ಹೊಳಗುಂದಿಯಲ್ಲಿ ಕೆಂಡ ತುಳಿದು ಹರಕೆ ತೀರಿಸಿದ ಭಕ್ತರು

Devotees who trampled on Kenda in Halgundi

ಹೊಳಗುಂದಿಯಲ್ಲಿ ಕೆಂಡ ತುಳಿದು ಹರಕೆ ತೀರಿಸಿದ ಭಕ್ತರು

ಹೂವಿನಹಡಗಲಿ 18: ತಾಲ್ಲೂಕಿನ ಹೊಳಗುಂದಿಯಲ್ಲಿ ಶನಿವಾರ ಬೆಳಿಗ್ಗೆ 12ಗಂಟೆಗೆ ಸಿದ್ದೇಶ್ವರ ಸ್ವಾಮಿಯ ಅಗ್ನಿ ಮಹೋತ್ಸವ ಕಾರ್ಯಕ್ರಮ  ವಿಜೃಂಭಣೆಯಿಂದ ಜರುಗಿತುಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಮಾಳ, ನಂದಿಕೋಲು, ಮಂಗಳ ವಾದ್ಯಗಳ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.  

ಇದೇ ವೇಳೆ ಪುರವಂತರು ಸ್ವಾಮಿಯ ಮಹಿಮೆಯನ್ನು ವಡಪುಗಳನ್ನು ಹೇಳುತ್ತಾ ಕಲಾ ಪ್ರದರ್ಶನ ನೀಡಿದರು. ಹರಕೆ ಹೊತ್ತ ಭಕ್ತರು ಶಸ್ತ್ರ ಹಾಕಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.ಕೆರೆ ಅಂಗಳದಲ್ಲಿ ಅಣಿಗೊಳಿಸಿದ್ದ ಅಗ್ನಿಕುಂಡಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸುತ್ತಿದ್ದಂತೆ ಸ್ವಾಮಿಯ ಪಲ್ಲಕ್ಕಿ ಹೊತ್ತ ಭಕ್ತರು ಅಗ್ನಿ ಕುಂಡದಲ್ಲಿ ನಡೆದರು. ನಂತರ ಹರಕೆ ಹೊತ್ತ ಭಕ್ತರು ನಿಗಿನಿಗಿ ಕೆಂಡ ತುಳಿದು ಭಕ್ತಿಯನ್ನು ಸಮರ​‍್ಿಸಿದರು. ಅಗ್ನಿ ಹಾಯುವ ಕಾರ್ಯಕ್ರಮ ನೋಡಲು ಅಪಾರ ಜನರು ಆಗಮಿಸಿದ್ದರು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.ದೇಗುಲದಲ್ಲಿ ಅನ್ನ ಸಂತರೆ​‍್ಣ ಹಮ್ಮಿಕೊಳ್ಳಲಾಗಿತ್ತು.ರಾತ್ರಿ ಸ್ಥಳೀಯ ಕಲಾವಿದರಿಂದ ನಾಟಕವನ್ನು ಆಯೋಜಿಸಲಾಗಿತ್ತು.