ವಿಶೇಷಚೇತನ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
Distribution of learning materials to specially abled students
ಲೋಕದರ್ಶನ ವರದಿ
ಧಾರವಾಡ ಗ್ರಾಮೀಣ 06 : ವಿಶೇಷಚೇತನ ಮಕ್ಕಳು ಸಮಾಜದಲ್ಲಿ ಎಲ್ಲರಂತೆ ಬದುಕುಬೇಕು. ಎಲ್ಲರಿಗೂ ಸಿಗುವಂತಹ ಸ್ಥಾನಮಾನಗಳು ಅವರಿಗೂ ಸಿಗಬೇಕೆಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಆರ್.ಸದಲಗಿ ಕರೆನೀಡಿದರು. ಶ್ರೀ ರಾಮಕೃಷ್ಣ ವಿವೇಕಾನಂದ ಜ್ಞಾನ ವಿಕಾಸ ಶಿಕ್ಷಣ ಸಂಸ್ಥೆ(ರಿ) ತಡಕೋಡ ಅವರ ನೇತೃತ್ವದಲ್ಲಿ ಧಾರವಾಡ ಗ್ರಾಮೀಣದ ಬಿಆರಸಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕಾ ಮಟ್ಟದ ವಿಶೇಷಚೇತನ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಕಲಚೇತನ ಮಕ್ಕಳ ಸೇವೆ ಮಾಡುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ. ಮಕ್ಕಳಿಗೆ ಕೊಡಮಾಡಿದ ಈ ಉಚಿತ ಕಲಿಕಾ ಸಾಮಾಗ್ರಿಗಳನ್ನು ವಿತರಿಸುತ್ತ ಬಂದಿರುವ ಕಾರ್ಯ ಶ್ಲಾಘನೀಯ.
ಕುಮಾರ್ ಕೆ ಎಫ್ ಕ್ಷೇತ್ರ ಸಮನ್ವಯ ಅಧಿಕಾರಿ ಮಾತನಾಡುತ್ತಾ ಈ ಶತಮಾನ ಜ್ಞಾನದ ಶತಮಾನ ಅದನ್ನು ಅರಿತುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಪ್ರತಿಯೋಬ್ಬ ಬಾಂಧವರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡುತ್ತಿದ್ದಾರೆ. ಅವುಗಳನ್ನು ಸಮರ್ಕವಾಗಿ ವಿಶೇಷ ಚೇತನ ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆದು ಸಮುದಾಯದ ಹಿರಿಮೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಶ್ರೀರಾಮಕೃಷ್ಣ ವಿವೇಕಾನಂದ ಜ್ಞಾನ ವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೀರನಗೌಡ ಮರಿಗೌಡರ ಮಾತನಾಡುತ್ತಾ ವಿಶೇಷಚೇತನ ಮಕ್ಕಳು ದೇವರ ಮಕ್ಕಳು. ಅವರು ಅಂಗಾಂಗದಿಂದ ಊನರಾಗಿದ್ದರು ಅವರಲ್ಲಿನ ಮಾನಸಿಕ ಸಾಮರ್ಥ್ಯ ವಿಶೇಷವಾಗಿರುತ್ತದೆ. ವಿಶೇಷ ಜ್ಞಾನ ಅವರಲ್ಲಿರುತ್ತದೆ. ಇಂಥ ಮಕ್ಕಳ ಬಗ್ಗೆ ಅವರ ಪಾಲಕರು, ಪೋಷಕರು ಕೀಳರಿಮೆ ತೋರದೆ ಹೆಚ್ಚು ಕಾಳಜಿ ವಹಿಸಬೇಕು. ಕಲಿಕಾ ಸಾಮಗ್ರಿ ಸಮರ್ಕವಾಗಿ ವಿಶೇಷ ಚೇತನ ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಿ ಎಂದರು.
ಶ್ರೀ ರಾಮಕೃಷ್ಣ ವಿವೇಕಾನಂದ ಜ್ಞಾನ ವಿಕಾಸ ಶಿಕ್ಷಣ ಸಂಸ್ಥೆಯ ರಾಹುಲ್ ಆಚಾರಿ, ತಡಕೋಡದ ಶಾರದಾ ಮಾತಾ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಲಕ್ಷ್ಮಿ ವೀರನಗೌಡ ಮರಿಗೌಡರ್, ಬಿ.ಐ.ಆರ್.ಟಿ ಶಿಕ್ಷಕರಾದ ಲಲಿತ ಹೊನ್ನವಾಡ, ಗೋಪಾಲ್ ಸೊನ್ನಹಳ್ಳಿ, ನಬೀಸಾಬ ಮುದ್ದೇಬಿಹಾಳ ಜನಮುಖಿ ಸ್ವಯಂ ಸೇವಾ ಸಂಸ್ಥೆಯ ನನಗೂ ಶಾಲೆಯ ಶಿಕ್ಷಕಿ ಪುಷ್ಪ ಮಾನೆ, ಪ್ರಭಾವತಿ ಕವಳಿ, ಅಕ್ಷತಾ ಪೂಜಾರ,ಲಕ್ಷ್ಮೀ ಮಾಳಗಿಮನಿ ಉಪಸ್ಥಿತರಿದ್ದರು. ಮೊದಲಿಗೆ ಗೋಪಾಲ್ ಸೊನ್ನಹಳಿ ಸ್ವಾಗತ ಮಾಡಿದರೆ, ಲಲಿತ ಹೊನ್ನವಾಡ ನಿರೂಪಿಸಿದರು, ಕೊನೆಯಲ್ಲಿ ನಬೀಸಾಬ ಮುದ್ದೇಬಿಹಾಳ ವಂದಿಸಿದರು. ವಿಶೇಷಚೇತನ ಮಕ್ಕಳು ಸಮಾಜದಲ್ಲಿ ಎಲ್ಲರಂತೆ ಬದುಕುಬೇಕು. ಎಲ್ಲರಿಗೂ ಸಿಗುವಂತಹ ಸ್ಥಾನಮಾನಗಳು ಅವರಿಗೂ ಸಿಗಬೇಕೆಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಆರ್.ಸದಲಗಿ ಕರೆನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 