ದಿಕ್ಷಾ ಭೋಧನಾ ಕಾರ್ಯಕ್ರಮ
ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ ಧಾರವಾಡ, ಜೆ. ಎಸ್. ಎಸ್ ಕಾಲೇಜದಲ್ಲಿ ನೂತನ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ದಿಕ್ಷಾ ಭೋಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜಾಪೂರ ಪ್ರಾದೇಶಿಕ ಇಗ್ನೊ ಕಚೇರಿಯಿಂದ ಆಗಮಿಸಿದ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಡಾ. ಬಿ. ಎನ್. ದೇವೇಂದ್ರರವರು ವಿದ್ಯಾರ್ಥಿಗಳಿಗೆ ಇಗ್ನೊದ ವಿವಿಧ ವಿಷಯಗಳ ಬಗ್ಗೆ ಅರಿವು ಮಾಡಿಕೊಟ್ಟರು ಮತ್ತು ಯಾವ ರೀತಿಯಾಗಿ ಭೋಧನೆ ಅಧ್ಯಯನ ನಡೆಸಬೇಕೆಂದು ತಿಳಿಸಿಕೊಟ್ಟರು. ವಿಶ್ವದ ಬೃಹತ ವಿಶ್ವವಿದ್ಯಾಲಯವಾದ ಅಧ್ಯಯನ ಸಾಮಗ್ರಿಗಳು ಗುಣಮಟ್ಟದ್ದಾಗಿರುತ್ತದೆ ಮತ್ತು ಸಾಂಪ್ರದಾಯಿಕ ಶಿಕ್ಷಣದ ಪದವಿ ಕೂಡ ಸಮಾನ ಸ್ಥಾನವನ್ನು ಇಗ್ನೊ ಪದವಿಗಳು ಹೊಂದಿವೆ.
ಧಾರವಾಡ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿಯಾದ ಡಾ. ಸೂರಜ ಜೈನ್ ಸ್ವಾಗತಿಸಿದರು. ಧಾರವಾಡ ಅಧ್ಯಯನ ಕೇಂದ್ರದಲ್ಲಿ ದೊರಕುವ ಸೌಕರ್ಯಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮವನ್ನು ಡಾ. ರಾಜೇಶ ವಿ. ಚಿಟಗುಪ್ಪಿ ನಿರೂಪಿಸಿದರು, ವಿವೇಕ ಲಕಶ್ಮೇಶ್ವರ ವಂದಿಸಿದರು. ಶ್ರೀ. ಮಂಜುನಾಥ ಪೂಜಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.