ಲೋಕದರ್ಶನ ವರದಿ
ಗದಗ 19: ನಗರದ ಸಿದ್ದರಾಮೇಶ್ವರ ನಗರದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಮಹೇಶ ದಾಸರ ಅವರು ತಮ್ಮ ಮದುವೆಯ 4ನೇ ವಾಷರ್ಿಕೋತ್ಸವವನ್ನು ನೂರಾರು ಕುಟುಂಬಗಳಿಗೆ ಮನೆಮನೆಗೆ ತೆರಳಿ ಆಹಾರ ಧಾನ್ಯ ಹಾಗೂ ದಿನಸಿ ಕಿಟ್ಗಳನ್ನು ವಿತರಿಸುವ ಮೂಲಕ ಸರಳವಾಗಿ ಆಚರಿಸಿಕೊಂಡಿದ್ದಾರೆ.
ದೇಶದಲ್ಲಿಯೇ ಮಾದರಿಯಾಗಿ ಗದಗ ಜಿಲ್ಲಾ ಬಿಜೆಪಿ ಮುಖಂಡರಾದ ಅನೀಲ ಮೆಣಸಿನಕಾಯಿ ಅವರು ಆರಂಭಿಸಿರುವ ಭಿಕ್ಷಾ ಅಭಿಯಾನಕ್ಕೆ ಇದೇ ಸಂದರ್ಭದಲ್ಲಿ ಸಕ್ಕೂಬಾಯಿ ವೆಂಕಟೇಶ ದಾಸರ ಹಾಗೂ ಯುವ ಮುಖಂಡ ವೆಂಕಟೇಶ ಬೇಲೂರ ಅವರು ಎರಡು ಕ್ವಿಂಟಾಲ್ ಜೋಳವನ್ನು ನೀಡಿದ್ದಾರೆ.
ಭಿಕ್ಷಾ ಅಭಿಯಾನ ಹಮ್ಮಿಕೊಂಡಿರುವ ಜಿಲ್ಲಾ ಬಿಜೆಪಿ ಯುವ ಮುಖಂಡ ಅನೀಲ ಮೆಣಸಿನಕಾಯಿ ಅವರು ಕೊರೊನಾದಿಂದ ತೀವೃ ಆಥರ್ಿಕ ಸಂಕಷ್ಟದಲ್ಲಿರುವ ಕೂಲಿಕಾರರು, ಬಡವರು, ಕೃಷಿ ಕೂಲಿಕಾಮರ್ಿಕರುಗಳ ನೆರವಿಗಾಗಿ ತಾವು ರೈತರು, ಅಭಿಮಾನಿಗಳು, ಹಿತೈಷಿಗಳ ಬಳಗದಿಂದ ಭಿಕ್ಷಾ ಅಭಿಯಾನದ ಮೂಲಕ ಆಹಾರಧಾನ್ಯವನ್ನು ಸಂಗ್ರಹಿಸಿ ಬಡವರ ಸಂಕಷ್ಟಕ್ಕೆ ನೆರವಾಗುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ತಾವೊಬ್ಬರೇ ತಮ್ಮ ಕೈಲಾದಷ್ಟು ನೆರವನ್ನು ನೀಡುವ ಜೊತೆಗೆ ಹಾಗೂ ತಾಲೂಕಿನ ರೈತರು ಹಾಗೂ ಉಳ್ಳವರು ತಮ್ಮ ಆತ್ಮ ಸಂತೋಷದಿಂದ ನೀಡುವ ಆಹಾರಧಾನ್ಯಗಳನ್ನು ಸಂಗ್ರಹಿಸಿ ತ್ವರಿತಗತಿಯಲ್ಲಿಯೇ ಎಲ್ಲ ಬಡ ಜನತೆಗೆ ವಿತರಿಸಲಾಗುವುದು. ಆಹಾರ ಧಾನ್ಯಗಳ ವಿತರಣೆಗಾಗಿಯೇ ನೂರಾರು ಯುವ ಜನರ ತಂಡಗಳನ್ನು ರಚಿಸಲಾಗಿದೆ. ಪ್ರತಿ ವಾರ್ಡ ಹಾಗೂ ಗ್ರಾಮಗಳಲ್ಲಿ ಆಹಾರ ವಿತರಿಸಲಾಗುವುದು ಎಂದು ಅನೀಲ ಮೆಣಸಿನಕಾಯಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಹೇಶ ದಾಸರ ಮದುವೆಯ ವಾಷರ್ಿಕೋತ್ಸವದ ಸ್ಮರಣೆಗಾಗಿ ಸಿದ್ದಪಡಿಸಿದ್ದ 300ಕ್ಕೂ ಅಧಿಕ ಆಹಾರದಾನ್ಯಗಳ ಕಿಟ್ಗಳನ್ನು ಸಿದ್ದರಾಮೇಶ್ವರ ನಗರದಲ್ಲಿ ಅನೀಲ ಮೆನಸಿನಕಾಯಿ ಅವರು ವಿತರಿಸಿದರು.
ಮಾನವನ ಜೀವನವೇ ಹಲವು ಭಿಕ್ಷೆಗಳಿಂದ ಕೂಡಿದ್ದು, ತಂದೆ-ತಾಯಿ ಜನ್ಮ ನೀಡಿದ್ದು ಒಂದು ಭಿಕ್ಷೆಯಾದರೆ, ಗುರು ನೀಡುವ ಶಿಕ್ಷಣ ಮತ್ತೊಂದು ಭಿಕ್ಷೆ, ವಿಶ್ವದಲ್ಲಿ ಬದುಕು ನಡೆಸಲು ಅಗತ್ಯಗಳಿಗೆ ತಕ್ಕಂತೆ ಒಂದಿಲ್ಲೊಂದು ಭಿಕ್ಷೆ ಪಡೆಯುತ್ತಲೇ ಇರುವ ಮಾನವನ ಜೀವನಕ್ಕೆ ಕಷ್ಟ, ತೊಂದರೆಗಳು ಬಂದಾಗ ಆ ಭಗವಂತೆನೇ ಸಾಕ್ಷಾತ್ ಅನ್ನಪೂಣರ್ೇಶ್ವರಿಯನ್ನೇ ಅಕ್ಕಿಯ ಭಿಕ್ಷೆ ಪಡೆದಿದ್ದಾನೆ. ಹೀಗಿರುವಾಗ ಜಿಲ್ಲಾ ಬಿಜೆಪಿ ಯುವ ಧುರೀಣ ಅನೀಲ ಮೆಣಸಿನಕಾಯಿ ಅವರು ನಡೆಸುತ್ತಿರುವ ಭಿಕ್ಷಾ ಅಭಿಯಾನದ ಶ್ರೇಯಸ್ಸು ರೈತರಿಗೆ ದೊರೆಯಲಿ ಎಂಬ ಉದ್ಧೇಶ ಹೊಂದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬಸವಣ್ಣೆಯ್ಯ ಹಿರೇಮಠ ತಿಳಿಸಿದ್ದಾರೆ.
ಮಹೇಶ ದಾಸರ ಅವರು ಹಮ್ಮಿಕೊಂಡ ಆಹಾರ ಧಾನ್ಯ ಹಾಗೂ ದಿನಸಿಕಿಟ್ಗಳ ವಿತರಣೆ ಕಾರ್ಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೆಂಕಟೇಶ ಬೇಲೂರ, ತಿಮ್ಮಣ್ಣ ಡೋಣಿ, ನೇತ್ರಾವತಿ ದಾಸರ, ವಿಜಯಲಕ್ಷ್ಮೀ ದಾಸರ ಅವರು ದಿನಸಿ ಕಿಟ್ಗಳನ್ನು ವಿತರಿಸಿದರು.