ಶ್ರೀ ಬಸವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರವಚನ

ಶ್ರೀ ಬಸವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರವಚನ Discourse on the occasion of the worship of the merits of Sri Basavananda Mahaswamy

              ಮಹಾಲಿಂಗಪುರ  22: ಇತರರ ದೋಷವ ಕಂಡು ಹಾಸ್ಯವ ಮಾಡುವರಲ್ಲ ತಮ್ಮೊಳಗಿವೆ ಸಾವಿರ ದೋಷ ಕಾಣುವದೇ ಇಲ್ಲ ಅಂತಾ ಸಂತ ಕಬೀರರು ಹೇಳಿದ್ದಾರೆ.ನಿಂದಕರು ಅವರ ಪಾಡಿಗೆ ಅವರು ನಿಂದಿಸುತ್ತಿರಲಿ ನಮ್ಮ ಪಾಡಿಗೆ ನಾವು ಯಶಶ್ಸಿನತ್ತ ಪಯಣ ಬೆಳೆಸಬೇಕು ಎಂದು ವಿಜಯಪುರದ ರಾಮಕೃಷ್ಣ ದೇವರು ಹೇಳಿದರು. ಸ್ಥಳೀಯ ಶ್ರೀ ಬಸವಾನಂದ ಟ್ರಸ್ಟ ಕಮೀಟಿ ವತಿಯಿಂದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ರವಿವಾರ ಸಂಜೆ ಶ್ರೀ ಬಸವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಆಯೋಜಿಸಿದ್ದ ಪ್ರಥಮ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು .ನಿಂದಕರು ಅಳಿದು ಹೋಗುತ್ತಾರೆ.ಅದನ್ನು ಸಹಿಸಿ ಪಯಣ ಮುಂದುವರೆಸಿದವರು ಅಳಿಯದೇ ಉಳಿಯುತ್ತಾರೆ.ಏನು ಕಂಡರೂ ಅದರಲ್ಲಿ ಹುಳುಕನ್ನು ಹುಡುಕುವ ದೃಷ್ಠಿ ಹಲವರಲ್ಲಿದೆ.ಕೆಟ್ಟದ್ದನ್ನು ಮಾತ್ರ ಹುಡುಕುವವರಿಗೆ ಒಳ್ಳೆಯದು ಕಾಣುವದೇ ಇಲ್ಲ.ನಾವು ಸ್ವೀಕಾರ ಮಾಡಿದ ಹಾಗೆ ಜಗತ್ತು ಕಾಣಿಸುತ್ತದೆ.ನಿಂದಕನೇ ಜಗತ್ತಿನಲ್ಲಿ ನೀನೇ ಸರ್ವಶ್ರೇಷ್ಠನಲ್ಲ.ಕೆಲವರಿಗೆ ಕೌಶಲ್ಯವನ್ನು ಭಗವಂತ ಕೊಟ್ಟು ಕಳಿಸಿದ್ದಾನೆ.ಅದು ನಿನ್ನಲ್ಲಿ ಇಲ್ಲ ಅಂತಾ ಇದ್ದವರನ್ನು ನಿಂದಿಸಬೇಡ.ನಿಂದನೆ ಬಿಟ್ಟು ಆನಂದದ ಜೀವನ ಯಾತ್ರೆ ಮುನ್ನಡೆಸು  ಅಂತಾ ನಿಜಗುಣ ಶಿವಯೋಗಿಗಳು ಹೇಳಿದ್ದಾರೆ.ಮನುಷ್ಯನೇ ನಿನ್ನ ಕೈಬೆರಳುಗಳು ಒಂದಕ್ಕೊಂದು ಸಮ ಇಲ್ಲ.ಜಗತ್ತಿನ ಜನರೆಲ್ಲರೂ ನಿನ್ನಂತೆ ಇರಲೆಂದು ಏಕೆ ಬಯಸುವೆ?ನಿನ್ನಂತೆ ನೀನು ಬದುಕು ಅವರಂತೆ ಅವರು ಬದುಕುತ್ತಾರೆ ಇದು ಭಗವಂತನ ವಿಶಿಷ್ಠತೆ. 

                ಒಬ್ಬ ರಾಜ ಕೆರೆಯ ಸುತ್ತ ಸಂಚರಿಸುತ್ತಿದ್ದಾಗ ನಾಲ್ಕು ಬಾತುಕೋಳಿಗಳು ಕಮಲದ ಹೂವನ್ನು ನಿಂದಿಸುತ್ತಿರುತ್ತವೆ.ಅವರು ನಿಂದಿಸುತ್ತಿದ್ದರೂ ಕಮಲ ಆನಂದದಿಂದಲೇ ಇರುತ್ತದೆ.ಇದನ್ನು ಕಂಡು ರಾಜನು  ಅವರು ನಿಂದಿಸುತ್ತಿದ್ದರೂ ನೀನು ಸುಮ್ಮನಿರುವೆಲ್ಲ ಎಂದು ಕಮಲದ ಹೂವಿಗೆ ಕೇಳುತ್ತಾನೆ.ನಾಲ್ಕು ಬಾತುಕೋಳಿಗಳ ಮಾತು ನನಗೇನು ಅನ್ನಿಸುವದಿಲ್ಲ.ದಿನ ಬೆಳಗಾದ ತಕ್ಷಣ ಸಾವಿರಾರು ಜೇನು ಹುಳುಗಳು,ದುಂಬಿಗಳು  ನನ್ನ ಮಕರಂದವನ್ನು ಹೀರಿ ಆನಂದ ಅನುಭವಿಸಿ ನನಗೆ ಧನ್ಯತೆಯನ್ನು ಅರ​‍್ಿಸಿ ಹೋಗುತ್ತವೆಯಲ್ಲವೇ.ನಾನು ನಾಲ್ಕು ಬಾತುಕೋಳಿಗಳ ಮಾತು ಕೇಳುತ್ತಾ ಕುಳಿತರೆ ಆ ಜೇನು ಹುಳುಗಳ ಮಾತು ಕೇಳದೇ ಹೋಗುತ್ತವೆ ರಾಜನೇ.ನಾಲ್ಕು ಬಾತುಕೋಳೀಗಳ ಮಾತು ನನಗೆ ಮುಖ್ಯವಲ್ಲ ಸಾವಿರ-ಸಾವಿರ ಜೇನುನೊಣಗಳು,ದುಂಬಿಗಳು ನನ್ನನ್ನು ಕೊಂಡಾಡುತ್ತವೆಯಲ್ಲ ಅದು ಮುಖ್ಯ ರಾಜನೇ. ನಾನು ಭಾಗ್ಯವಂತ  ಅಂತಾ ಕಮಲ ಹೇಳುತ್ತದೆ.ಇದು ಬದುಕಿಗೆ ಮಾರ್ಗ ತೋರಿಸುವ ಮಾತು.ಜನರನ್ನು ಏಕೆ ನಿಂದಿಸುತ್ತಾ ಹೊಗುವೆ ಮನಷ್ಯನೇ ನಿನ್ನ ಆಚಾರ ವಿಚಾರ ಬದಲಿಸಿಕೋ ನಿನ್ನ ಬದುಕನ್ನು ಧನ್ಯತೆಯೆಡೆ ಸಾಗಿಸು. 

             ಒಂದು ಊರಿನಲ್ಲಿ ಒಬ್ಬ ಪಂಡೀತನಿದ್ದ ಅವನ ಮನೆ ಎದುರು ಒಬ್ಬ ಸಾಮಾನ್ಯ ಕೆಲಸಗಾರ ಇದ್ದ.ಆ ಪಂಡೀತ ತನ್ನಲ್ಲಿ ಭವಿಷ್ಯ ಕೇಳಲು ಬರುವ ಜನರೆದುರು ಸಾಮಾನ್ಯ ವ್ಯಕ್ತಿಗೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತ ಆತ ಅಜ್ಞಾನಿ ಅಂತ ಹೇಳುತ್ತಿದ್ದ ಆದರೆ ಆ ಕೆಲಸಗಾರ ನಮ್ಮ ಮನೆ ಎದರು ಒಬ್ಬ ಪಂಡೀತರಿದ್ದಾರೆ ತುಂಬಾ ತುಂಬಾ ಜಾಣರು ಅಂತಾ ಜನರೆದುರು ಪಂಡೀತನನ್ನು ಹೊಗಳುತ್ತಿದ್ದ.ಇಬ್ಬರೂ ಒಂದೇ ದಿನ ಸಾವನ್ನಪ್ಪಿದರು.ಪಂಡೀತನನ್ನು ಕರೆದೊಯ್ಯಲು ಯಮ ಬಂದ.ಸಾಮಾನ್ಯ ವ್ಯಕ್ತಿಯನ್ನು ಕರೆದೊಯ್ಯಲು ದೇವತೆಗಳು ಬಂದರು.ಮಾರ್ಗ ಮಧ್ಯ ಪಂಡೀತನ ಆತ್ಮ ನೀನು ದಾರಿ ತಪ್ಪಿರುವ ಯಮದೇವ.ನೀನು ಆ ಸಾಮಾನ್ಯನ ಶವದ ಕಡೆ ಸಾಗಬೇಕಾಗಿತ್ತು.ನಾನು ಅನೇಕರಿಗೆ ಸನ್ಮಾರ್ಗ ತೊರಿದ ಪಂಡೀತ ಅಂತಾ ಹೇಳುತ್ತದೆ.ಆಗ ಯಮಧರ್ಮ ಹೇಳುತ್ತಾನೆ.ನೀನು ಆ ವ್ಯಕ್ತಿಯನ್ನು ನಿಂದಿಸಿರುವೆ.ಆದರೆ ಆತ  ನಿನ್ನನ್ನು ಹೊಗಳಿದ್ದಾನೆ ಕಾರಣ ನಿನ್ನ  ಪುಣ್ಯ ಅವನಿಗೆ ದಕ್ಕಿದೆ ಎಂದು ಉತ್ತರಿಸುತ್ತಾನೆ.ಪಪರ ಚಿಂತೆ ಬಿಡಿ ನಿಮ್ಮ ಮನವ ನೀವು ಸಂತೈಸಿಕೊಳ್ಳಿ ಎಂದು ಪ್ರವಚನ ಮುಗಿಸಿದರು.