ಕಂಪ್ಲಿಯ ಕೆ.ಎಂ.ಬಸವರಾಜ ಶಾಸ್ತ್ರಿಗಳಿಗೆ ವೀರಶೈವ ಆಗಮದ ಪ್ರವರ ಮತ್ತು ಪ್ರವೀಣ ಪ್ರಮಾಣ ಪತ್ರ ವಿತರಣೆ

Distribution of Pravara and Praveen Certificates of Veerashaiva Agama to KM Basavaraja Sastris of K

ಕಂಪ್ಲಿಯ ಕೆ.ಎಂ.ಬಸವರಾಜ ಶಾಸ್ತ್ರಿಗಳಿಗೆ ವೀರಶೈವ ಆಗಮದ ಪ್ರವರ ಮತ್ತು ಪ್ರವೀಣ ಪ್ರಮಾಣ ಪತ್ರ ವಿತರಣೆ. 

ಕಂಪ್ಲಿ 25: ಕಂಪ್ಲಿ ಪಟ್ಟಣದ ಪುರಾತ ಮಠವಾದ  ಕಲ್ಯಾಣಚೌಕಿ ಮಠದ ಶಾಸ್ತ್ರಿಗಳಾದ ಕೆ.ಎಂ.ಬಸವರಾಜ ಶಾಸ್ತ್ರಿಗಳಿಗೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕದತ್ತಿ ಇಲಾಖೆಯ ಆಯುಕ್ತರಾದ ಎಂ.ಪಿ.ವೆಂಕಟೇಶ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.  

ಇತ್ತೀಚೆಗೆ ಅಂದರೆ ಫೆ.21ರಂದು ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ, ಆಯುಕ್ತರು ಕರ್ನಾಟಕ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾ ದತ್ತಿಗಳ ಇಲಾಖೆ ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ಕರ್ನಾಟಕ ಸರ್ಕಾರ ಏರಿ​‍್ಡಸಿದ್ದ ಸಮಾರಂಭದಲ್ಲಿ ಕಂಪ್ಲಿ ಪಟ್ಟಣದ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಶಾಸ್ತ್ರಿಗಳಿಗೆ ವೀರಶೈವ ಆಗಮದ ಪ್ರವರ, ವೀರಶೈವ ಆಗಮದ ಪ್ರವೀಣ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಎಂ.ವಿ.ವೆಂಕಟೇಶ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.  

ಎರಡು ದಶಕಗಳ ಬಳಿಕ ನಡೆದ ಆಗಮ ಶಿಕ್ಷಣ ಪದವಿ ಪ್ರದಾನ ಸಮಾರಂಭದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಆಗಮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ಸ್ವೀಕರಿಸಿ ಮಾತನಾಡಿದ ಕೆ.ಎಂ.ಬಸವರಾಜ ಶಾಸ್ತ್ರಿಗಳು ರಾಜ್ಯದಲ್ಲಿ ಏಳು ಆಗಮ ಶಿಕ್ಷಣವನ್ನು ನೀಡಲಾಗುತ್ತಿದ್ದು, ಇದರಲ್ಲಿ ಶಿವ ದೇವಾಲಯದ ಪೂಜಾ ವಿಧಿ-ವಿಧಾನಕ್ಕೆ ಶೈವಾಗಮ, ವೀರಶೈವಾಗಮ ಹಾಗೂ ವಾತುಲಾಗಮ ಎನ್ನುವ ತರಬೇತಿ ನೀಡಲಾಗುತ್ತದೆ. ಇನ್ನು ವಿಷ್ಣು ಸಂಬಂಧಿತ ದೇವಾಲಯದಲ್ಲಿ ಪೂಜಾ ಕೈಂಕರ್ಯಕ್ಕೆ ಪಾಂಚರಾತ್ರಾಗಮ, ವೈಖಾನಸಾಗಮ, ಹಾಗು ತಂತ್ರಸಾಎಆಗಮ ತರಬೇತಿ ನೀಡಲಾಗುತ್ತದೆ.  

ಇವುಗಳೊಂದಿಗೆ ಜೈನಾಗಮ ವಿಧಿ-ವಿಧಾನವನ್ನು ಅವರವರ ಧರ್ಮ-ಮತಕ್ಕನುಗುಣವಾಗಿ ಆಯಾ ಆಗಮದಲ್ಲಿ ಅಧ್ಯಯನ ಪೀಠದಲ್ಲಿ ತರಬೇತಿ ನೀಡಲಾಗುತ್ತದೆ. ನಂತರ ಉತ್ತೀರ್ಣರಾದವರಿಗೆ ಪದವಿ ಪ್ರಮಾನ ಪತ್ರಗಳನ್ನು ವಿತರಿಸಿ ಗೌರವಿಸಲಾಗುತ್ತಿದ್ದು,ತಮಗೆ ವೀರಶೈವ ಆಗಮದ ಪ್ರವರ ಮತ್ತು ವೀರಶೈವ ಆಗಮದ ಪ್ರವೀಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಇಲಾಖೆಯ ಆಯುಕ್ತರಾದ ಎಂ.ವಿ.ವೆಂಕಟೇಶ್ ಪದವಿ ಪ್ರದಾನ ಮಾಡಿ ಗೌರವಿಸಿದರು ಎಂದು ತಿಳಿಸಿದರು. ವೀರಶೈವ ಆಗಮದ ಎರಡು ಪರೀಕ್ಷೆಗಳಲ್ಲಿ ಪದವಿ ಪಡೆದ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಜ ಶಾಸ್ತ್ರಿಗಳನ್ನು ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ, ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಸೇವಾ ಟ್ರಸ್ಟ್‌, ಕಂಪ್ಲಿ ತಾಲ್ಲೂಕು ವೀರಶೈವ ಸಂಘ ಸೇರಿದಂತೆ ವೀರಶೈವ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.