ಭೂ ದಾಖಲೆಗಳ ಡಿಜಿಟಲೀಕರಣ, ಭೂ ಸುರಕ್ಷಾ ಇ-ಖಜಾನೆ ಉದ್ಘಾಟನೆ
ಮುದ್ದೇಬಿಹಾಳ 12: ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧದಲ್ಲಿ ತಾಲೂಕಾ ತಹಶಿಲ್ದಾರ ಕಚೇರಿಯಲ್ಲಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ, ಭೂ ಸುರಕ್ಷಾ ಇ-ಖಜಾನೆಯನ್ನು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಶನಿವಾರ ಸಂಜೆ ಉದ್ಘಾಟಿಸಿದರು.
ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಸುದ್ದಿಗಾರರೊಂದಿಗೆ ಮಾತನಾಡಿ ಭೂ ಸುರಕ್ಷಾ ಇ-ಖಜಾನೆ ತಾಲೂಕು ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಟಲೀಕರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕಾರ್ಯಕ್ರಮ ಆರಂಭಿಸಿದೆ. ಹಳೆಯ, ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತಿಸುವುದು, ರೆಕಾರ್ಡ್ ರೂಂಗಳಿಂದ ದಾಖಲೆ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆ, ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳವು- ತಿದ್ದುಪಡಿ ನಿಯಂತ್ರಣ ಮಾಡುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಇನ್ನು ಮುಂದೆ ಸಾರ್ವಜನಿಕರು ಪಡೆಯಬಹುದು. ಸಧ್ಯ ನಮ್ಮ ಸರಕಾರ ಈ ಯೋಜನೆ ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಾರಣ ಇದರಿಂದ ಸಾವರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಮಾತ್ರವಲ್ಲದೇ ಹೊಸದಾಗಿ ತಂತ್ರಜ್ಞಾನ ರೂಪಿಸಿರುವುದು ಒಳ್ಳೆಯ ಸಮಾಜಮುಖಿ ಕಾರ್ಯ ಇದಾಗಿದೆ ಎಂದರು.
ತಹಶಿಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಮುಖಂಡರಾದ ಸಿ ಬಿ ಅಸ್ಕಿ, ವಾಯ್ ಎಚ್ ವಿಜಯಕರ, ಪುರಸಭಭೆ ಸ್ಥಾಯಿ ಸಮೀತಿ ಅಧ್ಯಕ್ಷ ಯಲ್ಲಪ್ಪ ನಾಯಕ ಮಕ್ಕಳ ಶಿರಸ್ಥೆದಾರ ಎಎಂ ಬಾಗೇವಾಡಿ, ಎಂ ಎಚ್ ಮಾಗಿ, ಮಹೇಶ ಪಾಟೀಲ, ಎಸ್ ಎಂ ಸಜ್ಜನ, ಗ್ರಾಮ ಲೆಕ್ಕಾಧಿಕಾರಿ ಹಷೀತ ಎಚ್, ಸೇರಿದಂತೆ ಹಲವರು ಇದ್ದರು.