ದೇವರಹಿಪ್ಪರಗಿ ತಾಲೂಕು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ದೇವರಹಿಪ್ಪರಗಿ 14 :ಡಿಸೆಂಬರ್ 27 ರಂದು ನಡೆಯಲಿರುವ ದೇವರಹಿಪ್ಪರಗಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಮಾದರಿ ಸಮ್ಮೇಳನವನ್ನಾಗಿ ವಿಜೃಂಭಣೆಯಿಂದ ಆಚರಿಸೋಣ ಹಾಗೂ ನಾವೆಲ್ಲರೂ ಸಮ್ಮೇಳನದ ಯಶಸ್ಸಿಗೆ ಅವಿರತವಾಗಿ ಶ್ರಮಿಸೋಣ ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು. ದೇವರಹಿಪ್ಪರಗಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದರು.ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಕುದರಿಯವರು ಸಮ್ಮೇಳನದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸೋಣ ಹಾಗೂ ಅರ್ಥಪೂರ್ಣವಾಗಿ ಗೋಷ್ಟಿಗಳನ್ನು ಹಮ್ಮಿಕೊಳ್ಳೋಣ ಎಂದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸೀರ ಅಹ್ಮದ್ ಬೇಪಾರಿ,ಶಿಕ್ಷಕರ ಸಂಘದ ಅಧ್ಯಕ್ಷ ಎ ಎಚ್ ವಾಲೀಕಾರ,ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ. ಬಿರಾದಾರ,ಗೌರವ ಕಾರ್ಯದರ್ಶಿ ಅರುಣ ಕೋರವಾರ ಮಾತನಾಡಿದರು.ಇದೇ ಸಂದರ್ಭದಲ್ಲಿ ಗುತ್ತಿಗೆದಾರರಾದ ಸಿ.ಬಿ. ಅಸ್ಕಿ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ,ಯಶವಂತರಾವ ಸೇಠ್,ಕಾಶೀನಾಥ ತಳಕೇರಿ,ಪಿ. ಎಸ್. ಮಿಂಚನಾಳ,ಪ್ರಕಾಶ ಮಲ್ಹಾರಿ,ಕಾಶೀನಾಥ ಸಾಲಕ್ಕಿ,ಕಾಶೀನಾಥ ಕೋರಿ,ಮುನ್ನಾ ಮಳಖೇಡ,ಎಸ್.ಎಸ್. ಸಾತಿಹಾಳ,ಶ್ರೀಕಾಂತ ರಾಠೋಡ,ಪಿ ಸಿ ತಳಕೇರಿ,ರಾವುತ ತಳಕೇರಿ,ಮುರ್ತುಜಾ ತಾಂಬೋಳಿ,ರಾಘವೇಂದ್ರ ಗುಡಿಮನಿ,ಸಿದ್ದು ಮೇಲಿನಮನಿ,ಬಸವರಾಜ ತಾಳಿಕೋಟಿ,ಸಂಗಣ್ಣ ತಡವಲ,ಮಲಕು ಸುರಗಿಹಳ್ಳಿ,ಎಸ್.ಜಿ. ತಾವರಖೇಡ,ಕೆ. ಎಮ್. ನಂದಿ,ಗೊಲ್ಲಾಳ ಬಿರಾದಾರ,ಸದಾಶಿವ ಗುಡಿಮನಿ,ರವಿ ಕೊಟೀನ,ಎಸ್. ಎಮ್. ನಂದ್ಯಾಳ,ಅಣ್ಣು ಭಜಂತ್ರಿ,ಶಿವಶರಣ ಪೂಜಾರಿ, ಶಿವರಾಜ ತಳವಾರ,ದಸ್ತಗೀರ ಬಗಲಿ,ಸುರೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.