ಅಡವಿಸೋಮಾಪೂರ (ತಾ.ಗದಗ) 18: ಅಡವಿಸೋಮಾಪೂರ ಗ್ರಾಮದ ಸಕರ್ಾರಿ ಶಾಲೆ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗೆ ಏನು ಕಡಿಮೆ ಇಲ್ಲ ಎಂದು ಹಳೇ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮಂಜುನಾಥ ಜಡಿ ಅವರು ಹೇಳಿದರು.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಲ್ಲಿ ಅಂಗವಾಗಿ ನೋಟ್ಬುಕ್ ವಿತರಿಸಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾನು ಈ ಶಾಲೆ ಮಕ್ಕಳಿಗೆ ನೋಟ್ಬುಕ್ ವಿತರಣೆ ಮಾಡುತ್ತ ಬಂದಿದ್ದೇನೆ. ನಾನು ಕಲಿತ ಶಾಲೆ ನನ್ನ ಶಾಲೆ ಎನ್ನುವ ಮೂಲಕ ನನ್ನ ವಯಕ್ತಿಕವಾಗಿ ಮಕ್ಕಳಿಗೆ ನೋಟ್ಬುಕ್ ವಿತರಣೆ ಮಾಡಲಾಗುತ್ತಿದ್ದು ಮುಂದಿನ ದಿನಮಾನಗಳಲ್ಲಿ ಈ ಶಾಲೆಯ ಅಭಿವೃದ್ಧಿಯಾಗಲು ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡುತ್ತೆನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಚನ್ನಪ್ಪ ಪುರದ ಮಾತನಾಡಿ, ಹಳೆಯ ವಿದ್ಯಾಥರ್ಿಗಳು ಒಗ್ಗಟ್ಟಾದರೆ ನಮ್ಮ ಶಾಲೆ ಅಭಿವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಎಸ್.ಎಸ್.ಕೊಟಗಿ, ಎಂ. ಎಸ್. ದೊಡ್ಡಮನಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮಂತ ಹೊಸಳ್ಳಿ, ಹಳೆ ವಿದ್ಯಾಥರ್ಿ ಸಂಘದ ಕಾರ್ಯದಶರ್ಿ ಸಂತೋಷ ತಳವಾರ, ಶಿವಪ್ಪ ತಳವಾರ, ಅಂಬರೀಶ ಪುರದ, ಆನಂದ ವಡ್ಡರ, ಶಿಕ್ಷಕರಾದ ಬಿ.ಬಿ.ಹತರ್ಿ ನಿರೂಪಿಸಿದರು. ಕೆ. ಆರ್.ಕಮತ್ ವಂದಿಸಿದರು. ಎಂ.ಎಚ್. ದೊಡ್ಡಮನಿ ಸ್ವಾಗತಿಸಿದರು.