ಲೋಕದರ್ಶನ ವರದಿ
ಶಿರಹಟ್ಟಿ 19: ಇದೇ ವರ್ಷ ಎಪ್ರೀಲ್ 27ರಂದು ಸಂಭವಿಸಿದ ಬೆಂಕಿ ದುರಂತದಿಂದ ಮನೆ ಹಾಗೂ ಬಣವೆಗಳನ್ನು ಕಳೆದುಕೊಂಡಿದ್ದ ತಾಲೂಕಿನ ಕೊಗನೂರ ಗ್ರಾಮದ ಐದು ಕುಟುಂಬಗಳಿಗೆ ಶಾಸಕ ರಾಮಣ್ಣ ಲಮಾಣಿ ಸರಕಾರದಿಂದ ಬಂದ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ಎಪ್ಪತ್ತೈದು ಸಾವಿರದ ರೂಗಳ ಚೇಕ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ಬೆಂಕಿ ಅವಘಡದಲ್ಲಿ ಮನೆ ಹಾಗೂ ಬಣವೆಗಳನ್ನು ಕಳೆದುಕೊಂಡಿದ್ದ ಗ್ರಾಮದ 5 ಕುಟುಂಬಗಳಿಗೆ ಸರಕಾರದಿಂದ 1,75,000ರೂಗಳ ಚೆಕ್ ಬಂದಿದ್ದು ಈ ಹಣವನ್ನು ಕುಟುಂಬದವರು ಸದಪಯೋಗ ಪಡೆಸಿಕೊಳ್ಳಬೇಕು. ಬೆಂಕಿ ಸಂಭವಿಸಿ ತಮ್ಮ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಕುಟುಂಬಗಳಿಗೆ ಕೋಗನೂರ ಗ್ರಾಮಸ್ಥರು, ಜನಪ್ರತಿನಿಧಿಗಳು ಸಹಾಯಹಸ್ತ ಚಾಚಿದವರಿಗೆ ಭಯ ಪಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ನಿಮಗೆ ಮರುಳಿ ಬದಕು ಕಟ್ಟಿಕೊಳ್ಳಲು ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡುವದಲ್ಲದೆ ಅಕ್ಕಿ ಬೇಳೆ ಬಟ್ಟೆಗಳು ಪಾತ್ರೆಗಳು ಹೀಗೆ ಅನೇಕ ವಸ್ತುಗಳನ್ನು ತಂದು ಅವರನ್ನು ಸಂತೈಸಿದ್ದು ನೋಡಿದರೆ ಮಾನವಿಯ ಮೌಲ್ಯಗಳನ್ನ ಒಳಗೊಂಡ ಭಾರತಿಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಅನಿಸುತ್ತದೆ.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷರಾದ ಎಸ್.ಪಿ.ಬಳಿಗಾರ, ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ, ಎಪಿಎಮ್ಸಿ ಅಧ್ಯಕ್ಷರಾದ ಜಿ.ಆರ್.ಕೊಪ್ಪದ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಗ್ರಾಪಂ ಅಧ್ಯಕ್ಷೆ ಹನುಮವ್ವ ಕುರಿ, ಡಿ.ಕೆ.ಹೊನ್ನಪ್ಪನವರ, ಶಿವನಗೌಡ ಪಾಟೀಲ್, ಮಲ್ಲೇಶಪ್ಪ ಬೀರಬ್ಬಿ, ರವಿ ಮೂಲಿಮನಿ, ಎಚ್.ಎಸ್.ಚಂಗಗುಡ್ಡಪ್ಪನವರ, ಈರಮ್ಮ ಬ್ಯಾಲಹುಣಸಿ, ಚನ್ನಪ್ಪ ಕ್ಷವರದ, ಬಸಣ್ಣ ಭರಮಣ್ಣವರ ಹಾಗೂ ಗ್ರಾಮದ ಗುರು-ಹಿರಿಯರು ಇದ್ದರು