ಗದಗ 03: ವಿಕಲಚೇತನರು ಕೀಳರಿಮೆಯನ್ನು ತೊರೆದು ಕ್ರಿಯಾಶೀಲರಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗದಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಆಶು ನದಾಫ್ ತಿಳಿಸಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಸೇವಾನಿರತ ಸಂಘ ಸಂಸ್ಥೆಗಳು ಹಾಗೂ ವಿಕಲಚೇತನರ ಕೆ ್ಷಮಾಭಿವೃದ್ಧಿ ಸಂಘ ಸಂಸ್ಥೆಗಳು ಗದಗ ಇವರ ಸಂಯುಕ್ತ ಆಶ್ರಯದಲ್ಲಿಂದು ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ನಿಮಿತ್ತ ಏರ್ಪಡಿಸಲಾಗಿದ್ದ ವಿಕಲಚೇತನರ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಅನೇಕ ಸ್ಪಧರ್ೆಗಳನ್ನು ಏರ್ಪಡಿಸಲಾಗಿದ್ದು ವಿಕಲಚೇತನರು ಅದರಲ್ಲಿ ಭಾಗವಹಿಸಬೇಕು. ವಿಕಲಚೇತನರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಆಶು ನದಾಫ್ ನುಡಿದರು.
ಸಮಾರಂಭದಲ್ಲಿ ವಿಕಲಚೇತನರ ಸಂಘದ ಶಿರಹಟ್ಟಿ ತಾಲೂಕಾ ಅಧ್ಯಕ್ಷರಾದ ಮೋಹನ ನವಲೆ, ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕಿವುಡ ಮಕ್ಕಳ ಶಾಲೆಯ ಶಿಕ್ಷಕಿ ಲಲಿತಾ ಗಾರವಾಡಮಠ, ಅರುಣೋದಯ ವಿಶೇಷ ಅಗತ್ಯವುಳ್ಳ ಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಪ್ಪ ಹಕ್ಕಿ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ವಿಕಲಚೇತನ ಶಾಲೆಗಳ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ರಾಜ್ಯಾಧ್ಯಕ್ಷ ಎಲ್.ಎಮ್. ತಳಬಾಳ, ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯ ವೀರೇಂದ್ರ ಸಿಂಗ್ ರಜಪೂತ, ಪಂಡಿತ ಪಂಚಾಕ್ಷರ ಗವಾಯಿಗಳ ಅಂಧರ ವಸತಿಯುತ ಸಂಗೀತ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಕೆ.ವಿ. ಮುದ್ಲಾಪುರ, ವಿಕಲಚೇತನರ ಕ್ಷೇತ್ರದಲ್ಲಿ ಸೇವಾ ನಿರತ ಸಂಘ ಸಂಸ್ಥೆಗಳು, ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳು, ಪದಾಧಿಕಾರಿಗಳು, ಎಮ್.ಆರ್. ಡಬ್ಲ್ಯು, ವಿ.ಆರ್. ಡಬ್ಲ್ಯು, ಯು.ಆರ್. ಡಬ್ಲ್ಯುಗಳು, ವಿಕಲಚೇತನರುಗಳು ಉಪಸ್ಥಿತರಿದ್ದರು.
ಶಿಕ್ಷಕಿ ಆರ್.ಕೆ. ನಂದಿಕೋಲ ಪ್ರಾಥರ್ಿಸಿದರು. ಎಮ್.ಆರ್. ಡಬ್ಲ್ಯು ಬಸವರಾಜ ಓಲಿ ಸರ್ವರನ್ನು ಸ್ವಾಗತಿಸಿದರು. ರಾಜ್ಯ ಪ್ರಶಸ್ತಿ ವಿಜೇತರಾದ ಮುಖ್ಯ ಶಿಕ್ಷಕರಾದ ಡಿ.ಜಿ. ಕುಲಕಣರ್ಿ ಕಾರ್ಯಕ್ರಮ ನಿರೂಪಿಸಿದರು. ಎಮ್.ಆರ್. ಡಬ್ಲು. ಭಾರತಿ ಮೂರಶಿಳ್ಳಿನ ವಂದಿಸಿದರು.