ಧರಣಿ ಸ್ಥಳೀಯ ಆಡಳಿತಕ್ಕೆ ತನ್ನದೆಯಾದ ಘನತೆ ಗೌರವವಿದೆ ಅದನ್ನು ಎಲ್ಲಿಯೋ ಕುಳಿತು ಪಾಳಗಾರಿಕೆ ರೀತಿ ಆಡಳಿತ ಮಾಡಬೇಡಿ.: ಎಂ ಎಸ್ ಹಡಪದ
ಗಜೇಂದ್ರಗಡ 06: ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ನಗರದ ಜೋಡು ರಸ್ತೆಯಿಂದ ಒಕ್ಕಲೇಬ್ಬಿಸಿ ಬಯಲು ಜಾಗೆಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ (ಸಿಐಟಿಯ) ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ತಹಶಿಲ್ದಾರರ ಕಚೇರಿಯಿಂದ ಮೆರವಣಿಗೆ ಪ್ರಾರಂಭಿಸಿ ಸ್ಥಳೀಯ ಪುರಸಭೆ ಆಡಳಿತ,ಪೋಲಿಸ್ ಇಲಾಖೆ, ಹಾಗೂ ಶಾಸಕರ ವಿರುದ್ದ ಘೋಷಣೆ ಕುಗುತ್ತಾ ಪುರಸಭೆ ಮುಂದುಗಡೆ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಈ ವೇಳೆ ಕಾರ್ಮಿಕ ಸಂಘಟನೆಯ ಮುಖಂಡ ಎಂ ಎಸ್ ಹಡಪದ ಮಾತನಾಡೀಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ 2014 ಜಾರಿಗೊಳಿಸಿದ್ದು ಆ ಕಾಯ್ದೆ ಪ್ರಕಾರ ಬೀದಿ ಬದಿ ವ್ಯಾಪಾರಸ್ಥರು ಸಂರಕ್ಷಣಾ ಹೊಣೆಗಾರಿಕೆ ಸ್ಥಳೀಯ ಪುರಸಭೆಯಿದ್ದೆ ಇದ್ದರು, ಯಾರೋದ್ದು ಪ್ರಭಾವಿ ವ್ಯಕ್ತಿಗಳ ಮಾತು ಕೇಳಿ ಅವರ ಅಣತೆಯಂತೆ ಇಡೀ ಆಡಳಿತ ವ್ಯವಸ್ಥೆ ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ನಾಚೀಕೆಗೇಡಿನ ಸಂಗತಿ ಎಂದರು.ಸ್ಥಳೀಯ ಆಡಳಿತಕ್ಕೆ ತನ್ನದೆಯಾದ ಘನತೆ ಗೌರವವಿದೆ ಅದನ್ನು ಯಾರೋ ಎಲ್ಲಿಯೋ ಕುಳಿತು ಪಾಳೆಗಾರಿಕೆ ರೀತಿಯಲ್ಲಿ ವರ್ತಿಸುವುದು ತರವಲ್ಲ. ಅವರಿಗೆ ಆಡಳಿತ ಮಾಡುವುದಿದ್ದರೆ ಜನರಿಂದ ಆಯ್ಕೆಯಾಗಿ ಬಂದು ಆಡಳಿತ ನಡೆಸಲಿ ಅದನ್ನು ಬಿಟ್ಟು ಹಿಂದೆ ಕುಳಿತು, ರಾಜಕಾರಣ ಮಾಡುವುದನ್ನು ಕೈ ಬಿಡಲಿ ಎಂದು ಪ್ರಭಾವಿ ರಾಜಕಾರಣಿಗಳಿಗೆ ಚಾಟಿ ಬೀಸಿದರು.
ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ ಸ್ಥಳೀಯ ಪುರಸಭೆ ಜನರ ಪಾಲಿಗೆ ಇದ್ದು ಸತ್ತಾಂತಾಗಿದೆ ಆಡಳಿತಕ್ಕೆ ಇಂತಹ ದುಸ್ಥಿತಿ ಬಂದಿರುವುದನ್ನುನೋಡಿ ನಮಗೆ ೇಸರವಾಗುತ್ತಿದೆ
ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡಿ ಉಳ್ಳವರ ಪರ ಕೆಲಸ ಮಾಡುವುದನ್ನು ಕೈ ಬಿಡಿ, ಜನರ ಹಿತಕ್ಕಿಂತಲೂ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಯೇ ನಿಮಗೆ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಲಾದರೂ ಶಾಸಕರು, ಪುರಸಭೆ, ಪೋಲಿಸ್ ಇಲಾಖೆ, ತಹಶಿಲ್ದಾರರ ಇವರನ್ನೊಳಗೊಂಡಂತೆ ಬೀದಿ ಬದಿಯ ವ್ಯಾಪಾರಸ್ಥರ ಸಂಕಷ್ಟ ಚರ್ಚೆಸಿ ತ್ವರಿತಗತಿಯಲ್ಲಿ ಪರಿಹಾರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದೆ ಇದ್ದರೆ ಜನವರಿ 8 ರಂದು ಗಜೇಂದ್ರಗಡ ನಗರವನ್ನು ಬಂದ್ ಮಾಡಿ ಹೋರಾಟದ ಸ್ವರೂಪವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಪುರಸಭೆಯ ಅಧಿಕಾರಿಗಳು, ಪುರಸಭೆಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪುರಸಭೆಯ ಸದಸ್ಯರು, ಭೇಟಿ ನೀಡಿ ಹೋರಾಟ ಹಿಂತೆಗೆದುಕೊಳ್ಳಿ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಕೇಳಿದಾಗ ಹೋರಾಟಗಾರರು ಪುರಸಭೆಯ ಆಡಳಿತದ ವಿರುದ್ದ ತೀವ್ರ ತರಾಟೆಗೆ ತೆಗೆದುಕೊಂಡು ಇನ್ನು ಎಷ್ಟು ಭಾರಿ ನಿಮಗೆ ಕಾಲಾವಕಾಶ ಕೊಡಬೇಕು. 24 ದಿನಗಳಾದ್ರೂ ನಿಮ್ಮಿಂದ ಯಾವುದೇ ಉತ್ತರ ಸಿಗುತ್ತಿಲ್ಲ ಮತ್ತೇ ಕಾಲಾವಕಾಶ ಎಂದರೆ ಹೇಗೆ. ತುರ್ತು ಸಭೆ ಕರೆದು ಸಮಸ್ಯೆ ಬಗೆಹರಿಸಿ ಅಲ್ಲಿಯವರೆಗೆ ಧರಣಿ ನಡೆಯಲಿದೆ. ಎಂದರು.
ಧರಣಿ ಸತ್ಯಾಗ್ರಹದಲ್ಲಿ ಸಂಘದ ಅಧ್ಯಕ್ಷ ಎಸ್ ಎ ದಿಂಡವಾಡ, ಸಿಪಿಐಎಂ ಪಕ್ಷದ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಜಿಲ್ಲಾ ಸಮಿತಿ ಸದಸ್ಯ ಮೆಹಬೂಬ್ ಹವಾಲ್ದಾರ್, ಗಣೇಶ್ ರಾಠೋಡ, ಚೆನ್ನಪ್ಪ ಗುಗಲೊತ್ತರ, ಶಿವಾಜಿ ಗಡ್ಡದ, ಮೆಹಬೂಬ್ ಮಾಲ್ದಾರ, ಕರಿಯಮ್ಮ ಗುರಿಕಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.