ವಿಕಲಚೇತನರ ಸವರ್ಾಂಗೀಣ ಅಭಿವೃದ್ಧಿಗಾಗಿ ಡಿಸೆಬಿಲಿಟಿ(ಎಪಿಡಿ) ಸಂಸ್ಥೆ ಶ್ರಮಿಸುತ್ತಿದೆ : ಶಿವಾ ಹಿರೇಮಠ

ಲೋಕದರ್ಶನ ವರದಿ

ಬೆಳಗಾವಿ 16: ರಾಜ್ಯದಲ್ಲಿ ವಿಕಚಲಚೇತನರ ಪ್ರಮಾಣ ನೋಡಿದರೆ, ಬೆಳಗಾವಿ ಎರಡನೇ ಸ್ಥಾನದಲ್ಲಿದೆ. ನಿಟ್ಟಿನಲ್ಲಿ ವಿಕಲಚೇತನರ ಸವರ್ಾಂಗೀಣ ಅಭಿವೃದ್ಧಿಗಾಗಿ ದಿ. ಅಸೋಸಿಯೇಷನ್ ಆಪ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ಸಂಸ್ಥೆ ಶ್ರಮಿಸುತ್ತಿದ್ದು ವಿಕಲಚೇತನರು ಸ್ವಾಭಿಮಾನದ ಬದುಕು ಸಾಗಿಸಲು ಅವರ ಜೊತೆ ನಿಲ್ಲಲಿದೆ ಎಂದು ವಿಭಾಗೀಯ ಕಾರ್ಯಕ್ರಮಗಳ ಉಪನಿದರ್ೇಶಕ ಶಿವಾ ಹಿರೇಮಠ ತಿಳಿಸಿದರು.

ಮಂಗಳವಾರ ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ  ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದಲ್ಲಿ ಒಟ್ಟು 301994 ಜನರು ವಿಕಲಚೇತನರಿದ್ದು, ಇವರೆಲ್ಲರನ್ನು ತಲುಪಿ ಅವರಿಗೆ ಸಿಗುತ್ತಿರುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅವರಿಗೆ ಸ್ವಾವಲಂಭಿ ಜೀವನ ನಡೆಸಲು ಉದ್ಯೋಗ ಸೃಷ್ಠಿ ಮಾಡಿಕೊಡಲಾಗುವುದು. ಸಕರ್ಾರ ಶೇ. 3 ರಿಂದ ಶೇ. 5 ರಷ್ಟು ಮೀಸಲಾತಿ ಹೆಚ್ಚಿಸಿದರು ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆದ್ದರಿಂದ ಸಕರ್ಾರ ಮತ್ತು ವಿಕಲಚೇತನರ ನಡುವೆ ನಮ್ಮ ಸಂಸ್ಥೆ ಕೊಂಡಿಯಾಗಿ ಸೇವೆ ಸಲ್ಲಿಸಲಿದೆ.

ಈಗಾಗಲೇ 12 ಜಿಲ್ಲೆಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಬೆಳಗಾವಿ ವಿಭಾಗದ ವಿಕಲಚೇತನರು ಸೌಲಭ್ಯಗಳನ್ನು ಪಡೆಯುವಲ್ಲಿ ಮುಂಚೂಣಿ ಜಿಲ್ಲೆಯನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ ಎಂದು ಹೇಳಿದರು. ಎಪಿಡಿ ಸಂಸ್ಥೆ ದೈಹಿಕ ಅಂಗವಿಕಲತೆ, ವಾಕ್ ಮತ್ತು ಶ್ರವಣ ನ್ಯೂನತೆ, ಮೆದುಳುವಾತ ಮತ್ತು ಮಾನಸಿಕ ಅಸ್ವಸ್ಥತೆಯ ಸಮಸ್ಯೆಗಳಿಗೆ ಹೆಚ್ಚಿನ ಗಮನ ನೀಡುತ್ತಿದ್ದು, ಜೀವನ ಚಕ್ರದ ವಿಧಾನದಂತೆ ಹುಟ್ಟಿನಿಂದ ಜೀವನೋಪಾಯದ ವರೆಗೆ ಶೀಘ್ರ ಪುನಶ್ಚೇತನ, ಸಮನ್ವಯ ಶಿಕ್ಷಣ, ಯುವಕರಿಗೆ ತರಬೇತಿ ಮತ್ತು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ಬೆಳಗಾವಿ ಹಾಗೂ ಕಲ್ಬುಗರ್ಿ ವಿಭಾಗದ ಉದ್ದಗಲಕ್ಕೂ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮವನ್ನು ವಿಸ್ತರಿಸುವುದರ ಮೂಲಕ ಆಥರ್ಿಕವಾಗಿ ಹಿಂದುಳಿದ ಸಮುದಾಯಗಳಲ್ಲಿನ 80 ಸಾವಿರ ಅಂಗವಿಕಲರನ್ನು 131100 ಸಹಭಾಗಿಗಳನ್ನು ತಲುಪುವ ಯೋಜನೆ ಹಾಕಿಕೊಳ್ಳಲಾಗಿದೆ. ಸ್ಥಳೀಯ ಸಕರ್ಾರ, ಸಂಸ್ಥೆಗಳ ಸಹಯೋಗದಲ್ಲಿ 5 ಇಲಾಖೆಗಳಿಗೆ ಹಾಗೂ ಅಭಿವೃದ್ಧಿ ನಿಗಮಗಳ ಸಂಪರ್ಕದಿಂದ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದು, 55 ಪಾಲುದಾರರೊಂದಿಗೆ ವಿಭಾಗಗಳಲ್ಲಿ ಸುಸ್ಥೀರ ಪರಿಸರವನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಸಂದರ್ಭದಲ್ಲಿ  ಬಾಬು ಎಸ್,ರಾಮನಾಥ, ರಮೇಶ, ಡಾ. ಜಾಯಿಸ್, ಡಾ. ಸಂಕಲಕೂಮಾರ ಮುಂತಾದವರು ಉಪಸ್ಥಿತರಿದ್ದರು.