ಮಂಗಲ ಕಾರ್ಯಾಲಯದಲ್ಲಿ ನಡೆದ ಟೆಕ್ವೊಂಡೊ ಪರೀಕ್ಷೆಯಲ್ಲಿ ಉರ್ತ್ತೀಣಗೊಂಡ 70 ಕ್ರೀಡಾ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್‌ ವಿತರಣೆ

Distribution of color belt to 70 sports students who passed the Taekwondo test held at Mangala offi

ಮಂಗಲ ಕಾರ್ಯಾಲಯದಲ್ಲಿ ನಡೆದ ಟೆಕ್ವೊಂಡೊ ಪರೀಕ್ಷೆಯಲ್ಲಿ ಉರ್ತ್ತೀಣಗೊಂಡ 70  ಕ್ರೀಡಾ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್‌ ವಿತರಣೆ

ರಾಯಬಾಗ 30 : ಯುವಕರು ಮೊಬೈಲ ಗೀಳಿಗೆ ಒಳಗಾಗದೇ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ಪಿ.ಎಸ್‌.ಐ ಶಿವಶಂಕರ ಮುಕರಿ ಹೇಳಿದರು.ಭಾನುವಾರ ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ನಡೆದ ಟೆಕ್ವೊಂಡೊ ಪರೀಕ್ಷೆಯಲ್ಲಿ ಉರ್ತ್ತೀಣಗೊಂಡ 70  ಕ್ರೀಡಾ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್‌ ವಿತರಿಸಿ ಮಾತನಾಡಿದ ವಿದ್ಯಾರ್ಥಿಗಳು ದೈಹಿಕ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುವುದು ಎಂದು ಹೇಳಿದರು. ಟೆಕ್ವೊಂಡೊ ತರಬೇತಿದಾರ ಧಾರವಾಡದ ಪರಾಪ್ಪಾ ಕ್ಷತ್ರತೇಜ, ವಿನಯ ಚೌಗುಲೆ, ಸುಜಾತಾ ದೇಸಾಯಿ, ಗೋವಿಂದ ಕುಲಗುಡೆ, ನಿತ್ಯಾನಂದ ನಿಶಾನಿಮಠ, ಮಹಾಂತೇಶ ಲೋಹಾರ, ರಾಯಬಾಗದ ಟೆಕ್ವೊಂಡೊ ತರಬೇತಿದಾರ ಜಯದೀಪ ದೇಸಾಯಿ ಹಾಗೂ ವಿದ್ಯಾರ್ಥಿಗಳು ಇದ್ದರು.