ಅಮೀತ ಶಹಾ ಅವರನ್ನು ಸಂಪುಟದಿಂದ ವಜಾಗೊಳಿಸಿ: ದಸಂಸ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ ಒತ್ತಾಯ..!
ಕಾಗವಾಡ 19 : ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮೀತ ಶಹಾ ಅವರನ್ನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಕೆಂದು ದಲಿಸ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ ಒತ್ತಾಯಿಸಿದ್ದಾರೆ. ಅವರು ಗುರುವಾರ ದಿ.19 ರಂದು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಾತನಾಡುತ್ತಿದ್ದರು. ದೇಶವನ್ನು ಸಂವಿಧಾನದಡಿ ಆಳುವವವರೇ ಈ ಸಂವಿಧಾನಕ್ಕೆ ತಿರುಗಿ ಬೀಳುವ ಕೆಲಸ ಮಾಡುತ್ತಿದ್ದಾರೆ. ಡಾ. ಬಾಬಾಸಾಹೇಬರ ವಿಚಾರ ಧಾರೆಗೆ ಕೊಡಲಿ ಪೆಟ್ಟು ಕೊಟ್ಟು, ದೇಶಕ್ಕೆ ಮನುಸ್ಮೃತಿ ಜಾರಿಗೆ ತರುವ ಉದ್ದೇಶ ಹೊಂದಿದ್ದಾರೆ. ಆ ಮನಸ್ಥಿತಿಯನ್ನು ಹೊಂದಿರುವ ಅಮೀತ ಶಹಾ ಅವರ ಬಾಯಿಂದ ಈ ರೀತಿಯ ಪದಗಳು ಬಂದಿವೆ. ದೇವರ ಹೆಸರು ಹೇಳಿದರೆ ಸ್ವರ್ಗ ಸಿಗುತ್ತದೆ ಎನ್ನುವ ಶಬ್ದವೇ ನಮ್ಮ ಸಂವಿಧಾನದಲ್ಲಿಲ್ಲ. ಆ ಶಬ್ದಗಳು ಮನುಸ್ಮೃತಿಯಲ್ಲಿವೆ. ಆ ಮನುಸ್ಮೃತಿಯ ವಿಚಾರಧಾರೆಯನ್ನು ನಮ್ಮೆಲ್ಲರ ಮೇಲೆ ಹೇರಲು ಹೊರಟು. ದೇಶದಲ್ಲಿ ಅಶಾಂತಿ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ತಕ್ಷಣ ರಾಷ್ಟ್ರಪತಿಯವರು ಅಮೀತ ಶಹಾ ಅವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಜಯಪಾಲ ಬಡಿಗೇರ, ವಿಧ್ಯಾಧರ ದೊಂಡಾರೆ, ವಿಧ್ಯಾಧರ ಮೌರ್ಯ, ಅಮಿತ ದಿಕ್ಷಾಂತ, ಮಾತನಾಡಿದರು. ನಂತರ ಉಪತಹಶಿಲ್ದಾರ ವಿಜಯಕುಮಾರ ಚೌಗಲಾ ಇವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ದಂಸಸ ತಾಲೂಕಾ ಅಧ್ಯಕ್ಷ ಸಚೀನ ಪೂಜಾರಿ, ಮಂಗಸೂಳಿ ಗಾ.್ರಪಂ. ಅಧ್ಯಕ್ಷ ಬಾಳು ಭಜಂತ್ರಿ, ವಿಜಯ ಅಸೋದೆ, ಅಮರ ಪಾಟೀಲ್, ರಾಜು ಭಜಂತ್ರಿ, ಪ್ರಕಾಶ ದೊಂಡಾರೆ, ಬಾಳಾಸಾಬ ಕಾಂಬಳೆ, ಅವಿನಾಶ ದೇವಣೆ, ಮಹಾಂತೇಶ ಬಡಿಗೇರ, ರವಿ ಕುರಣಿ, ಯಲ್ಲಪ್ಪ ನಾವಿ, ಪ್ರಿಯಾ ಕಾಂಬಳೆ, ಮಂಜುನಾಥ ಹೊನಕಾಂಬಳೆ, ಯಲ್ಲಪ್ಪ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.