ಧಾರವಾಡ 17:: ಕೃಷಿ ವಿಶ್ವವಿದ್ಯಾಲಯವು 2019-20 ರ ಕೃಷಿಮೇಳವನ್ನು ಜನವರಿ 18 ರಿಂದ 20 ರವರೆಗೆ 'ಪ್ರತಿ ಹನಿ-ಸಮೃದ್ಧ ತೆನಿ' ಎಂಬ ಶಿರ್ಷಿ ಕೆಯಡಿಯಲ್ಲಿ ಆಯೋಜಿಸುತ್ತಿದೆ. ಈ ಮೇಳದಲ್ಲಿ 559 ವಿವಿಧ ಮಳಿಗೆಗಳು, ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಹಾಗೂ ಯುವ ಕೃಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ. ಮಹಾದೇವ ಬಿ.ಚೆಟ್ಟಿ ಹೇಳಿದರು.
ಇಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕೃಷಿ ಮೇಳದ ಮೊದಲನೆಯ ದಿನವಾದ ಜ. 18 ರಂದು ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 9.30 ಗಂಟೆಗೆ ಫಲಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಿಸಲಾಗುವದು. ಬೆಳಿಗ್ಗೆ 11.30 ಗಂಟೆಗೆ ಕೃಷಿ ಮೇಳವನ್ನು ವಿದ್ಯುಕ್ತವಾಗಿ ಕೇಂದ್ರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿಗಳು, ಕೃಷಿ ಮತ್ತು ಸಾರಿಗೆ ಸಚಿವರಾದ ಹಾಗೂ ಸಹ ಕುಲಾಧಿಪತಿಗಳಾದ ಲಕ್ಷ್ಮಣ ಸವದಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಗೃಹ ಮತ್ತು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ, ಹಾಗೂ ವಿಶ್ವವಿದ್ಯಾಲಯದ ವ್ಯಾಪ್ತಿಯ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು, ಕೃಷಿ ಇಲಾಖೆಯ ಸರ್ಕಾ ರದ ಪ್ರಧಾನ ಕಾರ್ಯದರ್ಶಿ ಗಳು, ಕೃಷಿ ಆಯುಕ್ತರು, ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ವಿಶ್ರಾಂತ ಕುಲಪತಿಗಳು, ಕೃಷಿ ನಿರ್ದೇ ಶಕರು ಮತ್ತು ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.00 ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ನೀರು, ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆ ಹೆಚ್ಚಿಸಲು ಇಸ್ರೇಲ್ ಆಧಾರಿತ ಕೃಷಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ 3.00 ಗಂಟೆಗೆ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹತ್ತಿಯಲ್ಲಿ ಗುಲಾಬಿ ಬಣ್ಣದ ಕಾಯಿಕೊರಕ ಹಾಗೂ ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಎರಡನೆಯ ದಿನವಾದ ಜ. 19 ರಂದು ಬೆಳಿಗ್ಗೆ 11.00 ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ತಾಲ್ಲೂಕ ಮಟ್ಟದ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2.00 ಗಂಟೆಗೆ ಕೌಶಲ್ಯಾಧಾರಿತ ಗ್ರ್ರಾಮೀಣ ವಿಜ್ಞಾನ ತಾಂತ್ರಿಕತೆಗಳು ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ 3.00 ಗಂಟೆಗೆ ಕೃಷಿಮೇಳ ವೇದಿಕೆಯಲ್ಲಿ ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳ ರೈತರಿಗೆ ತಾಲ್ಲೂಕ ಮಟ್ಟದ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೈಗೊಳ್ಳಲಾಗುವದು. ಡಾ. ಚನ್ನವೀರ ಕಣವಿ, ಕೃಷಿ ಲೇಖನ ಪ್ರಶಸ್ತಿ ಪ್ರದಾನ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾನಾಂತರವಾಗಿ, ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಕಬ್ಬು ಬೆಳೆಯ ಅಧಿಕ ಉತ್ಪಾದನಾ ತಂತ್ರಜ್ಞಾನ ಕಾಯರ್ಾಗಾರ ಏರ್ಪಡಿಸಲಾಗಿದೆ.
ಮೂರನೇ ದಿನವಾದ ಜ. 20 ರಂದು ಬೆಳಿಗ್ಗೆ 11.00 ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳ ರೈತರಿಗೆ ತಾಲೂಕ ಮಟ್ಟದ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವದು. ಮಧ್ಯಾಹ್ನ 3.00 ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಹಾಗೂ ಕೃಷಿ ಮೇಳದ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಕೃಷಿ ವಸ್ತು ಪ್ರದರ್ಶನದಲ್ಲಿ 130 ಹೈಟೆಕ್ ಮಳಿಗೆಗಳು, 300 ಸಾಮಾನ್ಯ ಮಳಿಗೆಗಳು, 16 ಯಂತ್ರೋಪಕರಣ ಮಳಿಗೆಗಳು, 23 ಆಹಾರ ಮಳಿಗೆಗಳು, 72 ಜಾನುವಾರು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಇಸ್ರೇಲ್ ಮಾದರಿ ಕೃಷಿ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಕೃಷಿ ಪರಿಕರಗಳು, ಯಂತ್ರೋಪಕರಣಗಳು, ಹೈಟೆಕ್-ತೋಟಗಾರಿಕೆ, ಸಮಗ್ರ ಕೃಷಿ ಪದ್ಧತಿ, ಗೃಹ ವಿಜ್ಞಾನ, ಗುಡಿ ಕೈಗಾರಿಕೆಗಳು, ಬೇಕರಿ ಪದಾರ್ಥಗಳು, ಔಷಧೀಯ ಹಾಗೂ ಸುಗಂಧ ದ್ರವ್ಯ ಸಸ್ಯಗಳು, ಜಾನುವಾರುಗಳು ಹಾಗೂ ಇನ್ನಿತರೇ ಕೃಷಿ ಸಂಬಂಧಿತ ವಿಷಯಗಳ ಕುರಿತು ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ರೈತರ ಅನುಕೂಲಕ್ಕಾಗಿ ಆಯೋಜಿಸಲಾಗಿದೆ ಎಂದು ಕುಲಪತಿ ಡಾ. ಮಹಾದೇವ ಬಿ.ಚೆಟ್ಟಿ ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ವಿಸ್ತರಣಾ ನಿರ್ದೇ ಶಕ ಡಾ. ರಮೇಶ ಬಾಬು, ಶಿಕ್ಷಣ ನಿರ್ದೇ ಶಕ ಡಾ.ಎಸ್.ಬಿ. ಹೊಸಮನಿ, ಸಂಶೋಧನಾ ನಿರ್ದೇ ಶಕ ಡಾ. ಪಿ.ಎಲ್.ಪಾಟೀಲ ಸೇರಿದಂತೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.