ಮುಂಬೈ 31: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಆಯ್ಕೆ ಮಾಡದಿರುವುದು ಒಳ್ಳೆಯ ನಿಧರ್ಾರ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. ಎಂಎಸ್ ಧೋನಿ ಅವರನ್ನು ಎರಡು ಟಿ20 ಸರಣಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಕೈ ಬಿಟ್ಟಿದ್ದು ಆಶ್ಚರ್ಯಕರ ವಿಷಯವೆನಲ್ಲ. ಇದು ಉತ್ತಮ ನಿಧರ್ಾರ. ಅವರು ಫಾಮರ್್ ಕಳೆದುಕೊಂಡಿದ್ದಾರೆ. ರನ್ ಗಳಿಸಲು ಪರದಾಡುತ್ತಿದ್ದಾರೆ. ಅಲ್ಲದೆ ಧೋನಿ ಅವರು 2020ರ ವಿಶ್ವಕಪ್ ಟಿ20ಯಲ್ಲಿ ಆಡುವುದು ಅನುಮಾನ. ಹೀಗಾಗಿ ಭಾರತಕ್ಕೆ ಬದಲಿ ಕೀಪರ್ ನ ಅಗತ್ಯವಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದ್ದು ಧೋನಿಯನ್ನು ಕೈ ಬಿಟ್ಟು ಉತ್ತಮ ಫಾಮರ್್ ನಲ್ಲಿರುವ ರಿಷಬ್ ಪಂತ್ ಗೆ ಸ್ಥಾನ ನೀಡಲಾಗಿದೆ ಎಂದರು. ಇತ್ತೀಚೆಗಷ್ಟೆ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಟೆಸ್ಟ್ ಸರಣಿಗೆ 15 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿತ್ತು.