ಕೆಎಂಎಫ್ ಅಧ್ಯಕ್ಷ ವಿವೇಕರಾವ ಪಾಟೀಲ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳು

ಲೋಕದರ್ಶನ ವರದಿ

ಬೆಳಗಾವಿ,22: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಇದರ ಅಧ್ಯಕ್ಷ ವಿವೇಕರಾವ್ ಪಾಟೀಲ ಇವರ ಅವಧಿಯಲ್ಲಿ ಒಕ್ಕೂಟದಲ್ಲಿ ಹಲವಾರು ರೀತಿಯ ಅಭಿವೃದ್ಧಿ ಯೊಜನೆಗಳು ಜಾರಿಯಾಗಿವೆ. 

ಪ್ಲಕ್ಷಿ ಘಟಕ : ಒಕ್ಕೂಟದಲ್ಲಿ 80,000 ಲೀಟರ ಸಾಮಥ್ರ್ಯದ ಪ್ಲಕ್ಷಿ ಘಟಕವನ್ನು ಕೇಂದ್ರ ಸಕರ್ಾರ ಹಾಗೂ ಕಹಾಮದ ಅನುದಾನದಲ್ಲಿ ಒಟ್ಟಾರೆ ರೂ. 21 ಕೋಟಿ ಮೌಲ್ಯದ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ ಸ್ಥಾಪಿಸಲಾಗಿದೆ. (ಕೇಂದ್ರ ಸಕರ್ಾರದ ಅನುದಾನ ರೂ. 10 ಕೋಟಿ, ಕಹಾಮ ಅನುದಾನ ರೂ. 7 ಕೋಟಿ ಮತ್ತು ಒಕ್ಕೂಟದಿಂದ ಭರಿಸಿದ ಮೊತ್ತು ರೂ 4 ಕೋಟಿ)

ರಾಯಬಾಗ ಹಾಲು ಸಂಸ್ಕರಣಾ ಘಟಕ: ಒಕ್ಕೂಟಕ್ಕೆ ಮುಂಬರುವ ದಿನಗಳಲ್ಲಿ ಹೆಚ್ಚುವರಿ ಹಾಲು ಸಂಗ್ರಹವಾಗುವ ಸಾಧ್ಯತೆಯನ್ನು ಮನಗಂಡು ರಾಯಬಾಗ ಪಟ್ಟಣದಲ್ಲಿ 60000 ಲೀಟರ್ ಸಾಮಥ್ರ್ಯದ ಸಮಸ್ಕರಣಾ ಘಟಕದ ನಿಮರ್ಾಣ ಕಾರ್ಯವನ್ನು ಕೈಗೊಂಡಿದ್ದು, ಸದರಿ ಘಟಕದ ನಿಮರ್ಾಣ ವೆಚ್ಚ ಅಂದಾಜು ರೂ. 10 ಕೋಟಿ ಗಳಷ್ಟು ಇರುತ್ತದೆ. 

ಹುಲಿಕಟ್ಟಿ ಶಿಥಲೀಕರಣ ಘಟಕ : ಕಿತ್ತೂರ ಹಾಗೂ ಬೈಲಹೊಂಗಲ ತಾಲೂಕಗಳ ಹಲವಾರು ಹಾಲು ಉತ್ಪಾದಕರ ಸಂಘಗಳು ಕೇಂದ್ರ ಡೈರಿಯಿಂದ 60 ರಿಂದ 80 ಕಿ.ಮೀ, ದೂರದಲ್ಲಿದ್ದು, ಅವುಗಳಿಂದ ಸಂಗ್ರಹಿಸಿದ ಹಾಲಿನ್ನು ಕೇಂದ್ರ ಡೈರಿಗೆ ಸಾಗಾಣಿಕೆ ಮಾಡುವಲ್ಲಿ ಸಾಗಾಣಿಕೆ ವೆಚ್ಚವು ಹೆಚ್ಚಾಗುತ್ತಲಿದ್ದು, ಮತ್ತು ಹಾಲಿನ ಗುಣಮಟ್ಟಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ಹುಲಿಕಟ್ಟಿಯಲ್ಲಿ 30000 ಲೀಟರ್ ಸಾಮಥ್ರ್ಯದ ಶೀಥಲೀಕರಣ ಕೇಂದ್ರವನ್ನು ನಿಮರ್ಿಸುವ ಕಾರ್ಯವನ್ನು ರೂ. 1 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. 

ರಾಮದುರ್ಗ ಶೀಥಲೀಕರಣ ಕೇಂದ್ರಕ್ಕೆ: ಸದರಿ ತಾಲೂಕಿನಲ್ಲಿ ಹಾಲು ಸಂಗ್ರಹಣೆ ಹೆಚ್ಚಾಗುತ್ತಿಲಿದ್ದು, ಹೆಚ್ಚುವರಿ ಹಾಲುವನ್ನು ಸಂಸ್ಕರಿಸಲು 30000 ಲೀಟರ್ ಸಾಮಥ್ರ್ಯದ ಶಿಥಲೀಕರಣ ಘಟಕವನ್ನು ರೂ. 2 ಕೋಟಿ ವೆಚ್ಚದಲ್ಲಿ ನಿಮರ್ಿಸುವ ಕಾರ್ಯ ಪ್ರಗತಿಯಲ್ಲಿದೆ. 

ಕೇಂದ್ರ ಡೈರಿ: ಒಕ್ಕೂಟದ ವ್ಯಾಪ್ತಿಯ ಸಂಘದಲ್ಲಿ ಹಾಲಿ ಉತ್ಪಾದನೆ ಹಾಗೂ ಸಂಗ್ರಹನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿಲಿದ್ದು, ಹೆಚ್ಚುವರಿಯಾಗಿ ಬರುವ ಹಾಲಿನ ಗುಣಮಟ್ಟವನ್ನು ಸುವ್ಯವಸ್ಥಿತವಾಗಿ ಕಾಪಾಡಲು ರೂ. 3 ಕೋಟಿ ವೆಚ್ಚವನ್ನು ಮಾಡಿ ಸಿಥಲೀಕರನ ವ್ಯವಸ್ಥೆಯನ್ನು ಕೇಂದ್ರ ಡೈರಿಯಲ್ಲಿ. ಸಂಸ್ಥೆಯು ಐಎಸ್ಒ  22000   2005 ಪ್ರಮಾಣಿಕೃತ ಪತ್ರವನ್ನು ಹೊಂದಿದೆ. 

ಸಂಸ್ಥೆಯು ಎಫ್ಎಸ್ಎಸ್ಎಆಯ್ ಧೃಡೀಕರಣ ಪತ್ರವನ್ನು ಹೊಂದಿದೆ. ಹಾಲು ಶೇಖರಣೆಯ ಶೇಕಡಾವಾರು ಬೆಳವಣಿಗೆಯಲ್ಲಿ ಒಕ್ಕೂಟವು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. (26%) ಒಕ್ಕೂಟವು ಹಮ್ಮಿಕೊಂಡಿರು ಗ್ರಾಮೀಣ ಮಾರುಕಟ್ಟೆ ಕಾರ್ಯಕ್ರಮವು ಯಶಸ್ವಿಯಾಗಿದ್ದು, ವರ್ಷಕ್ಕೆ ರೂ 75 ಲಕ್ಷಗಳಷ್ಟು ಹಾಲಿನ ಉತ್ಪನ್ನಗಳ ಮಾರಾಟ ಮಾಡಿರುತ್ತದೆ. 

ಮುಂಬರುವ ದಿನಗಳಲ್ಲಿ ಅಂದಾಜು 3 ಕೋಟಿ ರೂ, ವೆಚ್ಚದಲ್ಲಿ ಹೊಸದಾಗಿ ಐಸ್ಕ್ರೀಮ್ ಘಟಕವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. 

ಮಲೀನ ತ್ಯಾಜ್ಯ ನಿರ್ವಹಣಾ ಗಟಕ (ಇಟಿಪಿ) _ ಕೇಂದ್ರ ಡೈರಿಯಲ್ಲಿ ಹಾಲಿ ಸಂಸ್ಕರಣೆ ಪ್ರಕ್ರಿಯಲ್ಲಿ ಉಂಟಾಗು ಮಲೀನ ತ್ಯಾಜ್ಯವನ್ನು ಆಧುನಿಕ ಪದ್ಧತಿಯಲ್ಲಿ ಸಂಸ್ಕರಿಸುವ ಘಟಕವನ್ನು ರು 50 ಲಕ್ಷ ವೆಚ್ಚದಲ್ಲಿ ಅಭಿಚೃದ್ಧಿಪಡಿಸಲಾಗಿದೆ.