ಪೊಲೀಸರ ವಿರುದ್ದ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಧರಣಿ ಸತ್ಯಾಗ್ರಹ ಆರಂಭ

Dharna satyagraha of gold and silver workers union against police started

ಪೊಲೀಸರ ವಿರುದ್ದ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಧರಣಿ ಸತ್ಯಾಗ್ರಹ ಆರಂಭ  

ಬಳ್ಳಾರಿ 03:  ತಾಲೂಕು ಮತ್ತು ನಗರದಲ್ಲಿ ಚಿನ್ನ, ಬೆಳ್ಳಿ ಆಭರಣದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ಯಮದ ವರ್ತಕರನ್ನು ಮತ್ತು ಕೆಲಸಗಾರರನ್ನು ತನಿಖೆಯ ರೂಪದಲ್ಲಿ ಕಾನೂನು ಬಾಹಿರ ಹಿಂಸೆ, ದಬ್ಬಾಳಿಕೆ ನಡೆಸುತ್ತಿರುವುದನ್ನು ವಿರೋಧಿಸಿ ಚಿನ್ನ ಮತ್ತು ಬೆಳ್ಳಿ ಕೆಲಸಗಾರರು ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘವು ಇಂದು ಸಂಘದ ಕಛೇರಿಯಿಂದ ತೇರುಬೀದಿ, ಬೆಂಗಳೂರು ರಸ್ತೆ, ಮೋತಿಸರ್ಕಲ್, ಸ್ಟೇಷನ್ ರೋಡ್ ಮೂಲಕ ಹಳೇ ಜಿಲ್ಲಾಧಿಕಾರಿಗಳ ಕಛೇರಿಯಗೆ ಬಂದು ಎರಡು ದಿನಗಳ ಕಾಲ ಧರಣಿ ಸತ್ಯಾಗ್ರಹ ಆರಂಭಿಸಿದೆ.ಕಳ್ಳತನದ ಆರೋಪಿಗಳ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ವ್ಯಾಪಾರಿಗಳು ಮತ್ತು ಕೆಲಸಗಾರರನ್ನು ವಿಚಾರಣೆಯ ನೆಪದಲ್ಲಿ ಬೆದರಿಸಿ, ಅವರಿಂದ ಚಿನ್ನ, ಬೆಳ್ಳಿ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವುದು.  

ವ್ಯಾಪಾರಿಗಳು ಮತ್ತು ಕೆಲಸಗಾರರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಅಮಾನವೀಯವಾಗಿ ವರ್ತಿಸಲಾಗುತ್ತಿದೆ ಇದು ನಿಲ್ಲಬೇಕು.ಬಂಧಿತ ಆರೋಪಿಗಳನ್ನು ತಕ್ಷಣವೇ ನ್ಯಾಯಾಲಯಕ್ಕೆ ಹಾಜರುಪಡಿಸದೇ ಅಕ್ರಮ ಬಂಧನದಲ್ಲಿ ಇರಿಸಲಾಗುತ್ತದೆ ಇದು ಸರಿಯಲ್ಲ. ತನಿಖೆ, ವಿಚಾರಣೆಗೆ ಮುನ್ನ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡದೇ, ಕೆಲಸದ ಸ್ಥಳದಲ್ಲಿ ವಿಚಾರಣೆ ಮಾಡದೇ, ಠಾಣೆಗೆ ಕರೆದುಕೊಂಡು ಹೋಗುವುದು ಸರಿಯಲ್ಲ.ಕಾನೂನು ರೀತ್ಯಾ ಮಾನವೀಯತೆಯ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳದೇ ಕಾನೂನು ಮೀರಿ ವರ್ತಿಸುವುದನ್ನು ಖಂಡಿಸಿ ಈ ಧರಣಿ ಹಮ್ಮಿಕೊಂಡಿದೆ.ಕಾನೂನು ರೀತಿಯಲ್ಲಿ ಕಳವು ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಬೇಕೆಂದು ಸಂಘದ ಅಧ್ಯಕ್ಷ ಆರ್‌.ಎಂ.ಡಿ.ಜಾವಿದ್ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲಾನ್,ರವಿ ಕುಮಾರ, ಶಹರಿ ಅಹಮದ್, ಚಿಟಿಬಾಬು, ಜಾಫರ್,ಕುಬೇರ, ಹಾಗೂ ಸದಸ್ಯರು ಇತರರು ಭಾಗವಹಿಸಿದ್ದರು.