ಪೊಲೀಸ ಇಲಾಖೆ, ಮಾಧ್ಯಮ ಮಿತ್ರರಿಗೆ ಮಾಸ್ಕ, ಹ್ಯಾಂಡ್ ಗ್ಲೋಜ್ ವಿತರಣೆ

ಲೋಕದರ್ಶನ ವರದಿ

ಸಿಂದಗಿ 21: ಇಡೀ ರಾಜ್ಯದಲ್ಲಿ ಕೊವಿಡ್-19 ಆವರಿಸಿದ ಹಿನ್ನಲೆಯಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ 65 ಪಿಪಿಇ ಕಿಟ್ ಮತ್ತು ಮಾಸ್ಕ, ಹ್ಯಾಂಡ್ ಗ್ಲೋಜ್ ಹಾಗೂ ಪೊಲೀಸ ಸಿಬ್ಬಂದಿಗೆ 65 ಹಾಗೂ ಮಾದ್ಯಮ ಮಿತ್ರರಿಗೆ 50 ಮಾಸ್ಕ ಮತ್ತು ಹ್ಯಾಂಡ್ ಗ್ಲೋಜ್ಗಳನ್ನು ಮಂಗಳಾ ಕ್ಲೀನಿಕ್ ವತಿಯಿಂದ ಡಾ. ಅನೀಲ ನಾಯಕ ವಿತರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಸಂಜೀವಕುಮಾರ ದಾಸರ ಅವರು ಮಾತನಾಡಿ, ದಿನೆ ದಿನೆ ವಿಜಯಪುರ ಜಿಲ್ಲೆಯಲ್ಲಿ ವೈರಸ್ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ತೆಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಪೊಲೀಸ ಇಲಾಖೆ, ಆರೋಗ್ಯ ಇಲಾಖೆ ಅಲ್ಲದೆ ಮಾಧ್ಯಮವು ಅಷ್ಟೆ ಮುಖ್ಯ ಪಾತ್ರ ವಹಿಸುತ್ತಿದೆ ಈ ಮೂರು ಅಂಗಗಳು ಸಮಾಜದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ ಸಾರ್ವಜಿನಿಕರು ಮನೆಯಲ್ಲಿಯೇ ಇದ್ದು ಸಾಮಾಜಿಕ ಜಾಲ ಹಾಗೂ ಅಕ್ಕ ಪಕ್ಕದ ಮನೆಗಳ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾವು ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸಬೇಕು  ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಆರ್.ಎಸದ್.ಇಂಗಳೆ, ಸಿಪಿಐ ಸತೀಶಕುಮಾರ ಕಾಂಬಳೆ, ಪತ್ರಕರ್ತರ ಸಂಘದ ಆನಂದ ಶಾಬಾದಿಯವರಿಗೆ ಎಲ್ಲ ಕಿಟ್ಗಳನ್ನು ವಿತರಿಸಲಾಯಿತು.

ಮಂಗಳಾ ಕ್ಲೀನಿಕ್ನ ಡಾ. ಅನೀಲ ನಾಯಕ, ಸುಧಾಕರ ಚವ್ಹಾಣ, ಮೇಘು ನಾಯಕ, ಮಲ್ಲನಗೌಡ ಬಗಲಿ, ಸಂತೋಷ ಕಲಾಳ, ಅಶೋಕ ರಾಠೋಡ, ಗಂಗಾರಾಮ ರಾಠೋಡ, ಪರಮಾನಂದ ಬ್ಯಾಕೋಡ, ಅರುಣ ನಾಯಕ, ರೂಪಸಿಂಗ್ ಚವ್ಹಾಣ, ವಿಠ್ಠಲ ಚವ್ಹಾಣ, ಅಜರ್ುನ ನಾಯಕ  ಸೇರಿದಂತೆ ಹಲವರಿದ್ದರು.