ಇಂದಿನಿಂದ ವಿವಿಧ ಧಾಮರ್ಿಕ ಕಾರ್ಯಕ್ರಮಗಳು

ಲೋಕದರ್ಶನ ವರದಿ

ಕಂಪ್ಲಿ 23:ಕೊಟ್ಟಾಲ್ ರಸ್ತೆಯಲ್ಲಿ ಅಯ್ಯಪ್ಪಸ್ವಾಮಿ ಹಾಗೂ ಸಹ ದೇವತೆಗಳ ಪ್ರಾಣಪ್ರತಿಷ್ಠಾಪನೆ ಹಾಗೂ ನಾನಾ ಧಾಮರ್ಿಕ ಕಾರ್ಯಕ್ರಮಗಳನ್ನು ಜ.24 ಮತ್ತು 25ರಂದು ಹಮ್ಮಿಕೊಂಡಿದೆ ಎಂದು ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಪಿ.ನಾರಾಯಣ ರೆಡ್ಡಿ ಹೇಳಿದರು.  

ಪತ್ರಿಕಾಗೋಷ್ಠಿ ನೆರವೇರಿಸಿ, ಜ.24ರಂದು ಬೆಳಿಗ್ಗೆ 7ಗಂಟೆಗೆ ತುಂಗಭದ್ರಾ ನದಿಯಲ್ಲಿ ಗಂಗೆಪೂಜೆ ನೆರವೇರಿಸಿ, ಅಯ್ಯಪ್ಪ ಸ್ವಾಮಿ ಪ್ರತಿಮೆ ಸೇರಿ ಸಹ ದೇವತೆಗಳ ಪ್ರತಿಮೆಗಳ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ ಮಂಗಳವಾಧ್ಯಗಳು, ಪೂರ್ಣಕುಂಭ ಸೇರಿ ಜನಪದ ಕಲಾಮೇಳಗಳು ಪಾಲ್ಗೊಳ್ಳಲಿವೆ. ಮಧ್ಯಾಹ್ನ 12ಗಂಟೆಗೆ ಅನ್ನ ಸಂತರ್ಪಣೆ, ಸಂಜೆ ಹೋಮ, ಕಲಶ ಪ್ರತಿಷ್ಠೆ, ಜ.25ರಂದು ಬೆಳಿಗ್ಗೆ 7ಗಂಟೆಗೆ ಪುಣ್ಯಾಹ ಪ್ರತಿಷ್ಠಾಹೋಮ, ನಂತರ ಬೆಳಿಗ್ಗೆ 9ರಿಂದ 10.10ರವರೆಗೆ ಸಲ್ಲುವ ಮೀನ ಲಗ್ನದಲ್ಲಿ ಗಣೇಶ, ಸುಬ್ರಹ್ಮಣ್ಯ,ಅಯ್ಯಪ್ಪಸ್ವಾಮಿ, ಅನ್ನಪೂಣರ್ೇಶ್ವರಿ, ಈಶ್ವರ, ನಂದೀಶ್ವರ ಮೂತರ್ಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭ, ಅಯ್ಯಪ್ಪಸ್ವಾಮಿಗೆ ಕ್ಷೀರಾಭಿಷೇಕ ಸೇವೆ, ನಂತರ ಹುಬ್ಬಳ್ಳಿಯ ಮೋಹನ ಗುರುಸ್ವಾಮಿಗಳಿಂದ ಸಂಗೀತ ಸೇವಾ ಕಾರ್ಯಕ್ರಮಗಳು ಜರುಗಲಿವೆ. 

ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಬುಕ್ಕಸಾಗರದ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯರು, ಕಲ್ಮಠದ ಅಭಿನವ ಪ್ರಭುಮಹಾಸ್ವಾಮಿಗಳು ಸಾನ್ನಿಧ್ಯವಹಿಸಲಿದ್ದು, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ, ಶಾಸಕರಾದ ಬಿ.ಶ್ರೀರಾಮುಲು, ಜೆ.ಎನ್.ಗಣೇಶ್, ಬಿ.ಎಸ್.ಆನಂದ್ಸಿಂಗ್, ಮಾಜಿ ಶಾಸಕ ಟಿ.ಎಚ್.ಸುರೇಶ್ಬಾಬು, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಪುರಸಭಾಧ್ಯಕ್ಷ ಎಂ.ಸುಧೀರ್, ಜಿಪಂ ಸದಸ್ಯರಾದ ಎಂ.ವೆಂಕಟನಾರಮ್ಮ, ಕೆ.ಶ್ರೀನಿವಾಸರಾವ್, ಬನಶಂಕರಿಮ ಗುರುಸ್ವಾಮಿಗಳಾದ ಕಂಪ್ಲಿಯ ಕೆ.ವಸಂತ ಗುರುಸ್ವಾಮಿ ಸೇರಿ ನಾನಾ ಕಡೆಗಳಿಂದ ಗುರುಸ್ವಾಮಿಗಳು ಆಗಮಿಸಲಿದ್ದಾರೆ. ಸದ್ಭಕ್ತರು ಸಕಾಲಕ್ಕೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಧಮರ್ಾಧಿಕಾರಿಗಳಾದ ಗೋವಿಂದರೆಡ್ಡಿ, ಬಿ.ರಂಗರಾವ್, ಕಾಯರ್ಾಧ್ಯಕ್ಷ ಸಂಗಮೇಶ್, ಪದಾಧಿಕಾರಿಗಳಾದ ವಿರುಪಾಕ್ಷಿ, ಪಿ.ಸುಧೀರ್ಬಾಬು, ಮಧುಮೋಹನರೆಡ್ಡಿ, ಹಣ್ಣಿನ ನಾಗರಾಜ, ರಾಮಸುಬ್ಬಾರೆಡ್ಡಿ, ಬಿ.ಮಂಜುನಾಥ, ನರಸಿಂಹಸ್ವಾಮಿ, ವೆಂಕಟಪತಿ, ಎಂ.ನಾಗರಾಜ ಸೇರಿ ಅನೇಕರು ಉಪಸ್ಥಿತರಿದ್ದರು.