ಗ್ಯಾರಂಟಿ ಯೋಜನೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಮಹಿಳೆಯರ ಸಮಾನತೆ
ಹಂಪಿ 28: ಪೌರತ್ವ ಮತ್ತು ಸಮಾನತೆಯ ಬಗ್ಗೆ ಪ್ರಮುಖವಾಗಿ ಭಾರತ ಸಂವಿಧಾನ ಮಾತನಾಡಿದೆ. ಸಮಾನತೆ ಇರುವಲ್ಲಿ ಅಭಿವೃದ್ಧಿ ಆಗುತ್ತದೆ. ಮಹಿಳೆಯರ ಸಮಾನತೆ, ಸಶಕ್ತಿಕರಣ ಮತ್ತು ಯುವಕರ ಸಬಲೀಕರಣ ಗ್ಯಾರಂಟಿಯ ಉದ್ದೇಶವಾಗಿದೆ. ಸರ್ಕಾರವು ಬಹಳ ದಕ್ಷತೆಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುತ್ತಿದೆ ಎಂದು ಕಲಬುರಗಿ ವಿಭಾಗದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮಾನ್ಯ ಉಪಾಧ್ಯಕ್ಷರಾದ ಎಸ್.ಆರ್. ಮೆಹೆರೋಜ್ ಖಾನ್ ಅವರು ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ದಿನಾಂಕ 27ನೇ ಜನವರಿ 2025ರಂದು ಅಭಿವೃದ್ಧಿ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಏರಿ್ಡಸಿದ್ದ ಗ್ಯಾರಂಟಿ ಯೋಜನೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಬಹಳ ಮುಕ್ತವಾಗಿ ಸಂವಾದ ನಡೆಸುತ್ತ, ಗ್ಯಾರಂಟಿ ಯೋಜನೆಗಳ ಕುರಿತು ವಿದ್ಯಾರ್ಥಿಗಳ ಸಮಸ್ಯೆಗಳನ್ನು, ಅಭಿಪ್ರಾಯಗಳನ್ನು, ಅನುಭವಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಅವರೊಂದಿಗೆ ಸಂವಾದ ನಡೆಸಿಕೊಂಡ ಡಾ.ಲೋಕೇಶ್, ಡಾ.ವಿಕಾಸ್, ದಾದಾಯತ್, ತನುಜ, ಮಹಾಂತೇಶ್, ಶ್ರೀದೇವಿ ಮಿಟ್ಟಿ, ಡಾ.ಸಂದೀಪ್, ವೆಂಕಟೇಶ್‌ಬಾಬು, ಶಿವಾನಂದ, ದಿನೇಶ್, ಮಲ್ಲಿಕಾರ್ಜುನ, ಖಾಸಿಂ ಮೊದಲಾದವರು ಭಾಗವಹಿಸಿ ಯುವನಿಧಿಯ ಹಣ ಪಡೆಯಲು ಅನೇಕ ತಾಂತ್ರಿಕ ತೊಂದರೆಗಳು ಇವೆ. ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಲು ಆಗುತ್ತಿಲ್ಲ. ಶಕ್ತಿಯೋಜನೆ ಮಹಿಳೆಯರಿಗೆ ಸೀಮಿತವಾಗಿವೆ. ಪುರುಷರಿಗೆ ಯಾವುದೇ ಪ್ರಯೋಜನಗಳಿಲ್ಲ. ಬಸ್‌ಗಳಲ್ಲಿ ಟಿಕೇಟ್ ಇಲ್ಲದೇ ಹೋಗುವಾಗ ಅವಮಾನಕರವಾಗಿ ಮಾತನಾಡುತ್ತಾರೆ. ಬಸ್‌ಗಳ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತದೆ ಎಂದು ನಮಗೆ ಸ್ಪಷ್ಟವಾಗಬೇಕು. ಎಸ್‌ಇಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆಯೇ? ಗ್ಯಾರಂಟಿ ಯೋಜನೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಯಾಕೆ ಪರಿಗಣಿಸಿಲ್ಲ. 2 ತಿಂಗಳಿಂದ ಯುವನಿಧಿಗೆ ಹಣ ಬಂದಿಲ್ಲ ಎಂದು ವಿದ್ಯಾರ್ಥಿಗಳು ಸಂವಾದಿಸುತ್ತ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ತಿಂಗಳಿಗೆ ರೂ.30,000/- ನೀಡುತ್ತಿದ್ದು, ಕನ್ನಡ ವಿಶ್ವವಿದ್ಯಾಲಯ ಒಳಗೊಂಡಂತೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ರೂ.10,000/- ನೀಡಲಾಗುತ್ತಿದೆ. ಸರ್ಕಾರವು ಇದಕ್ಕೆ ಏಕರೂಪ ನೀತಿಯನ್ನು ಜಾರಿಗೊಳಿಸಬೇಕು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಿದಾಗ ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಭ್ಯರ್ಥಿಗಳು ಬಹಳ ಕಷ್ಟದಿಂದ ಬಸ್, ರೈಲಿನ ಶೌಚಾಲಯಗಳಲ್ಲಿ ಕುಳಿತು ಪ್ರಯಾಣಿಸಬೇಕಾಗಿದೆ. ಇಂತಹ ಸಮಯದಲ್ಲಿ ಹೆಚ್ಚಿನ ಬಸ್ಸುಗಳ ಅನುಕೂಲ ಮಾಡಿಕೊಡಬೇಕೆಂದು, ಬೆಲೆ ಏರಿಕೆಯತ್ತ ಗಮನಸೆಳೆದರು.
ಮಂಜುನಾಥ ಮತ್ತು ಮಣಿಕಂಠ ಮಾತನಾಡಿ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದು ಅದರ ವಿರುದ್ಧವೇ ಮಾತನಾಡುವವರು ಇದ್ದಾರೆ. ಆದ್ದರಿಂದ ಗ್ಯಾರಂಟಿ ಯೋಜನೆಗಳ ಕುರಿತು ಸರ್ಕಾರ ಮತ್ತು ಅಧಿಕಾರಿಗಳು ಅವೆರ್‌ನೆಸ್ ಕಾರ್ಯಕ್ರಮಗಳನ್ನು ಮಾಡುವ ಅಗತ್ಯವಿದೆ ಎಂದು ಉಪಾಧ್ಯಕ್ಷರಿಗೆ ಬೇಡಿಕೆಯಿಟ್ಟರು.
ವಿದ್ಯಾರ್ಥಿಗಳ ಸಂವಾದದ ನಂತರ ಎಸ್.ಆರ್. ಮೆಹೆರೋಜ್‌ಖಾನ್ ಅವರು ಮಾತನಾಡುತ್ತ, ಕರ್ನಾಟಕ ಏಳು ಕೋಟಿ ಜನಸಂಖ್ಯೆಯಲ್ಲಿ ನಾಲ್ಕು ಕೋಟಿ ಜನರು ಗ್ಯಾರಂಟಿಯ ಫಲಾನುಭವಿಗಳಾಗಿದ್ದಾರೆ. ಗ್ಯಾರಂಟಿಗಳು ಸಾಮಾಜಿಕ ಅಸಮಾನತೆ ಹೊಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಎಲ್ಲಿ ಸಶಕ್ತಿಕರಣವಿರುತ್ತದೆಯೋ ಅಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಫಲಾನುಭವಿಗಳಿಗೆ ನೇರವಾಗಿ ಹಣ ತಲುಪುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಶುಲ್ಕ, ತೆರಿಗೆ ಹೆಚ್ಚಾಗುತ್ತಿದೆ ಅಷ್ಟೇ. ಶೇ.4. 1/2 ಇದ್ದ ನಿರುದ್ಯೋಗವು ಗ್ಯಾರಂಟಿ ಯೋಜನೆಯ ಅನುಷ್ಠಾನದ ನಂತರ ಶೇ.2.20ಕ್ಕೆ ಇಳಿದಿದೆ. ಗೃಹಲಕ್ಷ್ಮಿ ಯೋಜನೆಯಿಂದ ಅನೇಕ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಗ್ರಾಮಾಂತರ ಮಹಿಳೆಯರು, ಯುವಕರು ಮತ್ತು ನಾಗರೀಕರೊಂದಿಗೆ ಸಂವಾದಿಸಿ ನೈಜತೆಯನ್ನು ತಿಳಿದು ಸಲಹೆಗಳನ್ನು ಪಡೆದಿದ್ದೇನೆ. ನಿಮ್ಮ ಸಂವಾದದಲ್ಲಿ ನನ್ನ ವ್ಯಾಪ್ತಿಗೆ ಬರದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಗಮನಕ್ಕೆ ತರುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೋಗುವ ಅಭ್ಯರ್ಥಿಗಳಿಗೆ ಉಚಿತ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂವಾದದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಎಸ್.ಆರ್. ಮೆಹೆರೋಜ್‌ಖಾನ್ ಮತ್ತು ವಿಜಯನಗರ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶಿವಮೂರ್ತಿ ಕೋಟೇಶ್ ಅವರನ್ನು ಗೌರವಿಸಿದರು. ನಂತರ ಮಾತನಾಡುತ್ತ, ರೂ. 10,000 ಮಾಸಿಕ ಫೆಲೋಶಿಪ್ ಪಡೆಯುತ್ತಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ರೂ.25,000/-ಗಳ ಮಾಸಿಕ ಫೆಲೋಶಿಪ್ ವ್ಯವಸ್ಥೆ ಮಾಡಿಸುವಂತೆ ಕೋರಿದ್ದರು. ಕೆಕೆಡಿಬಿ ಯೊಂದಿಗೆ ಮಾತನಾಡಿ ವಿಶ್ವವಿದ್ಯಾಲಯಕ್ಕೆ ಸಹಾಯ ಧನ ಒದಗಿಸಿದರೆ ಅಧ್ಯಾಪಕರ ನೇಮಕಾತಿಗೆ ಅನುಕೂಲವಾಗುತ್ತದೆ ಎಂದು ಉಪಾಧ್ಯಕ್ಷರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಶೋಧಕರಾದ ಹಿರಿಯ ಪ್ರಾಧ್ಯಾಪಕರಾದ ಡಾ.ಎಚ್.ಡಿ. ಪ್ರಶಾಂತ್ ಅವರ ಶಕ್ತಿಯೋಜನೆಯ ಬಟರ್‌ಫ್ಲೈ ಎಫೆಕ್ಟ್‌ಗಳು (ಅಧ್ಯಯನದ ಸಾರಾಂಶ) ಕೃತಿಯನ್ನು ಮಾನ್ಯ ಕುಲಪತಿಯವರು ಉಪಾಧ್ಯಕ್ಷರಿಗೆ ಸಲ್ಲಿಸಿದರು.
ಪ್ರಾಧ್ಯಾಪಕರಾದ ಡಾ.ಎಚ್.ಡಿ.ಪ್ರಶಾಂತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯುನಿವರಸಲ್ ಬೇಸಿಕ್ ಇನ್‌ಕಮ್ ಭಾಗವಾಗಿ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಗ್ಯಾರಂಟಿ ಯೋಜನೆಯು ನಾಗರಿಕರು ಘನತೆಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ.ಗೀತಮ್ಮ ಕೆ. ಸ್ವಾಗತಿಸಿದರು. ವಿದ್ಯಾರ್ಥಿ ಮಂಜುನಾಥ ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ಡಾ.ಜನಾರ್ದನ ವಂದಿಸಿದರು. ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು, ಅಧ್ಯಾಪಕರಾದ ಗೋವರ್ಧನ, ಉಪನಿರ್ದೇಶಕರಾದ ಡಾ.ಡಿ.ಮೀನಾಕ್ಷಿ ಉಪಸ್ಥಿತರಿದ್ದರು.