ಧಾರವಾಡ ಜಿಲ್ಲಾ ನಿವೃತ್ತರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ಸೂರಗೊಂಡ ಮತ್ತು ಪ್ರಧಾನ ಕಾರ್ಯದರ್ಶಿ ಯಾಗಿ ಎಸ್.ಜಿ.ಸುಬ್ಬಾಪುರಮಠ ಆಯ್ಕೆ
ಧಾರವಾಡ 26: ಧಾರವಾಡ ಜಿಲ್ಲಾ ನಿವೃತ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಡಿ.24 ರಂದು ಎಲ್.ಐ.ಸಿ ಹತ್ತಿರದ ಜಿಲ್ಲಾ ಕಚೇರಿಯಲ್ಲಿ ಇಚೆಗೆ ಜರುಗಿತು.
ಸಭೆಯಲ್ಲಿ 2024 ರಿಂದ 2027 ರ ಅವಧಿಗೆ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆ ಆಗಿರುವ 23 ಜನ ಕಾರ್ಯಕಾರಿ ಸಮಿತಿ ಸದಸ್ಯರ ಪೈಕಿ, ಒಂಬತ್ತು ಜನ ಪದಾಧಿಕಾರಿಗಳನ್ನು ಆಡಳಿತ ಮಂಡಳಿಗೆ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿ: ನೂತನ ಆಡಳಿತ ಮಂಡಳಿಗೆ ಗೌರವ ಅಧ್ಯಕ್ಷರಾಗಿ ವ್ಹಿ. ಬಿ. ಮತ್ತೂರ, ಅಧ್ಯಕ್ಷರಾಗಿ ಬಿ. ಎಂ. ಸೂರಗೊಂಡ, ಉಪಾಧ್ಯಕ್ಷರಾಗಿ ಎಂ. ಡಿ. ಸೊನೆಗೋಜಿ ಮತ್ತು ಡಾ. ಡಿ.ಕೆ.ಕನಕಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಜಿ.ಸುಬ್ಬಾಪೂರಮಠ, ಕೋಶಾಧ್ಯಕ್ಷರಾಗಿ ರಾಮಣ್ಣ ಗಡ್ಡದ, ಸಹ ಕಾರ್ಯದರ್ಶಿಯಾಗಿ ಎಸ್. ಜಿ. ಚಿಕ್ಕೂರಮಠ ಮತ್ತು ಶ್ರೀಕಾಂತ ಯಲಿಗಾರ, ಸಂಘಟನಾ ಕಾರ್ಯದರ್ಶಿ ಎನ್. ಧನಲಕ್ಷ್ಮಿ ಅವರು ಆಯ್ಕೆ ಆಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರು: ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ. ಬಿ. ಪರ್ಪಗೌಡರ, ಎಸ್.ಎಸ್. ಕಣವಿ, ಎನ್.ಆರ್. ಬಾಳಿಕಾಯಿ, ಲೀಲಾವತಿ ಕಳಸಪ್ಪನವರ, ಶಿವಾನಂದ.ಎಸ್.ಶಿವಳ್ಳಿ, ಎಚ್.ಎಸ್. ಗಡ್ಡಿ, ಎನ್.ಎನ್ ಕಳಸನ್ನವರ, ಎಸ್. ಡಿ. ಹೊಸಮನಿ, ಎಂ. ಬಿ. ಕಣಗಿನಹಾಳ, ಕೆ. ಪಿ. ಕಟ್ಟಿಮನಿ, ಎಸ್. ಬಿ. ಕೇಸರಿ, ಡಿ. ಆರ್. ಸನ್ನುಬಾಯಿ, ಎಸ್. ವಿ. ನಾಯ್ಕ, ಮುನಿಶ್ವರ ಶಾಸ್ತ್ರಿ ಬಡಿಗೇರ ಅವರು ಆಯ್ಜೆ ಆಗಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.