ಕಷ್ಟಗಳು ಜೀವನ ಗಟ್ಟಿಗೊಳಿಸುತ್ತವೆ: ಶಶಿಧರ

ಲೋಕದರ್ಶನ ವರದಿ

ಬೆಳಗಾವಿ 30:  ಐಎಎಸ್, ಐಪಿಎಸ್ ಮೊದಲಾದ ಸ್ಪಧರ್ಾತ್ಮಕ ಪರೀಕ್ಷೆಗೆ ಪ್ರೋತ್ಸಾಹಿಸುವ ಮತ್ತು ಮಾಹಿತಿ ಒದಗಿಸುವ ಉದ್ದೇಶದಿಂದ ಬೆಳಗಾವಿಯ ಅಕಾಡೆಮಿ ಆಫ್ ಕಂಪ್ಯಾರೇಟಿವ್ ಆ್ಯಂಡ್ ರಿಲಿಜಿಯಸ್ ಸಂಸ್ಥೆ ಆರಂಭಿಸಿರುವ ಸ್ವಾಧ್ಯಾಯ ಕಾರ್ಯಕ್ರಮಕ್ಕೆ ದಿ.29ರಂದು ವಿದ್ಯುಕ್ತ ಚಾಲನೆ ನೀಡಲಾಯಿತು. 

ಇಲ್ಲಿಯ ಗುರುದೇವ ರಾನಡೆ ಮಂದಿರದಲ್ಲಿ ನೂರಾರು ವಿದ್ಯಾಥರ್ಿಗಳ ಉಪಸ್ಥಿತಿಯಲ್ಲಿ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಕಷ್ಟಗಳು ಜೀವನವನ್ನು ಗಟ್ಟಿಗೊಳಿಸುತ್ತವೆ. ಕಷ್ಟ ಬಾರದಿದ್ದರೆ ಜೀವನ ನಿಂತು ಹೋಗುತ್ತದೆ. ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಿದೆ ಎಂದರು. 

ಬೆಳಗಾವಿಯಲ್ಲಿ ಬಹಳ ದಿನಗಳಿಂದ ಇಂತಹ ಕಾರ್ಯಕ್ರಮ ಅಗತ್ಯವಿತ್ತು. ಎಸಿಪಿಆರ್ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳುವ ಜವಾಬ್ದಾರಿ ವಿದ್ಯಾಥರ್ಿಗಳ ಮೇಲಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ ರೆಡ್ಡಿ ಮಾತನಾಡಿ, ಈಗ ಮಕ್ಕಳಿಗೆ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಅವುಗಳನ್ನು ಬಳಸಿಕೊಂಡು ನಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ನಮ್ಮ ದೌರ್ಬಲ್ಯಗಳನ್ನು ಹೋಗಲಾಡಿಸಿ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಬೇಕು.  ಸಾಧನೆ ಮಾಡುವವರೆಗೆ ಮಾತನಾಡಬಾರದು ಎಂದು ಕಿವಿಮಾತು ಹೇಳಿದರು. 

ಈಚೆಗಷ್ಟೆ ಐಇಎಸ್ ಉತ್ತೀರ್ಣರಾಗಿರುವ ಮನು ಭಟ್ ಮಾತನಾಡಿ, ಸರಕಾರಿ ನೌಕರಿ ಸುಲಭ ಎನ್ನುವ ಭಾವನೆ ಎಲ್ಲರಲ್ಲಿದೆ. ಆದರೆ ಅದೊಂದು ಮಹತ್ವದ ಜವಾಬ್ದಾರಿ. ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು. ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಯಶಸ್ಸಿಗೆ ತಳಹದಿ ಹಾಕಿಕೊಳ್ಳಬೇಕು ಎಂದು ಕರೆ ನೀಡಿದರು. 

ಬೆಳಗಾವಿ ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಭಾರತದ ಇತಿಹಾಸ ಹಾಗೂ ಸ್ವಾತಂತ್ರ್ಯ ಸಂಗ್ರಾಮ ಸ್ಫೂತರ್ಿಯ ಸೆಲೆಯಾಗಿದ್ದು, ಅವುಗಳಲ್ಲೇ ಜೀವನಕ್ಕೆ ಮತ್ತು ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಬೇಕಾದ ಸಂಪೂರ್ಣ ಜ್ಞಾನ ಅಡಗಿದೆ. ಅವುಗಳನ್ನು ನಿಷ್ಠೆಯಿಂದ ಅಧ್ಯಯನ ಮಾಡಿ. ಹಾಗೆ ಮಾಡುವುದರಿಂದ ಐಎಎಸ್, ಕೆಎಎಸ್ ಅಧಿಕಾರಿ ಆಗುತ್ತೀರೋ ಬಿಡುತ್ತೀರೋ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದರು. 

ನ್ಯಾಯವಾದಿ ಸಚಿನ್ ಬಿಚ್ಚು, ಉಪನ್ಯಾಸಕ ಸಂದೀಪ್ ನಾಯರ್, ಟ್ರಿನಿಟ್ ಕಾಲೇಜಿನ ಚೇರಮನ್ ಆಶುತೋಷ್ ಡೆವಿಡ್ ವಿದ್ಯಾಥರ್ಿಗಳಲ್ಲಿ ಸ್ಫೂತರ್ಿ ತುಂಬುವ ಮಾತುಗಳನ್ನಾಡಿದರು.  ಎಸಿಪಿಆರ್ ಗೌರವ ಕಾರ್ಯದಶರ್ಿ ಮಾರುತಿ ಜಿರಲಿ ಸ್ವಾಗತಿಸಿ, ರಾನಡೆ ಮಂದಿರದಲ್ಲಿ ವಿದ್ಯಾಥರ್ಿಗಳಿಗೆ ಒದಗಿಸಿರುವ ಸೌಲಭ್ಯಗಳ ಮಾಹಿತಿ ನೀಡಿದರು. ಹಷರ್ಿತಾ ಪ್ರಸಾದ ಹಾಗೂ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಿಶೋರ ಕಾಕಡೆ ದೇಶಭಕ್ತಿಗೀತೆ ಹಾಡಿದರು.  ಎಸಿಪಿಆರ್ ಚೇರಮನ್ ಅಶೋಕ ಪೋತದಾರ ವೇದಿಕೆಯಲ್ಲಿದ್ದರು.