ಮುಸ್ಲಿಂ ಸಮಾಜದ ಯುವಕರಿಂದ ಹಣ್ಣು ಹಂಪಲ ವಿತರಣೆ

ಲೋಕದರ್ಶನ  ವರದಿ

ಕಂಪ್ಲಿ11: ಹುಟ್ಟು ಹಬ್ಬದ ನೆನದಲ್ಲಿ ದುಂದು ವೆಚ್ಚ ಮಾಡುವ ಬದಲಿಗೆ ಅನಾಥರಿಗೆ ದೀನದಲಿತರು, ಬಡ ಬಗ್ಗರಿಗೆ ದಾನ ಧರ್ಮ ಮಾಡುವಲ್ಲಿ ಆಥರ್ಿಕ ಹೃದಯ ವಿಶಾಲರು ಮುಂದಾಗಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಎಂ.ಇಸ್ಮಾಯಿಲ್ ಬೇಗ್ ಹೇಳಿದರು. 

  ಶನಿವಾರ ಇಲ್ಲಿನ ಗಂಗಾವತಿ ರಸ್ತೆಯಲ್ಲಿನ ಹಜರತ್ ಸೈಯ್ಯದ್ ಷಾಹ್ ಬಡೇಸಾಹೇಬ್ ಖಾದ್ರಿ ದಗರ್ಾದಲ್ಲಿ, ಹಜರತ್ ಟಿಪ್ಪು ಸುಲ್ತಾನ್ ಜಯಂತಿ ನಿಮಿತ್ತ ದೀನರು, ಭಿಕ್ಷುಕರಿಗೆ ಇಸ್ಮಾಯಿಲ್ ಬೇಗ್ ನೇತೃತ್ವದಲ್ಲಿ ಮುಸ್ಲಿಂ ಸಮಾಜದ ಯುವಕರಿಂದ  ಹಚ್ಚಡ(ಬೆಡ್ ಶೀಟ್), ಹಣ್ಣು, ಬಿಸ್ಕೇಟ್, ಬ್ರೆಡ್, ಸಿಹಿ ವಿತರಿಸಿ ಮಾತನಾಡಿ, ಸರಳ ಜೀವನ ನಡೆಸುವ ಮೂಲಕ ಅನ್ಯರಿಗೆ ಸಹಾಯ ಮಾಡಬೇಕಾಗಿದೆ. ಯುವಜನತೆ ಭಿಕ್ಷುಕರು, ದೀನರು, ಬಡವರಿಗೆ ಸಹಾಯ ಹಸ್ತ ಚಾಚುವ ಗುಣ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು. 

     ಈ ಸಂದರ್ಭದಲ್ಲಿ ಮುಸ್ಲಿಂ ಗುರುಗಳಾದ ಸೈಯ್ಯದ್ ಷಾಹ್ ಅಬ್ದುಲ್ ಖಾದರ್ ಖಾದ್ರಿ, ಮುಸ್ಲಿಂ ಸಮಾಜದ ಯುವಕರಾದ ಪಿ.ಶಕೀಲ್, ಜೆ.ಅನ್ವರ್ಸಾಬ್, ಫಯಾಜ್, ಖಲೀಕ್, ಶೌಖತ್ ಆಲಿ, ಜಿ.ಆಸೀಫ್, ಕೆ.ಫಯಾಜ್, ಶೋಯೇಬ್ ಆಖ್ತರ್ ಭಾಷ, ಖಲಂದರ್ ಸೇರಿ ಅನೇಕರು ಇದ್ದರು.