ಕಾರ್ಯನಿರ್ವಾಹಕ ಇಂಜಿನಿಯರ ನಾರಾಯಣ ಕಳ್ಳಿಮನಿಗೆ ಗೌರವ ಸನ್ಮಾನ

Tribute to Executive Engineer Narayan Kakhmani

ಕಾರ್ಯನಿರ್ವಾಹಕ ಇಂಜಿನಿಯರ ನಾರಾಯಣ ಕಳ್ಳಿಮನಿಗೆ ಗೌರವ ಸನ್ಮಾನ 

ಶಿಗ್ಗಾವಿ  10: ತಾಲೂಕ ಗುತ್ತಿಗೆದಾರ ಸಂಘದ ಪದಾಧಿಕಾರಿಗಳು ಹಾವೇರಿ ಹೆಸ್ಕಾಂ ವಿಭಾಗದ ನೂತನ ಕಾರ್ಯನಿರ್ವಾಹಕ ಇಂಜಿನಿಯರ ನಾರಾಯಣ ಕಳ್ಳಿಮನಿಯವರು ಕಾರ್ಯನಿಮಿತ್ಯ ಶಿಗ್ಗಾವ್ ವಿಭಾಗ ಕಚೇರಿಗೆ ಭೇಟಿ ನೀಡಿದಾಗ ಆತ್ಮೀಯವಾಗಿ ಸ್ವಾಗತಿಸಿ ನಂತರ ಸನ್ಮಾನಿಸಿ ಗೌರವಿಸಲಾಯಿತು. 

     ಪೂರ್ವ ನಿಯೋಜಿತ ರಾಜ್ಯ ಗುತ್ತಿಗೆದಾರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಮಂಜುನಾಥ ಮಣ್ಣಣ್ಣವರ ಸ್ಥಳೀಯವಾಗಿ ಮಾಧ್ಯಮ ವರ್ಗದ ಗುತ್ತಿಗೆದಾರವಿದ್ದು ಇಲಾಖೆ ಸಹಕಾರ ಕೋರುತ್ತೇವೆ ಜೊತೆಗೆ ತುಂಡುಗುತ್ತಿಗೆಗಳ ಕೆಲಸಗಳನ್ನು ಸ್ಥಳೀಯವಾಗಿ ಇರುವ ಗುತ್ತಿಗೆದಾರರಿಗೆ ಕೊಡಲು ಆದ್ಯತೆ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಳ್ಳಿಮನಿಯವರು ಸರ್ಕಾರದಿಂದ ಬರುವ ಕೆಲಸಗಳನ್ನು ಸ್ಥಳೀಯ ಗುತ್ತಿಗೆದಾರಿಗೆ ಕೊಡಲಾಗುವುದು ನಿಗದಿತ ಅವಧಿಯಲ್ಲಿ ಕೆಲಸ ನಿರ್ವಹಿಸಿ ಇಲಾಖೆಗೆ ಸ್ಪಂಧಿಸಿ ಎಂದು ಹೇಳಿದರು. 

         ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ಇಂಜಿನಿಯರ್ ವಿನೂತ.ಎಸ್‌. ಸಹಾಯಕ ಲೆಕ್ಕಾಧಿಕಾರಿ ಮಂಜುನಾಥ್ ಗುತ್ತಿಗೆದಾರ, ಸಂಘದ ತಾಲೂಕಾಧ್ಯಕ್ಷ ಎನ್‌.ಎಸ್‌.ಹಿರೇಮಠ, ಶಿವರಾಜ ಮುದುಕಪ್ಪ ಹೊನ್ನಳ್ಳಿ ಕೇಟಿ ಪಾಟೀಲ್ ಸುರೇಶ್ ಬಿಸ್ನಳ್ಳಿ ಇನ್ನು ಹಲವಾರು ಗುತ್ತಿಗೆದಾರರು ಅಧಿಕಾರಿಗಳು ಉಪಸ್ಥಿತರಿದ್ದರು.