ದೇಹವನ್ನು ದಹನ ಮಾಡಿಕೊಂಡು ದೇವಾಲಯ ಮಾಡುವುದೇ ಧರ್ಮಸಭೆ : ಸಂಗನಬಸವ ಶ್ರೀಗಳು

Dharmasabha is cremating the body and making a temple: Mr. Sanganabasava

ದೇಹವನ್ನು ದಹನ ಮಾಡಿಕೊಂಡು ದೇವಾಲಯ ಮಾಡುವುದೇ ಧರ್ಮಸಭೆ : ಸಂಗನಬಸವ ಶ್ರೀಗಳು  

ಶಿಗ್ಗಾವಿ  08: ದೇಹವನ್ನು ದಹನ ಮಾಡಿಕೊಂಡು ದೇವಾಲಯ ಮಾಡುವುದೇ ಧರ್ಮಸಭೆ ಎಂದು ವಿರಕ್ತಮಠ ಸಂಗನಬಸವ ಶ್ರೀಗಳು ಹೇಳಿದರು.  ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಮೈಲಾರಲಿಂಗೇಶ್ವರ ಮಹಾತ್ಮೆ ದೊಡ್ಡಾಟ ಕಾರ್ಯಕ್ರಮದ ಸಾನಿಧ್ಯವಹಿಸಿ ಆರ್ಶಿವದಿಸಿ ಮಾತನಾಡಿ ಧರ್ಮದ ಮಾತುಗಳನ್ನು, ಪ್ರವಚನಗಳನ್ನು, ಒಳ್ಳೆಯ ನುಡಿಗಳನ್ನು ಆಲಿಸಿದಾಗ ಧರ್ಮ ಜಾಗೃತಿ ಆಗುತ್ತದೆ ಎಂದರು.   ಪ್ರಾಸ್ತಾವಿಕವಾಗಿ ಪ್ರೋ ಶಶಿಕಾಂತ ರಾಠೋಡ ಮಾತನಾಡಿ ಕಣ್ಣಿಗೆ ಕಾಣದ ಅಗೋಚರ ಶಕ್ತಿಯನ್ನು ಹೊಂದಿದ ಪೌರಾಣಿಕ ಮೈಲಾರಲಿಂಗೇಶ್ವರ ದೇವಸ್ಥಾನ ವೈಭವಪೂರಿತಕ್ಕೆ ಸಾಕ್ಷಿಯಾಗಿದೆ ಅಲ್ಲದೇ ಕಲೆ ಮತ್ತು ಕಲಾವಿದರನ್ನು ಯಾರು ಗೌರವಿಸುತ್ತಾರೆ ಅಲ್ಲಿ ಸಾಕ್ಷಾತ ದೇವರ ದರ್ಶನವಾಗುತ್ತದೆ ಎಂದರು.   ಶಿಕ್ಷಕಿ ಗಂಗೂಬಾಯಿ ದೇಸಾಯಿ ಮಾತನಾಡಿ ನಿರಂತರವಾಗಿ 9 ದಿನಗಳ ಕಾಲ ಜ್ಞಾನದ ಅಮೃತದ ಜೊತೆಗೆ ದಾಸೋಹದ ಸಂಜೀವಿನಿ ಕಾರ್ಯವು ಶ್ಲಾಘನೀಯವಾದದ್ದು ಎಂದರು.   ಉದ್ಘಾಟನೆ ಗಂಗೀಭಾವಿ ವೇದಮೂರ್ತಿ ಬಸಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ ಮಾಲತೇಶ ಕಂಕನವಾಡ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಲೇಶಪ್ಪ, ಜಾನಪದ ತಜ್ಞ ಅವ್ವ ಪ್ರಶಸ್ತಿ ಪುರಸ್ಕೃತ ಬಸವರಾಜ ಶಿಗ್ಗಾವಿ, ಹಿರಿಯ ಅಭಿಯಂತರರು ನಾಗರಾಜ ಮಿರ್ಜಿ, ಎಸ್‌.ಎನ್‌.ಮುಗಳಿ, ಸಾಯಿಬಾಬಾ ಕಾಮನಹಳ್ಳಿ ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು. ಸುಭಾಸ ಚವ್ಹಾಣ ಸ್ವಾಗತಿಸಿದರು, ಪ್ರೋ ಶಿವಯ್ಯ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.  ಭಾಕ್ಸ ಸುದ್ದಿ : ಹಾನಗಲ್ಲ ತಾಲೂಕಿನ ಕಲಕೇರಿ ಗ್ರಾಮದ ಸದಸ್ಯರಿಂದ ಮಣಿಮಲ್ಲಾಸೂರ ಮಹಾತ್ಮೆ ದೊಡ್ಡಾಟ ಪ್ರದರ್ಶನ ನೆರವೇರಿತು. ಕತೆಗಾರ ನಾಗರಾಜ ಪೂಜಾರ, ನೇಪತ್ಯ ಕಲಾವಿದ ಶಂಕರ ಅರ್ಕಸಾಲಿ ಸೇರಿದಂತೆ ಕಲಾವಿದರ ಬಳಗ ಉಪಸ್ಥಿತರಿದ್ದರು