ಲೋಕದರ್ಶನ ವರದಿ
ಮಾಂಜರಿ 03: ದಿ. 12 ರಂದು ನಡೆಯಲಿರುವ ಆಷಾಢ ಎಕಾದಶಿ ನಿಮಿತ್ಯವಾಗಿ ಸಮೀಪದ ಅಂಕಲಿ ಗ್ರಾಮದ ವಿಠ್ಠಲನ ಭಕ್ತರು ಇಂದು ಪಂಢರಪೂರಕ್ಕೆ ದಿಂಡಿ ಯಾತ್ರೆ ಬೆಳೆಸಿದರು. ಪ್ರಾರಂಭದಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ನಂತರ ಹೋರವಲಯದ ಕೃಷ್ಣಾ ನದಿಯ ದಂಡೆಯ ಮೇಲಿದ್ದ ವಿಠ್ಠಲ ಮಂದಿರದಲ್ಲಿ ಆರತಿ ಮತ್ತು ಪೂಜೆ ಮಾಡಿ ನಂತರ ದಿಂಡಿ ಪಂಡರಪೂರಕ್ಕೆ ಇಂದು ಪ್ರಸ್ತಾನಗೊಂಡಿತು.
ಹರಿಭಕ್ತ ಸುರೇಶ ಶಿಂಧೆ ಇವರ ಮುಂದಾಳತ್ವದಲ್ಲಿ ಮೈಶಾಳ, ವಿಜಯನಗರ, ಲಂಗಡೆವಾಡಿ, ತಿಪ್ಪೆಹಳ್ಳಿ, ವಾಟುಂಬರೆ, ಸಂಗೆವಾಡಿ ಮೂಲಕ ಪಂಢರಪೂರಕ್ಕೆ ತಲುಪಲಿದೆ. ಸುನೀಲ ಶಿಂಧೆ, ನಾರಾಯಣ ಶಿಂಧೆ, ರಾಜು ಭುಕಶೇಟ್ಟಿ, ಮಾರುತಿ ಶಿಂಧೆ, ಮಹಾದೇವ ಕಾಟೆ, ರಾಜು ರಾಯಮಾನೆ, ಅಜೀತ ಕೋಳಿ, ರಮೇಶ ಕೋಲೆ, ರಾಜಾರಾಮ ಚೌಗುಲೆ, ಡಾ. ರಾಜು ರಾಜಮಾನೆ, ಚನ್ನಪ್ಪಾ ಮಾಸ್ತರ, ವಿಠ್ಠಲ ಕೋರವಿ, ರಾವಸಾಹೇಬ ಮಮದಾಪೂರೆ, ಪಾಂಡು ಶಿಂಧೆ, ರೋಹಿತ ಶೀರಸೇಟ, ಮಾಲು ಮನಗುತ್ತೆ, ಸೋನಾಬಾಯಿ ಗುಂಡಕಲ್ಲೆ, ಹೌರಾಬಾಯಿ ಗೋವಿಲಕರ, ವಷರ್ಾ ರಾಯಮಾನೆ, ಶಾಂತಾ ಕೋರವಿ, ಮಹಾದೇವಿ ಕೋರವಿ, ಲತಾ ಕೋರವಿ, ಸೇರಿದಂತೆ ನೂರಾರು ಭಕ್ತರು ಕಾಲ್ನಡಗೆ ಪ್ರವಾಸ ಬೇಳೆಸಿದರು. ಈಗಾಗಲೇ ಇದೆ ಗ್ರಾಮದ ಅಂಕಲಿಕರ ಸರಕಾರ ಇವರ ಮಾನದ ಕುದುರೆಯು ಆಷಾಢ ಎಕಾದಶಿ ನಿಮಿತ್ಯವಾಗಿ ಇದೆ ದಿ. 14 ರಂದು ಪಂಢರಪೂರಕ್ಕೆ ತೆರಳಿದೆ.