ಮಕ್ಕಳ ಭವಿಷ್ಯಕ್ಕಾಗಿ ಡಿಜಿಟಲ್ ಶಿಕ್ಷಣ ಮುಖ್ಯ: ಜಿಲ್ಲಾ ಪಂಚಾಯತಿ ಸದಸ್ಯೆ ಅಳವಂಡಿ

ಲೋಕದರ್ಶನ ವರದಿ

ಶಿರಹಟ್ಟಿ 10: ಮಕ್ಕಳು ತಮ್ಮ ಗುರಿಯನ್ನು ತಲುಪಬೇಕಾದರೆ ಅತೀಯಾದ ಪರಿಶ್ರಮದ ಅಭ್ಯಾಸ ಮಾಡಬೇಕಾಗುವುದು ಅವಶ್ಯಕವಾಗಿದ್ದು, ಮಕ್ಕಳ ಆತ್ಮ ವಿಶ್ವಾಸ, ಮಕ್ಕಳ ಕುತೂಹಲ ಹಾಗೂ ಅವರಲ್ಲಿನ ಅವಿಷ್ಕಾರದ ಪ್ರವೃತ್ತಿ ಬೆಳೆಸಲು ಉದ್ದೇಶದಿಂದ ಕೇಂದ್ರ ಸರ್ಕಾರವು ನೀತಿ ಆಯೋಗದಡಿ ಸರ್ಕಾರಿ ಶಾಲೆಗೆ ಅಟಲ್ ಟಿಂಕರಿಂಗ್ ಲ್ಯಾಬ್ ನೀಡುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿಧ್ಯಾಥರ್ಿ/ನಿಯರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಈ ಲ್ಯಾಬೋರೇಟರಿಯು ಅನುಕೂಲಕರವಾಗಿದ್ದು, ಜಿಲ್ಲೆಯಲ್ಲಿಯೇ ನಮ್ಮ ಶಾಲೆಗೆ ಈ ಲ್ಯಾಬ್ ಮಂಜೂರಿಯಾಗಿದ್ದು ಬಹಳ ಹೆಮ್ಮೆಯ ವಿಚಾರವಾಗಿದ್ದು, ಈ ಪ್ರಯೋಗಾಲಯವು ಎಲ್ಲ ಮಕ್ಕಳ ಬುದ್ಧಿ ವಿಕಸನೆಯಲ್ಲಿ ಸಹಕಾರಿಯಾಗಿದ್ದರಿಂದ ಇಂದಿನ ಮಕ್ಕಳು ತಮ್ಮ ಭವಿಷ್ಯದಲ್ಲಿ ತಮ್ಮ ಗುರಿ ಮುಟ್ಟಬೇಕಾದರೆ ಡಿಜಿಟಲ್ ಶಿಕ್ಷಣ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ರೇಖಾ ಅಳವಂಡಿ ಕರೆ ನೀಡಿದರು.

ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಭೀಮರಡ್ಡಿ ಅಳವಂಡಿ ಕನರ್ಾಟಕ ಪಬ್ಲಿಕ್ ಶಾಲೆಗೆ ಕೇಂದ್ರ ಸಕರ್ಾರದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಶನ್ ಅಡಿಯಲ್ಲಿ ಮಂಜೂರಾದ ಅಟಲ್ ಟಿಂಗರಿಂಗ್ ಲ್ಯಾಬೋರೇಟರಿಯ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ರವಿ ಗುಂಜೀಕರ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸನಗೌಡ ಪಾಟೀಲ, ಬಸವರಾಜ ಹ್ಯಾಟಿ, ತಿಮ್ಮರಡ್ಡಿ ಅಳವಂಡಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಶರೀಫಸಾಬ್ ನದಾಫ್, ಎಂ,ಕೆ ಲಮಾಣಿ, ಗಿರೀಶ ಕೋಡಬಾಳ, ಇಚ್ಚಂಗಿ, ವಷರ್ಾರಾಣಿ ಹಾಗೂ ಶಿಕ್ಷಕ ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಹಾಗೂ ನೂರಾರು ಮಕ್ಕಳು ಉಪಸ್ಥಿತರಿದ್ದರು.