ಆರ್ ವಿ ದೇಶಪಾಂಡೆ 78ನೇ ಜನ್ಮ ದಿನದ ಅಂಗವಾಗಿ ಜ್ಞಾನ ಪ್ರಜ್ಞಾ ಅಂದ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ
ಮುಂಡಗೋಡ, 16; ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಆರ್ ವಿ ದೇಶಪಾಂಡೆ ಅವರ 78 ನೇ ಜನ್ಮ ದಿನದ ಅಂಗವಾಗಿ ತಾಲೂಕ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಮತ್ತು ಜ್ಞಾನ ಪ್ರಜ್ಞಾ ಅಂದ್ ಮಕ್ಕಳ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲವನ್ನು ವಿತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್.ಎನ್ ದುಂಡಸಿ, ತಾಲೂಕು ಗ್ಯಾರಂಟಿ ಅಧ್ಯಕ್ಷ ರಾಜಶೇಖರ ಹಿರೇಮಠ, ಪ.ಪಂ ಸದಸ್ಯ ಮಹ್ಮದಗೌಸ ಮಖಾಂದಾರ, ಶಿವರಾಜ ಸುಬ್ಬಾಯವರ, ನಜೀರ್ ಅಹ್ಮದ ದರ್ಗಾವಾಲೆ, ಆಲೆಹಸನ ಬೆಂಡಿಗೇರಿ, ಧರ್ಮರಾಜ ನಡಗೇರ, ಶಾರದಾ ರಾಠೋಡ,ಸಲೀಂ ನಂದಿಗಟ್ಟಿ, ಬಸವರಾಜ ಆಸ್ತಕಟ್ಟಿ, ರಪೀಕ್ ಇನಾಮದಾರ, ಬಾಬುರಾವ ಲಾಡನವರ ಹಾಗೂ ಉಪಸ್ಥಿತರಿದ್ದರು.