ಲೋಕದರ್ಶನ ವರದಿ
ಮುಧೋಳ 19: ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಮುಧೋಳ-ಕುಳಲಿ ರಸ್ತೆಯ ಡಿಸ್ಟಲರಿ ಸಂಸ್ಕರಣಾ ಘಟಕದ ಈಟಿಪಿ ವಿಭಾಗ ದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಸ್ಪೋಟಕ್ಕೆ ಅನತಿ ದೂರದಲ್ಲಿರುವ ವಾಜಪೇಯಿ ಆಶ್ರಯ ನಗರದಲ್ಲಿರುವ ಸುಮಾರು ನೂರ ಕ್ಕೂ ಹೆಚ್ಚು ಮನೆ ಗಳು ಬಿರುಕು ಬಿಟ್ಟು ಹಾನಿಗೊಳಗಾಗಿವೆ ನಮಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಇಂದು ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ವಾಜಪೇಯಿ ಆಶ್ರಯ ಮನೆಗಳ ನಿವಾಸಿ ಪೂಜಾ ಪತಂಗೆ ಮಾತನಾಡಿ, ಡಿಸ್ಟಲರಿ ಘಟಕದ ಈಟಿಪಿ ವಿಭಾಗದಲ್ಲಿ ಸ್ಪೋಟದಿಂದಾಗಿ ನಾವು ವಾಸಿಸುವ ಮನೆಗಳ ಮೇಲ್ಚಾವಣಿ ಮತ್ತು ಗೋಡೆಗಳು ಬಿರುಕು ಬಿಟ್ಟು ಹಾನಿಗೊಳಗಾಗಿವೆ. ಯಾವುದೇ ಸಂದರ್ಭದಲ್ಲಿ ನಮ್ಮ ಆಶ್ರಯ ಮನೆಗಳು ಬೀಳುವ ಸ್ಥಿತಿಯಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿ, ಮನೆಗಳ ದುರಸ್ತಿಮಾಡಬೇಕು ಇಲ್ಲವೆ ಹಣಕಾಸಿನ ವ್ಯವಸ್ಥೆ ಮಾಡಬೇಕೆಂದರು.
ಇನ್ನೊರ್ವ ನಿವಾಸಿ ಶೋಭಾ ಬಂಡಿವಡ್ಡರ ಮಾತನಾಡಿ, ನಗರಸಭೆಯ ವಾಜಪೇಯಿ ಆಶ್ರಯ ಮನೆಗಳಲ್ಲಿ ವಾಸವಾಗಿರುವ ನಾವುಗಳೆಲ್ಲರೂ ಕಡು ಬಡವರಾಗಿದ್ದು, ಈ ಘಟನೆಯಿಂದಾಗಿ ನಮಗೆ ಯಾವ ಸಂದರ್ಭದಲ್ಲಿ ಏನಾಗುತ್ತದೆಯೋ ಎಂಬ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಆದ್ದರಿಂದ ಈ ಘಟನೆಗೆ ಕಾರಣರಾದ ಕಾಖರ್ಾನೆಯ ಡಿಸ್ಟಿಲರಿ ಸಂಸ್ಕರಣಾ ಘಟಕದ ಮಾಲೀಕರು ಹಾಗೂ ಸಂಬಂಧಪಟ್ಟ ಇಲಾಖೆಯವರು ವಾಜಪೇಯಿ ಆಶ್ರಯ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ನಗರಸಭೆ ವ್ಯವಸ್ಥಾಪಕಿ ಭಾರತಿ ಜೋಶಿ ಅವರು ಪೌರಾಯುಕ್ತರ ಪರವಾಗಿ ಮನವಿ ಪತ್ರ ಸ್ವಿಕರಿಸಿ ಮಾತನಾಡಿ,ಮುಂದಿನ ಕ್ರಮಕ್ಕಾಗಿ ತಾವು ಮೇಲಾಧಿಕಾರಿಗಳಿಗೆ ತಾವು ಸಲ್ಲಿಸಿರುವ ಮನವಿಯನ್ನು ಹಸ್ತಾಂತರಿಸುವದಾಗಿ ತಿಳಿಸಿದರು.
ವಾಜಪೇಯಿ ಆಶ್ರಯ ಮನೆಗಳ ನಿವಾಸಿಗಳಾದ ಪೂಜಾ ಪತಂಗೆ,ಶೋಭಾ ಬಂಡಿವಡ್ಡರ,ಗಂಗವ್ವ ಚವ್ಹಾಣ,ಜೈರಾಬಿ ಬಾಗವಾನ, ಶಬಾನಾ ಮುಧೋಳ, ಮಹಾದೇವಿ ಬಂಡಿವಡ್ಡರ, ನೀಲಾಕ್ಷಿ ತಿಮ್ಮಾಪೂರ, ದ್ರಾಕ್ಷಾಯಣಿ ಯರಗಟ್ಟಿ, ಗೀತಾ ಮಡಿವಾಳರ, ಜಾನವ್ವಚನ್ನದಾಸರ, ಮಹಾದೇವಿ ಸಾರವಾಡ, ಶಾಂತಾ ಮ್ಯಾಗೇರಿ, ಚಂದ್ರವ್ವ ಮಾಂಗ, ಮಹಾದೇವಿ ಗೌಳಿ, ಗಂಗೂಬಾಯಿ ಪಾಲನಕರ ಸೇರಿದಂತೆ ಹಲವರು ಉಪಸ್ಥಿತರಿ ದ್ದರು.