಪಾದನೆಯನ್ನು ಹೇಗೆ ಸದ್ಬಳಕೆ ಮಾಡುತ್ತೇವೆ ಎನ್ನುವುದು ಮುಖ್ಯವಾಗಿದೆ. ನಮ್ಮ ಶಾಲೆಯ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಹಾಗೂ ಕಾರ್ಮಿಕ ಕುಟುಂಬದಿಂದ ಬಂದಿರುವ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಶಾಲೆಯನ್ನು ಆಯ್ಕೆಮಾಡಿರುವುದು ಉತ್ತಮ ನಿರ್ಧಾರ,ಬುದ್ದಿ ಮಾಂದ್ಯ ಮಕ್ಕಳಿಗೆ ರೋಟರಿ ಸಂಸ್ಥೆಯ ವತಿಯಿಂದ ತಟ್ಟೆಗಳನ್ನು ನೀಡಿದ್ದಕ್ಕಾಗಿ ಸಂಸ್ಥೆಯವರ ಕಾರ್ಯವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಸಿದ್ದಲಿಂಗಯ್ಯ ಬೂದಿಹಾಳಮಠ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿ ವಿರೇಶ ಬಾಗೋಜಿ, ಜಂಟಿ ಕಾರ್ಯದರ್ಶಿ ಚಂದ್ರಶೇಖರ ಗಾಣಿಗೇರ,ಅನಿಲಕುಮಾರ ಬೊಡ್ಡಪಾಟಿಪರಶುರಾಮ ಮೇಲಗಿರಿ, ಮಾಲತೇಶ ಅರಳಿಮಟ್ಟಿ, ಸತೀಶ ಅಗಡಿ, ಪವಾಡಪ್ಪ ಆಚನೂರ, ಶಿವರಾಜ ಚೂರಿ, ಬಸವರಾಜ ಸುಂಕಾಪುರ, ಸಿದ್ದು ಕೊಂಚಿಗೇರಿ, ಕಿರಣ ಮಾಳೆನಹಳ್ಳಿ ಮತ್ತು ಶಾಲೆಯ ವ್ಯವಸ್ಥಾಪಕರಾದ ಹನುಮಂತಪ್ಪ ಜಾಡರ ಶಿಕ್ಷಕಿಯರಾದ ಚಂಪಾ, ಶಶಿಕಲಾ, ಮುರುಡೆಮ್ಮ, ತನುಜಾ ಸೇರಿದಂತೆ ಇತರರಿದ್ದರು.