ಧನ್ವಂತರಿ ವೈದ್ಯಕೀಯ ದೇವತೆ : ಡಾ ಕಲ್ಲೇದ
ಮಹಾಲಿಂಗಪುರ. 19 : ಸ್ಥಳೀಯ ಬಸವನಗರ ಸಮುದಾಯ ಭವನದಲ್ಲಿ ಸಿ ಎಂ ಹುರಕಡ್ಲಿ ಫೌಂಡೇಶನ್ ಹಾಗೂ ಗಂಗೋದಯ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತವಾಗಿ ಅಗ್ನಿ ಕರ್ಮ ಮತ್ತು ವಿದ್ಧಕರ್ಮ ಚಿಕಿತ್ಸೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ವೈದ್ಯ ಮಹೇಶ್ ಕಲ್ಲೇದ ಮಾತನಾಡಿ,ಯಾವ ಯಂತ್ರಗಳು ಗುಳಿಗೆಗಳು ಗುಣಪಡಿಸದ ರೋಗವನ್ನು ನಾವು ಪಂಚ ಕರ್ಮ ಚಿಕಿತ್ಸೆಯಲ್ಲಿನ ಅಗ್ನಿ ಕರ್ಮ, ವಿದ್ಧ ಕರ್ಮದಿಂದ ಗುಣಪಡಿಸುತ್ತೇವೆ. ಆಯುರ್ವೇದ ಚಿಕಿತ್ಸೆಯಿಂದ ದೇಹಕ್ಕೆ ಅಡ್ಡ ಪರಿಣಾಮವಿಲ್ಲ. ವೈದ್ಯಕೀಯ ದೇವತೆ ಧನ್ವಂತರಿ ಆಗಿದೆ ಎಂದರು.
ಪೂಜ್ಯ ಶ್ರೀ ಸಿದ್ದರಾಮಯ್ಯ ಸ್ವಾಮಿಗಳು ಮಾತನಾಡಿ, ಆರೋಗ್ಯ ನಮಗೆ ಬಹಳ ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ ನಮ್ಮ ಬದುಕು ಸುಂದರವಾಗಿರುತ್ತದೆ. ದಿನನಿತ್ಯ ಕಾರ್ಯದಲ್ಲಿ ತೊಡಗಿಕೊಂಡು ಸದಾಚಾರಿಯಾಗಿ ಬದುಕಿ ಜೊತೆಗೆ ಪರಮಾತ್ಮನ ಚಿಂತನೆ ಮನಸ್ಸಿಗೆ ಹಗುರ ಎಂದರು.ಅಗ್ನಿ ಕರ್ಮ, ವಿದ್ದ ಕರ್ಮ ಚಿಕಿತ್ಸೆಗೆ 100 ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿದ್ದರು. ಬೆನ್ನು, ಮೊಣಕಾಲು, ಕುತ್ತಿಗೆ, ಭುಜ ಮತ್ತು ಹಿಮ್ಮಡಿ ನೋವು, ಹೊಟ್ಟೆ ಮತ್ತು ಕರುಳಿನ ಸಮಸ್ಯೆ, ಕೆಮ್ಮು ,ನೆಗಡಿ ಮತ್ತು ಜ್ವರ, ತದ್ದು , ಬಿಳುಪು ರೋಗ ಇನ್ನು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಿದರು.
ಈ ಸಂದರ್ಭದಲ್ಲಿ ಸಿ ಎಂ ಹುರಕಡ್ಲಿ ಫೌಂಡೇಶನ್ ಮುಖ್ಯಸ್ಥ ಚನ್ನಬಸು ಹುರಕಡ್ಲಿ, ದಯಾನಂದ ಕಲ್ಲೇದ , ಕೃಷ್ಣೆಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ಮಲ್ಲಪ್ಪ ಯರಡ್ಡಿ, ಶಿವಲಿಂಗ ಟಿರ್ಕಿ, ಶ್ರೀಶೈಲ ಬಾಡನವರ,ಭೀಮಸಿ ಪೂಜಾರಿ, ಬಸವರಾಜ ಹುಲ್ಯಾಳ,ಮಹಾದೇವ ಟಿರಕಿ, ಮಹಾಲಿಂಗಪ್ಪ ಕಂಠಿ, ಬಸವರಾಜ ಗಿರಿಸಾಗರ, ರವಿ ಗಿರಿಸಾಗರ,ಮಲ್ಲಿಕಾರ್ಜುನ ಹನಗಂಡಿ,ಇತರರಿದ್ದರು. ವಿಜಯ ಫನಸಲಕರ ನಿರೂಪಿಸಿದರು.ಪತ್ರಕರ್ತ ರಾಜೇಂದ್ರ ನಾವಿ ವಂದಿಸಿದರು.