ಧಾರವಾಡ 04: ವಂಶವಾಹಿ ಅಥವಾ ಸರಿಯಾದ ಆರೋಗ್ಯ, ಆರೈಕೆ ಇಲ್ಲದ ಕಾರಣಗಳಿಂದಾಗಿ ಅನೇಕ ಮಕ್ಕಳು ಅನಾರೋಗ್ಯ, ವಿಕಲಚೇತನಕ್ಕೆ ಒಳಗಾಗಿರುತ್ತಾರೆ. ಅಂತಹವರ ಸೇವೆ ನಿಜವಾದ ದೇವರ ಸೇವೆ ಆಗುತ್ತದೆ. ಅಂತಹ ಮಕ್ಕಳ ಹಕ್ಕುಗಳ ರಕ್ಷಣೆ ಆಗಬೇಕೆಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಹೇಳಿದರು.
ಅವರು ಇಂದು ಬೆಳಿಗ್ಗೆ ಹಿಂದಿ ಪ್ರಚಾರ ಸಭಾ ಬಳಿ ಇರುವ ಪಾಸ್ತೆ ಅವರ ಡಾ.ಸ್ಟೈನರ್ ವಿಶೇಷ ಮಕ್ಕಳ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ವಿಕಲಚೇತನ ಮಕ್ಕಳ ಆರೈಕೆ ಪಾಲಕರಿಗೆ, ಶಿಕ್ಷಕರಿಗೆ ಒಂದು ಚಾಲೇಂಜ್ ಆಗಿರುತ್ತದೆ. ತಮ್ಮದಲ್ಲದ ತಪ್ಪಿಗೆ ಮಕ್ಕಳು ಹಿಂಸೆ ಅನುಭವಿಸುತ್ತಾರೆ. ಅವರಿಗೆ ಸರಿಯಾದ ಸೌಲಭ್ಯಗಳನ್ನು ಪೂರೈಸಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕೆಂದು ಅವರು ಹೇಳಿದರು.
ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆಗೆ ಸಮಾನ. ಭಾರತೀಯ ಪರಂಪರೆಯಲ್ಲಿ ಅಸಹಾಯಕರಿಗೆ, ಅನಾರೋಗ್ಯ ಪೀಡಿತರಿಗೆ, ಬಡವರಿಗೆ ಉಚಿತ ಸೇವೆ ನೀಡುವ ಸಂಸ್ಕೃತಿ ಆದಿಯಿಂದಲೂ ಬೆಳೆದು ಬಂದಿದೆ. ಸಂವಿಧಾನಾತ್ಮಕವಾದ ಹಕ್ಕುಗಳು ಯಾವ ಭೇದ ಭಾವಗಳಿಲ್ಲದೆ ಎಲ್ಲರಿಗೂ ಸಿಗುವಂತೆ ಎಲ್ಲರೂ ಜಾಗೃತಿ ವಹಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ್ ಅವರು ಮಾತನಾಡಿ, ವಿಕಲಚೇತನ ಮಕ್ಕಳು ಸೇರಿದಂತೆ ಎಲ್ಲ ಮಕ್ಕಳ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಬಿಸಿಯೂಟ, ಹಾಲು ಸೇರಿದಂತೆ ಪೌಷ್ಠಿಕಾಂಶದ ಆಹಾರಗಳನ್ನು ಮಕ್ಕಳಿಗೆ ನಿರಂತರವಾಗಿ ವಿತರಿಸಲಾಗುತ್ತಿದೆ. ಪಾಸ್ತೆ ಅವರ ವಿಕಲಚೇತನ ಮಕ್ಕಳ ಶಾಲೆಗೆ ಜಿಲ್ಲಾ ಪಂಚಾಯತ್ದಿಂದ ಬಿಸಿಯೂಟ ಸೇರಿದಂತೆ ವಿವಿಧ ನೆರವು ನೀಡಲಾಗಿದೆ. ಇನ್ನೂ ಅಗತ್ಯವಿರುವ ನೆರವನ್ನು ಪರಿಶೀಲಿಸಿ, ನೀಡಲಾಗುವುದು ಎಂದು ಹೇಳಿದರು.
ಶಾಲೆ ನಿದರ್ೆಶಕ ಜೆ.ಕೆ. ಪಾಸ್ತೆ ಮಾತನಾಡಿ, ಕಟ್ಟಡ ರಿಪೇರಿ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಉನ್ನತೀಕರಣಕ್ಕೆ ಮನವಿ ಮಾಡಿದರು.
ಕಳೆದ 10 ವರ್ಷಗಳಿಂದ ತನ್ನ ವಿಕಲಚೇತನ ಮಗ ನೀಲಕಂಠನನ್ನು ನಿತ್ಯ ಶಾಲೆಗೆ ತಾವೇ ಕರೆದುತಂದು, ಮರಳಿ ಕರೆದುಕೊಂಡು ಹೋಗಿ ಆರೈಕೆ ಮಾಡುತ್ತಿರುವ ಕಲ್ಯಾಣನಗರ ನಿವಾಸಿ ಲಲಿತಾ ಚಿದಂಬರ ಕುಲಕಣರ್ಿ ಅವರನ್ನು ಜಿಲ್ಲಾ ನ್ಯಾಯಾಧೀಶರು ಮತ್ತು ಸಿಇಓ ಅವರು ಸನ್ಮಾನಿಸಿ, ಗೌರವಿಸಿದರು. ಪ್ರಶಾಂತ ಕೆ. ಪಾಸ್ತೆ ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ ಆರ್.ಎಸ್. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಖೊಡೆ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಹೊಸಮನಿ ವಂದಿಸಿದರು.
ವಿಶ್ವಅಂಗವಿಕಲರ ದಿನಾಚರಣೆ ನಿಮಿತ್ಯ ಶಾಲೆಯ ವಿಕಲಚೇತನ ಮಕ್ಕಳಿಗೆ ಪ್ರಧಾನ ನ್ಯಾಯಾಧೀಶ ಈಶಪ್ಪ ಭೂತೆ, ಸಿಇಓ ಡಾ.ಸತೀಶ್ ಬಿ.ಸಿ. ಹಾಗೂ ಹಿರಿಯ ನ್ಯಾಯಾಧೀಶ ಚಿಣ್ಣನ್ನವರ ಆರ್.ಎಸ್. ಅವರು ಹಣ್ಣು, ಬಿಸ್ಕೀಟ್, ಹೂವು ವಿತರಿಸಿ, ಶುಭ ಹಾರೈಸಿದರು.