ವಿಕಲಚೇತನರು ಸಕರ್ಾರದ ಸೌಲಭ್ಯ ಪಡೆದುಕೊಳ್ಳಿ: ಮೂಲಿಮನಿ

ಗದಗ 13: ವಿಕಲಚೇತನರು ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಪಡಿಸಕೊಳ್ಳಬೇಕು ಎಂದು  ಗದಗ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ನುಡಿದರು.  

ಅವರಿಂದು  ನಗರದ ವಿವೇಕಾನಂದ ಸಭಾಂಗಣದಲ್ಲಿ  ಕೇಂದ್ರ ಸಕರ್ಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ಅಲಿಮ್ಕೋ ಇವರುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸಕರ್ಾರದ ವಿಶೇಷ ಆಡಿಪ್ ಮತ್ತು ಆರ್. ವೈ.  ಯೋಜನೆಯಡಿ ವಿಕಲಚೇತನರಿಗೆ ಹಾಗೂ ಬಿಪಿಎಲ್ ಹೊಂದಿದ  ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.  

         ಅಂಗವೈಕಲ್ಯವನ್ನು ಮೆಟ್ಟಿ ನಿಂತು ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು.  ಇತರರೊಂದಿಗೆ ಶಕ್ತಿಯುತವಾಗಿ ಬದುಕಬೇಕು ಎಂದು  ಶಕುಂತಲಾ ಮೂಲಿಮನಿ ನುಡಿದರು.

ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ  ಕೇಂದ್ರ ಸಕರ್ಾರದ ಈ ಮಹತ್ವಾಕಾಂಕ್ಷಿ ಯೋಜನೆಯಡಿ  ವಿಕಲಚೇತನರು ಹಾಗೂ ಬಿಪಿಲ್ ಹೊಂದಿದ  ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು ಇದರ ಸದುಪಯೋಗವನ್ನು ವಿಕಲಚೇತನರು ಹಾಗೂ ಹಿರಿಯ ನಾಗರಿಕರು  ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ಮಾತನಾಡಿ  ಕೇಂದ್ರ ಸಕರ್ಾರದ ಈ ಯೋಜನೆಯ ಜೊತೆಗೆ ರಾಜ್ಯ ಸಕರ್ಾರದ ಹಲವಾರು ಯೋಜನೆಗಳು ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ ಲಭ್ಯ ಇವೆ.   ಜಿಲ್ಲೆಯಲ್ಲಿನ   436  ವಿಕಲಚೇತನ ಹಾಗೂ   ಹಿರಿಯ ನಾಗರಿಕರ   ಫಲಾನುಭವಿಗಳಿಗೆ  ಸಾಧನೆ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು.  ಅಂಗವಿಕಲರು ತಾವೂ ಯಾರಿಗಿಂತ ಕಡಿಮೆ ಇಲ್ಲ ಎಂದು ತಿಳಿದುಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ತಮಗೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಆಸಕ್ತಿಯಿದೆಯೋ  ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.  ಈ ನಿಟ್ಟಿನಲ್ಲಿ   ಇಲಾಖೆಯ ಜೊತೆಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಮಂಜುನಾಥ ಚವ್ಹಾಣ ತಿಳಿಸಿದರು.

        ಜಿ.ಪಂ ದ  ಕೃಷಿ ಮತ್ತು ಕೈಗಾರಿಕಾ  ಸ್ಥಾಯಿ  ಸಮಿತಿ ಅಧ್ಯಕ್ಷರಾದ ಈರಪ್ಪ ನಾಡಗೌಡ್ರ ಮಾತನಾಡಿ ಅಂಗವಿಕಲರಿಗೆ ಸಕರ್ಾರದಿಂದ ಹಲವಾರು ಯೋಜನೆಗಳಿವೆ.  ಕೇಂದ್ರ ಸಕರ್ಾರದ ಈ ಮಹಾತ್ವಾಕಾಂಕ್ಷಿ ಯೋಜನೆಯ ಸೌಲಭ್ಯ  ಅಂಗವಿಕಲರು ಪಡೆದುಕೊಳ್ಳಬೇಕು.  ಸ್ವಾವಲಂಬಿಗಳಾಗಿ ಬದುಕಬೇಕು.  ಇತರರೊಂದಿಗೆ ಶಕ್ತಿಯುತವಾಗಿ ಜೀವನ ನಡೆಸಬೇಕು.  ಅಂಗವಿಕಲರು ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ  ಎಂದು ತಿಳಿಸಿದರು.  

       ಅಲಿಮ್ಕೋದ  (ಂಡಿಣಜಿಛಿಚಿಟ ಐಟಛ ಒಚಿಟಿಣಜಿಚಿಛಿಣಣಡಿಟಿರ ಅಠಡಿಠಿಠಡಿಚಿಣಠಟಿ ಠಜಿ ಟಿಜಚಿ ( ಂಐಒಅಔ)   ಪ್ರತಿನಿಧಿ ಅಭಯ ಪ್ರತಾಪ ಸಿಂಗ  ಅವರು ಮಾತನಾಡಿ  ಕೇಂದ್ರ ಸಕರ್ಾರದ ವಿಶೇಷ  ಆಡಿಪ್ ಮತ್ತು ಆರ್. ವಿ.ವೈ. ಯೋಜನೆಯಡಿ  ಗದಗ ಜಿಲ್ಲೆಯಲ್ಲಿನ 436 ವಿಕಲಚೇತನರು ಹಾಗೂ ಬಿಪಿಎಲ್  ಹೊಂದಿದ     ಹಿರಿಯ ನಾಗರಿಕ  ಫಲಾನುಭವಿಗಳನ್ನು  ಗುರುತಿಸಿ  28 ಲಕ್ಷ ರೂ. ವೆಚ್ಚದಡಿ  ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.   ಟ್ರೈಸಿಕಲ್, ವೀಲ್ ಚೇರ್,  ಕ್ರಚಸ್  ಆಕ್ಷಿಲರಿ, ಬ್ರೇಲ್ ಕಿಟ್, ಎಮ್. ಎಸ್ ಐ ಇ ಡಿ ಕಿಟ್ಸ್ , ಹೀಯರಿಂಗ್  ಏಡ್ ಮಶಿನ್,  ಸಿಪಿ ಚೇರ್ಸ,  ಮುಂತಾದ ಸಾಧನ ಸಲಕರಣೆಗಳನ್ನು ಫಲಾನುಭವಿಗಳಿಗೆ  ವಿತರಿಸಲಾಗುತ್ತಿದೆ ಎಂದು ತಿಳಿಸಿದರು.       

        ಕಾರ್ಯಕ್ರಮದಲ್ಲಿ  ಗದಗ ಜಿ.ಪಂ. ದ  ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ,  ಗದಗ  ತಾಲೂಕು ಪಂಚಾಯತ್  ಅಧ್ಯಕ್ಷ ಮೋಹನ ದುರಗಣ್ಣವರ,  ಎಮ್. ಆರ್. ಡಬ್ಲ್ಯು, ವಿ.ಆರ್. ಡಬ್ಲ್ಯೂ, ಗಳು,  ವಿಕಲಚೇತನರು ಹಾಗೂ ಹಿರಿಯ ನಾಗರಿಕರುಗಳು ಉಪಸ್ಥಿತರಿದ್ದರು. ಶ್ರೀಧರ ಪೂಜಾರ  ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ್ ವಂದಿಸಿದರು.