ಜ. 31ರಂದು ಡಿಜಿ ಫೋಟೋ ಎಕ್ಸ್ಪೋ ಹಿ 2026
Digi Photo Expo 2026 on Jan. 31
ಹುಬ್ಬಳ್ಳಿ 28: ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೋಸಿಯೇಷನ್ (ಏಗಿಕಂ) ಹಾಗೂ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ “ಡಿಜಿ ಫೋಟೋ ಎಕ್ಸ್ಪೋ ಹಿ 2026” (11ನೇ ಆವೃತ್ತಿ) ಕುರಿತು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಕಿರಣ್ ಬಾಕಳೆ ಅವರು, ಉತ್ತರ ಕರ್ನಾಟಕದ ಫೋಟೋಗ್ರಫಿ, ವಿಡಿಯೋಗ್ರಫಿ ಹಾಗೂ ಡಿಜಿಟಲ್ ಇಮೇಜಿಂಗ್ ಕ್ಷೇತ್ರದ ವೃತ್ತಿಪರರಿಗೆ ಡಿಜಿ ಫೋಟೋ ಎಕ್ಸ್ಪೋ ಅತ್ಯಂತ ಉಪಯುಕ್ತ ವೇದಿಕೆಯಾಗಿದೆ ಎಂದು ತಿಳಿಸಿದರು. ಈ ಪ್ರದರ್ಶನವು ಜನವರಿ 31 ಮತ್ತು ಫೆಬ್ರವರಿ 1, 2026 ರಂದು ಹುಬ್ಬಳ್ಳಿಯ ವಾಸವಿ ಮಹಲ್ (ಗೋಕುಲ ರಸ್ತೆ, ನ್ಯೂ ಬಸ್ ಸ್ಟ್ಯಾಂಡ್ ಹತ್ತಿರ)ದಲ್ಲಿ ನಡೆಯಲಿದೆ. ಪ್ರದರ್ಶನವನ್ನು ಜನವರಿ 31 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ದಕ್ಷಿಣ ಪಶ್ಚಿಮ ರೈಲ್ವೆಯ ಮಹಾಪ್ರಬಂಧಕರಾದ ಮುಖುಲ್ ಸರಣ್ ಮಾಥೂರ್, ಹುಬ್ಬಳ್ಳಿ ಹೊಸೂರು ವಾರ್ಡ್ ಕಾರ್ೊರೇಟರ್ ಚೇತನ ಹಿರೇಕೆರೂರು, ಗಿಂಏ ಫೌಂಡೇಶನ್‌ನ ವೆಂಕಟೇಶ್ ಕಾಟವೆ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಡಿಜಿ ಫೋಟೋ ಎಕ್ಸ್ಪೋದಲ್ಲಿ ಅಂತರರಾಷ್ಟ್ರೀಯ ಮಟ್ಟದ ಫೋಟೋ ಸ್ಟುಡಿಯೋ ಉಪಕರಣಗಳು, ಫೋಟೋ ಹಾಗೂ ವಿಡಿಯೋ ಕ್ಯಾಮೆರಾಗಳು, ಆಲ್ಬಂ ಮೇಕಿಂಗ್ ಮತ್ತು ವಿಡಿಯೋ ಎಡಿಟಿಂಗ್ ಸೊಲ್ಯೂಶನ್‌ಗಳು, ಸ್ಟುಡಿಯೋ ಲೈಟಿಂಗ್ ಉಪಕರಣಗಳು, ಪ್ರಿಂಟರ್‌ಗಳು, ಡಿಸೈನ್ ಟೆಂಪ್ಲೇಟ್ ಸಿಡಿಗಳು, ಲ್ಯಾಮಿನೇಶನ್ ಯಂತ್ರಗಳು, ಫ್ರೇಮ್ ತಯಾರಿಕಾ ಉಪಕರಣಗಳು, ಐಡಿ ಕಾರ್ಡ್ ಸಿಸ್ಟಂಗಳು ಸೇರಿದಂತೆ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರದ ಹಲವು ನವೀನ ತಂತ್ರಜ್ಞಾನ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.
ಈ ಪ್ರದರ್ಶನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಫೋಟೋಗ್ರಫಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿರಿಯ ಛಾಯಾಗ್ರಹಕರಿಗೆ “ಉತ್ತರ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ. ಈ ಬಾರಿ ಪ್ರಶಸ್ತಿಗೆ ಆಯ್ಕೆಯಾದವರು: ವಿ.ಎಚ್. ಚಕ್ಕಲಕಿ (ಬಾಗಲಕೋಟೆ), ಕೃಷ್ಣ ಸೊರಟೂರ್ (ಕೊಪ್ಪಳ), ಕೃಷ್ಣ ಕಾಟಿಗರ್ (ಧಾರವಾಡ), ವಿನೋದ್ ಬಿಕಾರಿ ತಮ್ಸೆ (ಕಾರವಾರ), ರವಿ ರಾಯಲ್ (ರಾಯಚೂರು), ಮಹಮ್ಮದ್ ಗೌಸ್ (ಧಾರವಾಡ/ಹುಬ್ಬಳ್ಳಿ), ನಜೀರ್ ಅಹಮದ್ ದೊಡ್ಮನಿ (ಹಾವೇರಿ), ಬಿ. ಶಿವಶಂಕರ್ (ವಿಜಯನಗರ), ಶೇಖರ್ ಲೋಕಂಡೆ (ಬೆಳಗಾವಿ), ರವಿ ಕೆ.ಸಿ. (ದಾವಣಗೆರೆ), ರಾಮಚಂದ್ರ ಸಿದ್ದಲಿಂಗ (ಗದಗ್) ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮ ನಿರ್ವಹಣೆಯನ್ನು ಬೈಸೆಲ್ ಇಂಟರ್ಯಾಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಾಡುತ್ತಿದ್ದು, ಕಳೆದ 25 ವರ್ಷಗಳಿಂದ ದೇಶದ ವಿವಿಧ ನಗರಗಳಲ್ಲಿ 150ಕ್ಕೂ ಹೆಚ್ಚು ವ್ಯಾಪಾರ ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಸಂಸ್ಥೆಯಾಗಿದೆ ಎಂದು ಮಾಹಿತಿ ನೀಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ದಿನೇಶ್ ದಾಬಡೆ, ಕಾರ್ಯದರ್ಶಿ ರವೀಂದ್ರ ಕಾಟಿಗಾರ, ಖಜಾಂಚಿ ಅನಿಲ್ ತುರುಮರಿ, ಏಗಿಕಂ ಅಧ್ಯಕ್ಷ ಬೆಂಜಮೀನ್, ಕೃಷ್ಣಪ್ಪ, ಜಗದೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಛಾಯಾಗ್ರಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಅವರು ಮನವಿ ಮಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 