ಲೋಕದರ್ಶನ ವರದಿ
ಬೆಳಗಾವಿ 26: ಬೆಳಗಾವಿಯ ಮೂರನೇಯ ಗೇಟ ಬಳಿವಿರುವ ವೇಣುಗ್ರಾಮ ಆಸ್ಪತ್ರೆಯಲ್ಲಿ ಮೂತ್ರಪಿಂಡ ಚಿಕಿತ್ಸೆಗಾಗಿ ನೂತನವಾಗಿ ಅಳವಡಿಸಲಾದ ಡಯಾಲಿಸಿಸ್ ಘಟಕ ಮತ್ತು ದಿನದ 24 ಗಂಟೆಗಳ ಸೇವೆ ನೀಡುವ ನವಜಾತ ಶಿಶುಗಳ ರಕ್ಷಣಾ ಘಟಕದ ಉದ್ಘಾಟನೆ ಕಾರ್ಯಕ್ರಮವೂ ಇತ್ತಿಚಿಗೆ ನೆರವೇರಿತು.
ರಾಣಿ ಚೆನ್ನಮ್ಮ ನಗರದಲ್ಲಿರುವ ಅಂಕುರ ಬುದ್ದಿಮಾಂದ್ಯ ಶಾಲೆಯ ವಿದ್ಯಾಥರ್ಿಗಳು ಡಯಾಲಿಸಿಸ್ ಘಟಕ ಮತ್ತು ನವಜಾತ ಶಿಶುಗಳ ರಕ್ಷಣಾ ಘಟಕವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವೇಣುಗ್ರಾಮ ಆಸ್ಪತ್ರೆಯ ನಿದರ್ೇಶಕರು ಹಾಗೂ ಹಿರಿಯ ವೈದ್ಯರಾದ ಡಾ.ರಮೇಶ ದೇಶಪಾಂಡೆ ಅವರು ಮಾತನಾಡಿ,ಕಳೆದ ಒಂದು ವರ್ಷದ ಹಿಂದೆ ವೇಣುಗ್ರಾಮ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದ್ದು, ರೋಗಿಗಳಿಗೆ ಸಕಾಲ ಮತ್ತು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರನ್ನು ಶೀಘ್ರವಾಗಿ ಗುಣಪಡಿಸಲಾಗುತ್ತಿದೆ ಎಂದು ಹೇಳಿದ ಅವರು ಆಸ್ಪತ್ರೆಯಲ್ಲಿ ಎಲ್ಲ ತರಹದ ಚಿಕಿತ್ಸಾ ಘಟಕಗಳಿದ್ದು, ಎಲ್ಲ ರೋಗಗಳ ಮೇಲೆ ಉಪಚಾರ ನೀಡಲಾಗುತ್ತಿದೆ. ಇದೀಗ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಮತ್ತು ನವಜಾತ ಶಿಶುಗಳ ರಕ್ಷಣಾ ಘಟಕವನ್ನು ಪ್ರಾರಂಭಿಸಲಾಗಿದ್ದು, ಈ ಮೂಲಕ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ನಿದರ್ೇಶಕರಾದ ಡಾ.ಅರುಣ ಬ್ಯಾಕೋಡಿ, ಡಾ. ಶ್ರೀಪತಿ ಪಿಸೆ. ಡಾ. ಗೋಮಟೇಶ ಕುಸನಾಳೆ, ಡಾ.ಚೈತನ್ಯ ಕುಲಕಣರ್ಿ, ಡಾ.ಅಭಿನಂದನ ಹಂಜಿ,ಡಾ.ಪ್ರೀಯದಶರ್ಿನಿ ಕುಲಕಣರ್ಿ, ಡಾ. ಹನುಪದ್ಮಜಾ ಹಂಜಿ, ಡಾ, ವಷರ್ಾ ದೇಶಪಾಂಡೆ, ಡಾ. ಚೈತನ್ಯ ಖೇಮಲಾಪೂರೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.