ಅಭಿವೃದ್ಧಿ ಕಾರ್ಯಗಳಲ್ಲಿ ಸಮಾಜದ ಸಹಕಾರ ಅಗತ್ಯ: ಅರವಿಂದ ಬೆಲ್ಲದ

ಲೋಕದರ್ಶನ ವರದಿ

ಧಾರವಾಡ 13:  ಅಭಿವೃದ್ಧಿ ಕಾರ್ಯಗಳಲ್ಲಿ ಸಮಾಜದ ಹಾಗೂ ಸಾರ್ವಜನಿಕರ ಸಹಭಾಗಿತ್ವ, ಸಹಕಾರ ಅಗತ್ಯ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಅವರು ಇಲ್ಲಿಯ ಹೊಸಯಲ್ಲಾಪುರ ಲಿಂಗಾಯತ ರುದ್ರಭೂಮಿಯಲ್ಲಿ ಶಾಸಕರ ಅನುದಾನದಡಿ ನಿಮರ್ಿಸಿದ ತಂಗುದಾಣ ಹಾಗೂ ಚಿತಾಗಾರ ಕಟ್ಟಡಗಳ ಹಾಗೂ ವನಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಭಿವೃದ್ಧಿ ಕೇವಲ ನಗರಗಳಲ್ಲಿಯ ಮೂಲಭೂತ ಸೌಲಭ್ಯಗಳಿಗಷ್ಟೇ ಸೀಮಿತಗೊಳ್ಳಬಾರದು. ಯಾವ ರುದ್ರಭೂಮಿಗಳೂ ಸಹ ಸೌಲಭ್ಯವಂಚಿತವಾಗದೇ ಅವುಗಳಿಗೂ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ದಿಶೆಯಲ್ಲಿ ಸರಕಾರ, ಸಂಘ, ಸಂಸ್ಥೆಗಳು, ಸಮುದಾಯ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಜನಪ್ರತಿನಿಧಿಗಳು ಅಧಿಕಾರ ಇದ್ದಾಗ ಜನಮಾನಸದಲ್ಲಿ ಉಳಿಯುವಂಥ ಅಭಿವೃದ್ಧಿ ಕಾರ್ಯ ಹಾಗೂ ಸೇವೆ ಮಾಡುವುದು ಮುಖ್ಯ. ನಿಟ್ಟಿನಲ್ಲಿ ತಾವು ಸಮಾಜದ ಸವರ್ಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿರುವುದಾಗಿ ಹೇಳಿದರು. ಹೊಸಯಲ್ಲಾಪುರ ರುದ್ರಭೂಮಿಯು ಮಾದರಿ ರುದ್ರಭೂಮಿ ಎನ್ನುವಂತೆ ಮಾಡುವ ದಿಶೆಯಲ್ಲಿ ಸಮಗ್ರ ನೀಲನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ಅಗತ್ಯಕ್ಕನುಗುಣವಾಗಿ ಸರ್ವರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳಿದರು.

 ಅತಿಥಿಯಾಗಿ ಆಗಮಿಸಿದ್ದ ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಘುನಾಥ ಲಕ್ಕಣ್ಣವರ ಮಾತನಾಡಿ, ಜನಪ್ರತಿನಿಧಿಗಳಾದ ನಾವು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಲೇಪನ ಇಲ್ಲದೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಮಾಡಲು ಸಾಧ್ಯ. ಇದಕ್ಕೆ ಪಕ್ಷ ರಾಜಕೀಯ ಬದಿಗಿಟ್ಟು ಎಲ್ಲ ಪಕ್ಷದವರು ಒಟ್ಟಾಗಿ ಕಾರ್ಯ ಮಾಡಿದ್ದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಣ್ಣ ಬೆಲ್ಲದ ಮಾತನಾಡಿ, ಪಕ್ಷಭೇದ ಮರೆತು ರುದ್ರಭೂಮಿ ಅಭಿವೃದ್ಧಿಯಲ್ಲಿ ಕಾರ್ಯ ಮಾಡಿದ ಮಾಜಿ ಸಚಿವರಾದ ಎಸ್. ಆರ್. ಮೋರೆ, ವಿನಯ ಕುಲಕಣರ್ಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮಾಜಿ ಪಾಲಿಕೆ ಸದಸ್ಯ ಅಶೋಕ ನಿಡವಣಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಕಳೆದ ಹಲವಾರು ವರ್ಷಗಳಿಂದ ಸಮಾಜದ ಪ್ರಮುಖರಾದ ದಿ. ಯಲ್ಲಪ್ಪಗೌಡ್ರು ಪಾಟೀಲ, ದಿ. ಈರಣ್ಣ ಹೊಸಕುಂಬಾರ ಹಾಗೂ ಎಂ. ಸಿ. ಹೆಗಡಿ, ಸಿದ್ಧಣ್ಣ ನಟೇಗಲ್ಲ, ಸಂಗಮೇಶ್ವರಯ್ಯ ಲಿಂಬಣ್ಣದೇವರಮಠ ಸೇರಿದಂತೆ ಅನೇಕ ಮಹನೀಯರ ಶ್ರಮ, ಕೊಡುಗೆಯನ್ನು ಸ್ಮರಿಸಿ, ರುದ್ರಭೂಮಿ ಸುಸ್ಥಿತಿಯಲ್ಲಿ ಇರುವಂತೆ ಸಮಿತಿ ತನ್ನ ಕಾರ್ಯ ಮುಂದುವರೆಸಿಕೊಂಡು ಹೋಗುವುದು. ಇದಕ್ಕೆ ಸಮಾಜದ ಹಾಗೂ ಅಕ್ಕಪಕ್ಕದವರ ಸಹಕಾರ ಕೋರಿದರು.

ರುದ್ರಭೂಮಿ ಅಭಿವೃದ್ಧಿಗೆ ಕೈಜೋಡಿಸಿ ಸಮನ್ವಯ ಸಹಕಾರ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ ಎಸ್. ಹಾಗೂ ವ್ಹಿ. ಎನ್. ಡುಮ್ಮಗೋಳ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ ಅವರು, ರುದ್ರಭೂಮಿಗಳು ಪವಿತ್ರ ಸ್ಥಳ. ಅವುಗಳ ನಿರ್ವಹಣೆ, ಪರಿಸರ ರಕ್ಷಣೆ ಬಹುಮುಖ್ಯ. ದಿಸೆಯಲ್ಲಿ ಅರಣ್ಯ ಇಲಾಖೆಯಿಂದ ವಿವಿಧ ಸಸಿಗಳನ್ನು ಸ್ಥಳಗಳಲ್ಲಿ ನೆಟ್ಟು ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಪ್ರಾಮಾಣಿಕವಾಗಿ ಸಹಕಾರ ನೀಡುವುದಾಗಿ ಹೇಳಿ ಸಮಿತಿ ಗೌರವಕ್ಕೆ ಕೃತಜ್ಞತೆ ಸಲ್ಲಿಸಿ, ರುದ್ರಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲು ಸಹಕರಿಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷ ಎಂ. ಸಿ. ಹೆಗಡಿ, ಸಮಿತಿ ಹಿರಿಯ ಸದಸ್ಯ ಸಿದ್ದಣ್ಣ ನಟೇಗಲ್ಲ ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದಶರ್ಿ ಬಸವರಾಜ ತಾಳಿಕೋಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದಶರ್ಿ ಜಿ. ಎಸ್. ಬ್ಯಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ಸಹಕಾರ್ಯದಶರ್ಿ ಕೆ. ಎಂ. ಕೊಪ್ಪದ, ಸದಸ್ಯರಾದ ಉಮೇಶ ಎಲೇದಹಳ್ಳಿ, ನಿಂಗನಗೌಡ ಎಚ್. ಪಾಟೀಲ, ಚನ್ನಪ್ಪ ಎನ್. ಹೆಂಬ್ಲಿ ಅತಿಥಿಗಳನ್ನು ಗೌರವಿಸಿದರು. ಕೋಶಾಧ್ಯಕ್ಷ ಸಂಗಮೇಶ್ವರಯ್ಯ ಲಿಂಬಣ್ಣದೇವರಮಠ ವಂದಿಸಿದರು.

ಬಸನಗೌಡ ಪಾಟೀಲ, ಚನಬಸಪ್ಪ ಮರದ, ಬಸವರಾಜ ತಾಯಣ್ಣವರ, ಎಸ್. ಜಿ. ಪಾಟೀಲ, ಅಶೋಕ ನಿಡವಣಿ, ಹನುಮಂತಗೌಡ ಪಾಟೀಲ, ವೀರಣ್ಣ ಒಡ್ಡೀನ, ಸದಾನಂದ ಶಿವಳ್ಳಿ, ಉಳವಪ್ಪ ಪಟ್ಟಣಶೆಟ್ಟಿ, ಎಂ. ಬಿ. ಹೆಗ್ಗೇರಿ, ಬಾಪುಗೌಡ ಪಾಟೀಲ, ಶೇಖಪ್ಪ ನುಗ್ಗಿಕೇರಿ, ಶಂಕರ ಪಟ್ಟಣಶೆಟ್ಟಿ, ಬಸವರಾಜ ಲೋಕೂರ, ಕಲ್ಲಪ್ಪ, ಬಾಲು, ಬಸವರಾಜ, ಮಠಪತಿ ಮುಂತಾದವರು ಭಾಗವಹಿಸಿದ್ದರು.