ಮುಂಬೈ ವಿರುದ್ಧದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ: ಧೋನಿ


ಚೆನ್ನೈ, ಮೇ 8 ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಲು ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ವಿಮರ್ಶೆ  ಮಾಡಿಕೊಂಡರು.  

ಮಂಗಳವಾರ ರಾತ್ರಿ ನಡೆದ 12ನೇ ಆವೃತ್ತಿಯ ಐಪಿಎಲ್ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಬಳಿಕ ಸವಾಲು ಸ್ವೀಕರಿಸಿದ ಮುಂಬೈ 18.3 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 6 ವಿಕೆಟ್ಗಳಿಂದ ಗೆಲುವು ಪಡೆದು ಫೈನಲ್ಗೆ ಪ್ರವೇಶ ಮಾಡಿತು.  

ಪಂದ್ಯದ ಬಳಿಕ ಮಾತನಾಡಿದ ಧೋನಿ," ತವರು ನೆಲದಲ್ಲಿ ಹೆಚ್ಚು ಪಂದ್ಯಗಳಾಡಿದ್ದೇವೆ. ಎಲ್ಲರಿಗೂ ಇಲ್ಲಿನ ಪಿಚ್ ಬಗ್ಗೆ ಅರಿವಿದೆ. ಇದಕ್ಕೇ ತಕ್ಕಂತೆ ನಾವು ಆಡಬೇಕಾಗಿತ್ತು. ಆದರೆ, ನಮ್ಮ ಬ್ಯಾಟ್ಸ್ಮನ್ಗಳು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು. ಹಾಗಾಗಿ, ಸೋಲು ಅನುಭವಿಸಬೇಕಾಯಿತು ಎಂದರು. 

" ಪ್ರಸ್ತುತ ಆವೃತ್ತಿಯಲ್ಲಿ ಈ ಮೈದಾನದಲ್ಲಿ ಆರರಿಂದ ಏಳು ಪಂದ್ಯಗಳಾಡಿದ್ದೇವೆ. ಈ ಪಿಚ್ನ ಸ್ವರೂಪದ ಬಗ್ಗೆ ಪ್ರವಾಸಿ ತಂಡಕ್ಕಿಂತ ನಮಗೆ ಹೆಚ್ಚು ತಿಳಿದಿದೆ. ಹಾಗಾಗಿ, ಮೊದಲ ಕ್ವಾಲಿಫಯರ್ ಪಂದ್ಯ ಇದೇ ಪಿಚ್ನಲ್ಲಿ ಆಡುವುದು ನಮಗೆ ಬೋನಸ್ ಸಿಕ್ಕಂತೆ. ಇದನ್ನೂ ನಾವು ಸದುಪಯೋಗಪಡಿಸಿಕೊಂಡು ಹೆಚ್ಚಿನ ಮೊತ್ತ ಕಲೆ ಹಾಕಬೇಕಿತ್ತು ಎಂದು ಪರಾಮಶರ್ೆ ಮಾಡಿಕೊಂಡರು.  

" ನಮ್ಮ ತಂಡದ ಬ್ಯಾಟಿಂಗ್ ವಿಭಾಗ ಇನ್ನಷ್ಟು ಸುಧಾರಣೆಯಾಗುವ ಅಗತ್ಯವಿದೆ. ಅನುಭವಿ ಆಟಗಾರರ ತಂಡದಲ್ಲಿ ಇದ್ದಾಗ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗುತ್ತದೆ. ಅವರ ಮೇಲೆ ಹೆಚ್ಚುವರಿಯಾಗಿ ಫೀಲ್ಡಿಂಗ್ ಮಾಡುವಂತೆ ಒತ್ತಡ ಹೇರಲು ಸಾಧ್ಯವಾಗುವುದಿಲ್ಲ. ಅವರು ತಮ್ಮ ಅನುಭವವನ್ನು ಇನ್ನಷ್ಟು ಹೆಚ್ಚು ಬಳಸಿಕೊಂಡು ಉತ್ತಮ ಪ್ರದರ್ಶನ ತೋರಬೇಕು" ಎಂದು ತಿಳಿಸಿದರು.  

ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಚೆನ್ನೈ ಪರ ಅಂಬಾಟಿ ರಾಯುಡು ಅಜೇಯ 42 ಹಾಗೂ ಧೋನಿ ಅಜೇಯ 37 ರನ್ ಗಳಿಸಿದ್ದರು. 54 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದ ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.  ಇಂದು ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್  ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫಯರ್ ಪಂದ್ಯವಾಡಲಿದೆ.