ನವದೆಹಲಿ, ಜ ೩೦: ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯ ಪ್ರದೇಶದಲ್ಲಿ ಗುರುವಾರ ಸಿಎಎ ಪ್ರತಿಭಟನಾಕಾರರಮೇಲೆ ಗುಂಡು ಹಾರಿಸಿ ಓರ್ವ ವಿದ್ಯಾರ್ಥಿಯನ್ನು ಗಾಯಗೊಳಿಸಿದ್ದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಸಿಎಎ ಪ್ರತಿಭಟನಾಕಾರರು ರಾಜಘಾಟ್ ನತ್ತ ತೆರಳುತ್ತಿದ್ದಾಗ, ಸಾಕಷ್ಟು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಸುತ್ತಮುತ್ತ ನಿಂತಿದ್ದರೂ, ರಸ್ತೆಯ ನಡುವೆ ಠಳಾಯಿಸಿ ಬಂದೂಕು ಕೈಯಲ್ಲಿ ಹಿಡಿದು ಘೋಷಣೆ ಕೂಗಿತ್ತಾ ಗುಂಡು ಹಾರಿಸಿದ್ದ ಈ ಯುವಕ ತನ್ನ ಕು ಕೃತ್ಯವನ್ನು, ಪೇಸ್ ಬುಕ್ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಫೇಸ್ ಬುಕ್ ನಲ್ಲಿ ಈತನ “ಹೆಸರು ರಾಮ ಭಕ್ತ್ ಗೋಪಾಲ್’ ಎಂದು ಬರೆದುಕೊಂಡಿದ್ದಾನೆ. ಪ್ರತಿಭಟನಾ ಸ್ಥಳಕ್ಕೆ ತೆರಳಿ, ಫೇಸ್ ಬುಕ್ ನಲ್ಲಿ ತನ್ನ ಕೃತ್ಯ ನೇರ ಪ್ರಸಾರವಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದ, ಪ್ರತಿಭಟನಕಾರರ ವಿರುದ್ದ ಘೋಷಣೆ ಕೂಗಿ ಅವರ ಮೇಲೆ ಗುಂಡು ಹಾರಿಸಿದ್ದ, ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದು, ಈತನ ಫೇಸ್ ಬುಕ್ ಪುಟಗಳಲ್ಲಿ ಸಿಎಎ ಪರ ಲೇಖನಗಳು ಯತೇಚ್ಛವಾಗಿ ತುಂಬಿವೆ.