ನೆರೆ ಸಂತ್ರಸ್ತರ ಕುಟುಂಬಕ್ಕೆ 25 ಕೆ.ಜಿ ಅಕ್ಕಿ ವಿತರಣೆ

ಲೋಕದರ್ಶನ ವರದಿ

ಕೊಪ್ಪಳ 03: ಇತ್ತೀಚೆಗೆ ತುಂಗಭದ್ರಾ ಎಡದಂಡೆ ಕಾಲುವೆ ಮುಖ್ಯ ಗೇಟ್ ಕಿತ್ತು ಅಪಾರ ಪ್ರಮಾಣದ ನೀರು ಹರಿದು ಮುನೀರಾಬಾದ್ ನ ಗ್ರಾಮದಲ್ಲಿ ನುಗ್ಗಿ, ನೆರೆ ಹಾವಳಿ ಅನುಭವಿಸಿದ ಇವರಿಗೆ ತುಂಗಭದ್ರಾ ಉಳಿಸಿ ಆದೋಲನ ಸಮಿತಿಯ ಮನವಿಯ ಮೇರೆಗೆ ಸಿಂಧನೂರು ಸೇವಾ ಬಳಗ ಟ್ರಸ್ಟ್ ನವರು 151 ನರೆ ಸಂತ್ರಸ್ತರಿಗೆ ಪ್ರತಿ ಕುಟುಂಭಕ್ಕೆ 25 ಅಕ್ಕಿ ಹಾಗೂ ಬೇಳೆ, ಸಕ್ಕರೆ, ಬೆಲ್ಲ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಸಾಂತ್ವಾನ ಹೇಳಿದ್ದಾರೆ. ಮುನಿರಾಬಾದನ ಸಂತ್ರಸ್ತ ಜನರು "ನಮ್ಮ ಕಷ್ಟದಲ್ಲಿ ಭಾಗಿಯಾದ ಸೇವಾ ಬಳಗಕ್ಕೂ ಮತ್ತು ತು.ಉ.ಆಂ. ಸಮಿತಿ ಸದಸ್ಯರಿಗೆ ದೇವರು ಸಹಾಯ ಮಾಡುವ ನಿಮ್ಮ ಕೈಗಳಿಗೆ ಶಕ್ತಿ ತುಂಬಲಿ, ಒಳ್ಳೆದು ಮಾಡಲಿ ಎಂದು ತುಂಬು ಹೃದಯದಿಂದ ಹರಸಿದರು. ಸಿಂಧನೂರಿನ ಸೇವಾ ಟ್ರಸ್ಟ್ ನ ರವಿಗೌಡ ಮಾಲಿಪಾಟೀಲ್, ವೀರೇಶ್ ನಟಕಲ್, ಶಿವರಾಜ್ ಪಾಟೀಲ್, ಹನುಮಗೌಡ ಹಾಗೂ ಇನ್ನೀತರ ಸದಸ್ಯರ ಉಪಸ್ಥಿತಿಯಲ್ಲಿ ಆಹಾರಧಾನ್ಯ ವಿತರಣೆಯನ್ನು ಸುವ್ಯವಸ್ಥಿತವಾಗಿ ಹಂಚಲಾಯಿತು. ಆಹಾರಧಾನ್ಯ ಹಂಚಿಕೆಯಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಕಾಮರ್ಿಕ ಘಟಕದ ಪ್ರಧಾನ ಕಾರ್ಯದಶರ್ಿ ಶ್ರೀನಿವಾಸ ಪಂಡಿತ ಮತ್ತು ಕಾರ್ಯದಶರ್ಿ ವಾಜೀದ್ ಎಮ್.ಎ ಉಪಸ್ಥಿತರಿದ್ದು ಸಹಕಾರ ನೀಡಿದರು. ನಮ್ಮ ಚಟುವಟಿಕೆಗೆ ಪ್ರೋತ್ಸಾಹ ನೀಡಿದ ಜಿ.ಪಂ.ಸದಸ್ಯರಾದ ಶಿವನಗೌಡರು, ಶಂಭುಲಿಂಗನ ಗೌಡರು ಮತ್ತು ಇನ್ನೀತರ ಗಣ್ಯ ವ್ಯಕ್ತಿಗಳಿಗೂ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯ ಗೌರವ ಅಧ್ಯಕ್ಷರಾದ ಭಾರಧ್ವಜ್, ಅಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ, ಉಪಾಧ್ಯಕ್ಷರಾದ ಡಿ.ಎಚ್. ಪೂಜಾರ್,ಶಿವಬಾಬು ಚಲಸಾನಿ, ವೀರಭದ್ರಯ್ಯ ಭೂಷನೂರ್ ಮಠ್ ಹಾಗೂ ಇನ್ನೀತರ ಗಣ್ಯ ವ್ಯಕ್ತಿಗಳಿಗೆ ತು.ಉ.ಆಂ ನದ ವೆಂಕಟೇಶ ಎಮ್ ಆರ್ ಅವರು ಅಭಿನಂದನೆಗಳು ತಿಳಿಸಿದ್ದಾರೆ.