ಚಿಕ್ಕೋಡಿ ಜಿಲ್ಲೆಗಾಗಿ ಧರಣಿ ಸತ್ಯಾಗ್ರಹ
ಮಾಂಜರಿ 15: ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ 7 ನೇ ದಿನಕ್ಕೆ ಕಾಲಿಟ್ಟಿದೆ, ಇನ್ನೂವರೆಗೆ ಯಾವೊಬ್ಬ ಜನಪ್ರತಿನಿಧಿಗಳೂ ಸಹ ವೇದಿಕೆ ಕಡೆಗೆ ಸುಳಿಯದೇ ಇರುವುದು ವಿಶಾದಕರ ಸಂಗತಿಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ, ಧರಣಿ ನಿರತರ ಆರೋಗ್ಯ ತಪಾಸಣೆ ಮಾಡಲಾಯಿತು. ಕೇರೂರ ಗ್ರಾಮದ ಯುವಕರು ಚಿಕ್ಕೋಡಿ ಜಿಲ್ಲೆಯ ಹೋರಾಟಕ್ಕೆ ಬೆಂಬಲಿಸಿ ಜಿಲ್ಲಾ ಹೋರಾಟಗಾರರಿಗೆ ಶಕ್ತಿ ತುಂಬಿದರು.
ಯುವ ಹೋರಾಟಗಾರ ಪ್ರತಾಪಸಿಂಹ ಪಾಟೀಲ ಮಾತನಾಡಿ ಚಿಕ್ಕೋಡಿ ಜಿಲ್ಲೆ ಆಗುವುದರಿಂದ, ಆಡಳಿತದಲ್ಲಿ ಸುಧಾರಣೆ ಆಗುತ್ತದೆ, ಉದ್ಯಮಗಳು ಸ್ಥಾಪನೆಗೊಳ್ಳುತ್ತವೆ, ಇದರಿಂದ ಯುವಕರಿಗೆ ಉದ್ಯೋಗಗಳು ಸಿಗಲಿವೆ, ದೂರದ ಬೆಳಗಾವಿಗೆ ಕೆಲಸ ಕಾರ್ಯಕ್ಕಾಗಿ ಅಲೆದಾಡುವುದು ತಪ್ಪಲಿದೆ ಎಂದು ಹೇಳಿದರು.ಸಿದ್ದು ಕಾಂಬಳೆ, ಯಾಶೀನ ಜಮಾದಾರ, ಕೇದಾರಿ ಹುಬ್ಬಳ್ಳಿ, ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ಅಪ್ಪಾಸಾಹೇಬ ಹಿರೆಕೋಡಿ, ಚಿದಾನಂದ ಶಿರೋಳೆ, ಅಮೂಲ ನಾವಿ, ವಿಜಯ ಬ್ಯಾಳೆ, ಮಾಳು ಕರೆಣ್ಣವರ, ಸಂತೋಷ ಪೂಜೇರಿ, ಪ್ರಮೋದ್ ಪಾಟೀಲ, ಸುರೇಶ ಜಿಡ್ಡಿಮನಿ, ಆನಂದ ಮಗದುಮ್ ಹಾಗೂ ಇತರ ಹೋರಾಟಗಾರರು ಉಪಸ್ಥಿತರಿದ್ದರು.